ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ... ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 20-25 ವಯಸ್ಸು ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ. ಆದರೆ ನಿಮಗೆ ಗೊತ್ತೆ? ಹೇರ್ಡೈ ಅತಿಯಾದ ಬಳಕೆಯಿಂದ ಪ್ರಾಣಕ್ಕೂ ಅಪಾಯ ಆಗಬಹುದು ಎಂದು ಇದಾಗಲೇ ಹಲವು ಅಧ್ಯಯನಗಳಿಂದ ಸಾಬೀತಾಗಿವೆ.
28
ಬಿಳಿ ಕೂದಲಿನಿಂದ ಹಿಂಸೆ
ಕೂದಲು ಬಿಳಿಯಾದರೆ ಅದೇನೋ ಹಿಂಸೆ ಎನ್ನುವ ರೀತಿ ಹಲವರಿಗೆ ಅನ್ನಿಸುವುದು ಉಂಟು. ಇದು ನಮ್ಮ ಜೀನ್ಸ್, ಆಹಾರ, ವಾತಾವರಣ, ಲೈಫ್ಸ್ಟೈಲ್, ಬಳಸುವ ಕಲುಷಿತ ನೀರು ಎಲ್ಲದಕ್ಕೂ ಸೇರಿದ್ದರೂ ಕೂದಲು ಬಿಳಿ ಎನ್ನುವುದು ಹಲವರಿಗೆ ನುಂಗಲಾಗದ ತುತ್ತು. ಇದೇ ಕಾರಣಕ್ಕೆ ಹೇರ್ಡೈ ಇಂದು ಲಕ್ಷಾಂತರ ಕೋಟಿ ವ್ಯವಹಾರವನ್ನು ಕುದುರಿಸಿಕೊಳ್ಳುತ್ತಿದೆ. ಇದರ ಜಾಹೀರಾತಿಗಾಗಿ ಕೋಟಿ ಕೋಟಿ ಪಡೆದು ಸ್ಟಾರ್ ನಟರೇ ಬರುತ್ತಾರೆ.
38
ಜನರನ್ನು ಮರುಳು ಮಾಡುವ ಜಾಹೀರಾತುಗಳು
ಹೇರ್ ಕಲರ್ನಿಂದ ಕ್ಯಾನ್ಸರ್ ಬರುತ್ತಿವೆ. ಬ್ಲಡ್ ಕ್ಯಾನ್ಸರ್ ಹೆಚ್ಚುತ್ತಿದೆ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ.
ನ್ಯಾಚುಲರ್, ಅಲೋವಿರಾ... ಅದೂ ಇದೂ ಎಂದೆಲ್ಲಾ ಲೇಬಲ್ ಕೊಟ್ಟು ಸ್ಟಾರ್ ನಟ-ನಟಿಯರನ್ನು ಬಳಸಿಕೊಂಡು ಜನರನ್ನು ಮರುಳು ಮಾಡಲಾಗುತ್ತಿದೆ. ಆದರೆ ಇಂದು ವಿಪರೀತವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ಗೆ ಈ ಕೆಮಿಕಲ್ ಹೇರ್ಡೈ ಕೂಡ ಕಾರಣ ಎನ್ನುವುದು ಆಘಾತಕರಾಗಿ ಅಂಶವನ್ನು ಸಂಶೋಧಕರೇ ಸಾರಿ ಸಾರಿ ಹೇಳಿದ್ದಾರೆ. ಅದರಲ್ಲಿಯೂ ಮಹಿಳೆಯರಿಗೆ ಬ್ರೆಸ್ಟ್ ಕ್ಯಾನ್ಸರ್ ಹೆಚ್ಚುವುದಕ್ಕೆ ಇದರ ಪಾಲು ಕೂಡ ಬಹು ದೊಡ್ಡದಿದೆ ಎನ್ನಲಾಗುತ್ತಿದೆ. ಆದರೆ ಹೇರ್ಡೈ ಅಂತೂ ಬೇಕೇ ಬೇಕು, ಅದು ಇಲ್ಲದಿದ್ದರೂ ಜೀವನ ಅಸಾಧ್ಯ ಎನ್ನುವಂತಾಗಿದೆ. ಈ ಬಗ್ಗೆ ಇದಾಗಲೇ ಕೆಲವು ಆಯುರ್ವೇದ ತಜ್ಞರು ಸುಲಭದ ಮಾರ್ಗಗಳನ್ನು ತಿಳಿಸಿದ್ದಾರೆ.
58
ನಟಿ ಭಾರ್ತಿ ಸಿಂಗ್ ಕೂದಲ ರಹಸ್ಯ
ಇದೀಗ, ಕಮೀಡಿಯನ್ ಭಾರತಿ ಸಿಂಗ್ ಅವರು ತಾವು ಮನೆಯಲ್ಲಿಯೇ ಬಳಸುವ ಅದರಲ್ಲಿಯೂ ಹೆಚ್ಚಾಗಿ ತಮ್ಮ ರಾಜ್ಯ ಪಂಜಾಬಿಗರು ಮನೆಯಲ್ಲಿಯೇ ತಯಾರಿಸುವ ಹೇರ್ಡೈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಬ್ಲೇ ನೂರ್ ಎನ್ನುವ ಪುಟದಲ್ಲಿ ಇದನ್ನು ಶೇರ್ ಮಾಡಲಾಗಿದೆ. ತಾವು ಯಾವುದೇ ಕೆಮಿಕಲ್ ಇರುವ ಹೇರ್ಡೈ ಬಳಸುವುದಿಲ್ಲ ಎಂದಿರುವ ನಟಿ ಅದೇ ರೀತಿ ಹಲವರು ಮನೆಯಲ್ಲಿಯೇ ತಯಾರಿಸುವ ಹೇರ್ಡೈ ಬಗ್ಗೆ ವಿವರಣೆ ನೀಡಿದ್ದಾರೆ.
68
ಹೆನ್ನಾ ಮಿಕ್ಸ್ ನಿಂದ ಕಪ್ಪು ಕೂದಲು
ತಮ್ಮ ಮನೆ ಸೇರಿದಂತೆ ಪಂಜಾಬ್ನಲ್ಲಿ ಮೊದಲಿನಿಂದಲೂ ಎಲ್ಲರೂ ಹೆನ್ನಾ ಮಿಕ್ಸ್ ಬಳಸುತ್ತಾರೆ. ತಾವೂ ಇದನ್ನೇ ಬಳಸುವುದು. ಇದರಿಂದಾಗಿ ಹೇರ್ ಡೈ ಮಾಡುವ ಅಗತ್ಯವೇ ಬಂದಿಲ್ಲ ಎಂದಿರುವ ನಟಿ, ಇದರ ಹೇರ್ ಪ್ಯಾಕ್ ತಯಾರಿಸುವ ಬಗ್ಗೆ ಹಾಗೂ ಮಿಕ್ಸಿಂಗ್ ಬಗ್ಗೆ ವಿವರಣೆ ನೀಡಿದ್ದಾರೆ.
78
ಕಪ್ಪು ಕೂದಲಿನ ರಹಸ್ಯ
ಹೆನ್ನಾ ಮಿಕ್ಸ್ ತಯಾರಿಸಲು ರಾತ್ರಿ ಮಲಗುವ ಮೊದಲು ಕಬ್ಬಿಣದ ಬಾಣಲಿಯಲ್ಲಿ ಮೆಹಂದಿ ಪುಡಿ ಹಾಕಿ ಅದನ್ನು ಟೀ ಡಿಕಾಕ್ಷನ್ ಜೊತೆ ಬೆರೆಸಿ ಅಲೋವೇರಾ ಜೆಲ್, ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇಡಬೇಕು. ಮರುದಿನ ಇದನ್ನು ಕೂದಲಿಗೆ ಹಚ್ಚಿ 2 ಗಂಟೆ ಬಳಿಕ ಹೇರ್ ವಾಶ್ ಮಾಡಬೇಕು ಎಂದಿದ್ದಾರೆ.
88
ಕಪ್ಪು ಕೂದಲಿನ ರಹಸ್ಯ
ಇದೇ ತಮ್ಮ ಕಪ್ಪು ಕೂದಲಿನ ರಹಸ್ಯ ಎಂದೂ ಹೇಳಿದ್ದಾರೆ ನಟಿ. ಅಂದಹಾಗೆ ಹೆನ್ನಾ ಪೌಡರ್ನಲ್ಲಿಯೂ ಈಗ ಕೆಮಿಕಲ್ ಮಿಕ್ಸ್ ಮಾಡುವುದು ಮಾಮೂಲಾಗಿದೆ. ಆದ್ದರಿಂದ ಗಂಥಿಗೆ ಅಂಗಡಿಯಲ್ಲಿ ಇದನ್ನು ಕೊಂಡು ತಂದರೆ ಒಳಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.