ಕಿತ್ತಳೆ ತಿಂದ್ರೆ ಕಡಿಮೆಯಾಗಲ್ಲ ಹೆಚ್ಚಾಗುತ್ತೆ ಜ್ವರ… ಈ ಹಣ್ಣುಗಳ ಬಗ್ಗೆ 90% ಜನರಿಗೆ ಸತ್ಯವೇ ಗೊತ್ತಿಲ್ಲ!

Published : Dec 06, 2024, 01:02 PM ISTUpdated : Dec 07, 2024, 09:25 AM IST

ಹಣ್ಣುಗಳನ್ನು ತಿನ್ನುವ ಮೊದಲು, ಅವುಗಳನ್ನು ಯಾವುದಕ್ಕೆ ಬಳಸಲಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳಲೇಬೇಕು. ಏಕೆಂದರೆ ಕೆಲವೊಮ್ಮೆ ತಪ್ಪಾದ ಸಂದರ್ಭಗಳಲ್ಲಿ ತಪ್ಪು ಹಣ್ಣನ್ನು ತಿನ್ನುವುದು ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಹಣ್ಣುಗಳನ್ನು ತಿನ್ನುವುದಕ್ಕೆ ಸಂಬಂಧಿಸಿದ ಅಂತಹ 5 ಮಿಥ್ಯೆಗಳ ಬಗ್ಗೆ ಆಯುರ್ವೇದದಲ್ಲಿ ಏನು ಹೇಳಿದ್ದಾರೆ ನೋಡೋಣ.   

PREV
17
ಕಿತ್ತಳೆ ತಿಂದ್ರೆ ಕಡಿಮೆಯಾಗಲ್ಲ ಹೆಚ್ಚಾಗುತ್ತೆ ಜ್ವರ… ಈ ಹಣ್ಣುಗಳ ಬಗ್ಗೆ 90% ಜನರಿಗೆ ಸತ್ಯವೇ ಗೊತ್ತಿಲ್ಲ!

ಹಣ್ಣುಗಳನ್ನು ಪ್ರತಿದಿನ ತಿನ್ನಬೇಕು. ಇವು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು, ಹಾಗಾಗಿ ನೀವು ಪ್ರತಿದಿನ ಒಂದು ಬಟ್ಟಲು ಹಣ್ಣುಗಳನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಇದು ತೂಕ ಇಳಿಸಿಕೊಳ್ಳಲು (weight loss) ಸಹಾಯ ಮಾಡುತ್ತದೆ.  ಅಷ್ಟೇ ಅಲ್ಲ ಹಣ್ಣುಗಳು ದೇಹಕ್ಕೆ ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುತ್ತದೆ. ಅಲ್ಲದೆ, ಅವುಗಳ ಜಲಸಂಚಯನ ಮತ್ತು ನೈಸರ್ಗಿಕ ಸಕ್ಕರೆ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಶಕ್ತಿಯನ್ನು ನೀಡುತ್ತದೆ. ಆದರೆ ಹಣ್ಣಿನ ಬಗ್ಗೆ ಸಾಕಷ್ಟು ಸುಳ್ಳುಗಳಿವೆ. ಅವುಗಳನ್ನು ನೀವು ತಿಳಿದುಕೊಳ್ಳಲೇಬೇಕು. 

27

ಕಿತ್ತಳೆ ಹಣ್ಣನ್ನು ತಿನ್ನೋದ್ರಿಂದ ಜ್ವರ ಕಡಿಮೆಯಾಗುತ್ತೆ (fever) ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಇದು ತಪ್ಪು.  ಇದರಿಂದ ಜ್ವರ ಹೆಚ್ಚಾಗುತ್ತೆ. ಹಣ್ಣುಗಳ ಬಗ್ಗೆ ನೀವು ಸತ್ಯ ಎಂದು ನಂಬಿರುವ ಒಂದಿಷ್ಟು ಮಿಥ್ಯೆಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿಯಿರಿ. 

37

ಕಲ್ಲಂಗಡಿಗೆ ಸಂಬಂಧಿಸಿದ ಮಿಥ್ಯೆಗಳು
ಕಲ್ಲಂಗಡಿ ಬೇಸಿಗೆಯ (water melon) ಹಣ್ಣು, ಇದು ಸಾಕಷ್ಟು ನೀರನ್ನು ಹೊಂದಿರುತ್ತದೆ. ಇದು ಬೇಗನೆ ಜೀರ್ಣವಾಗುತ್ತದೆ ಮತ್ತು ಹೊಟ್ಟೆಗೂ ಕೂಡ ಹಗುರವಾಗಿರುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ಭಾರವಾದ ಆಹಾರವಾಗಿದ್ದು, ಜೀರ್ಣಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

47

ನೆಲ್ಲಿಕಾಯಿಗೆ ಸಂಬಂಧಿಸಿದ ಮಿಥ್ಯೆಗಳು
ನೆಲ್ಲಿಕಾಯಿ ಹುಳಿಯಾಗಿದೆ ಮತ್ತು ಇದರಲ್ಲಿ ನ್ಯಾಚುರಲ್ ಡಯಟರಿ ಆಸಿಡ್ ಇರುತ್ತೆ ಈ ಕಾರಣದಿಂದಾಗಿ, ಇದನ್ನು ತಿನ್ನುವುದು ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ಸತ್ಯವೆಂದರೆ ಇದು ಆಮ್ಲೀಯತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

57

ಕಿತ್ತಳೆಗೆ ಸಂಬಂಧಿಸಿದ ಮಿಥ್ಯೆಗಳು
ಕಿತ್ತಳೆ ತಿನ್ನುವುದರಿಂದ ಜ್ವರ ಕಡಿಮೆಯಾಗುತ್ತದೆ ಎಂದು ಜನರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಜೀವಸತ್ವ ಇರುತ್ತೆ, ಹಾಗಾಗಿ ಇದು ರೋಗವನ್ನು ಕಡಿಮೆ ಮಾಡುತ್ತದೆ ಎನ್ನುವ ನಂಬಿಕೆ ಜನರದ್ದು. ಆದರೆ ವಾಸ್ತವದಲ್ಲಿ, ಜ್ವರ ಇರೋವಾಗ ಕಿತ್ತಳೆ (orange) ಹಣ್ಣು ತಿನ್ನೋದ್ರಿಂದ ಪಿತ್ತರಸವನ್ನು ಹೆಚ್ಚಿಸುತ್ತದೆ, ಇದು ಜ್ವರವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.

67

ಮಾವಿನ ಹಣ್ಣಿಗೆ ಸಂಬಂಧಿಸಿದ ಮಿಥ್ಯೆಗಳು
ಮಾವಿನಹಣ್ಣು  (Mango) ಉಷ್ಣ ಗುಣವನ್ನು ಹೊಂದಿದೆ ಎಂಬುದು ಶುದ್ಧ ಸುಳ್ಳು. ಇದನ್ನು ತಿನ್ನುವುದರಿಂದ ದೇಹದಲ್ಲಿ ಶಾಖ ಹೆಚ್ಚಾಗುತ್ತದೆ. ಆದರೆ ಆಯುರ್ವೇದ ವೈದ್ಯರು ಹೇಳುವಂತೆ, ಮಾವಿನ ಹಣ್ಣು ತಿನ್ನೋದರಿಂದ ಹೊಟ್ಟೆ ತಂಪಾಗಿರುತ್ತೆ. 

77

ದಾಳಿಂಬೆ ಅತ್ಯುತ್ತಮ ಹಣ್ಣು
ದಾಳಿಂಬೆ ಹಣ್ಣನ್ನು ವೈದ್ಯರು ಆಯುರ್ವೇದದ ಅತ್ಯಂತ ನೆಚ್ಚಿನ ಹಣ್ಣು ಎಂದು ಹೇಳುತ್ತಾರೆ. ಇದು ದೇಹದ ಎಲ್ಲಾ ದೋಷಗಳನ್ನು ನಿವಾರಣೆ ಮಾಡುತ್ತೆ ಮತ್ತು ಜ್ವರವನ್ನು ಕಡಿಮೆ ಮಾಡುವ ಅತ್ಯುತ್ತಮ ಪರಿಹಾರವೆಂದು ದಾಳಿಂಬೆಯನ್ನು ಗುರುತಿಸಲಾಗುತ್ತದೆ.
 

click me!

Recommended Stories