ಬಾಯ್ ಫ್ರೆಂಡ್‌ವೀರ್ಯವೇ ಕೊರೋನಾಕ್ಕೆ ಔಷಧ, ವಾರಕ್ಕೆ ಮೂರು ಸಾರಿ!

First Published | May 3, 2020, 9:52 PM IST

ಕೊರೋನಾದಿಂದ ಪಾರಾಗಲು ಮಹಿಳೆ ಕಂಡುಕೊಂಡ ವಿಶಿಷ್ಟ ಔಷಧ/ ಗೆಳೆಯನ ವೀರ್ಯವೇ ಈಕೆಯ ಪರಮೌಷಧ/ ವೀರ್ಯದ ಸ್ಮೂದಿ ಮಾಡಿ ಕುಡಿಯುವ ಲಂಡನ್ ಮಹಿಳೆ

ಕೊರೋನಾದಿಂದ ಪಾರಾಗಲು ಒಬ್ಬೊಬ್ಬರು ಒಂದೊಂದು ಔಷಧಿಯ ಸುದ್ದಿ ಹೇಳುತ್ತಿದ್ದಾರೆ. ಆದರೆ ಈ ಮಹಿಳೆ ಮಾತ್ರ ತನ್ನದೇ ಸ್ವಂತ ಔಷಧ ಕಂಡುಕೊಂಡಿದ್ದಾರೆ. ಆದರೆ ಲಂಡನ್​​ನ ಈ ಮಹಿಳೆ ಕರೋನಾದಿಂದ ಪಾರಾಗಲು, ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳಲು ಕಂಡುಕೊಂಡ ಮಾರ್ಗವನ್ನು ಹೇಳುತ್ತೇವೆ ಕೇಳಿ .
ಟ್ರೇಸಿ ಕಿಸ್​ (32) ಎಂಬ ಮಕ್ಕಳ ತಾಯಿ ಪ್ರಯೋಗ ಮಾಡುತ್ತಿದ್ದಾರೆ. ಅವರು ಕುಡಿಯುತ್ತಿರುವ ಔಷಧಿ ಕೇಳಿದರೆ ಹೌಹಾರುತ್ತೀರಿ . ತನ್ನ ಸ್ನೇಹಿತನ ವೀರ್ಯದ ಸ್ಮೂದಿ ಮಾಡಿ ಕುಡಿಯುತ್ತ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡಿದ್ದಾರೆ.
Tap to resize

ಕಳೆದ ಮೂರು ವರ್ಷಗಳಿಂದ ಒಂದು ದಿನವೂ ನನಗೆ ಜ್ವರವಾಗಲಿ, ಶೀತವಾಗಲಿ ಬಂದಿಲ್ಲ ಎನ್ನುವ ಮಹಿಳೆ ಅದಾಕ್ಕೆ ವೀರ್ಯದ ಪರಿಣಾಮವೇ ಕಾರಣ ಎನ್ನುತ್ತಾರೆ. ಯಾಕೆಂದರೆ ಆಗಿನಿಂದಲೂ ನಾನು ನನ್ನ ಬಾಯ್​ಫ್ರೆಂಡ್​ನಿಂದ ವೀರ್ಯವನ್ನು ದಾನವಾಗಿ ಪಡೆದು, ಅದರೊಂದಿಗೆ ಬೆರ್ರಿ ಹಣ್ಣುಗಳು, ಬಾಳೆಹಣ್ಣು ಮತ್ತಿತರ ವಿಟಮಿನ್​ ಯುಕ್ತ ಹಣ್ಣುಗಳನ್ನು ಸೇರಿಸಿಕೊಂಡು ವಾರಕ್ಕೆ ಮೂರು ಬಾರಿ ಸೇವಿಸುತ್ತಾ ಬಂದಿದ್ದೇನೆ ಎಂದು ರಹಸ್ಯ ಬಹಿರಂಗ ಮಾಡ್ತಾರೆ.
ನಾನಿನ್ನೂ ಮಗುವಿಗೆ ಎದೆಹಾಲು ನೀಡುತ್ತಿರುವ ತಾಯಿ. ನನಗೆ ಜಾಸ್ತಿ ನ್ಯೂಟ್ರಿಷಿಯನ್ ಬೇಕು. ಹಾಗಾಗಿಯೇ ಈ ವೀರ್ಯದ ಸ್ಮೂದಿ ಕುಡಿಯುತ್ತಿದ್ದೇನೆ. ಇದು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ನಾನು 2017ರಿಂದಲೂ ಕುಡಿಯುತ್ತಿದ್ದೇನೆ.
ವೀರ್ಯದಿಂದ ತಮ್ಮ ಫೇಸ್​ಪ್ಯಾಕ್ ಮಾಡಿಕೊಳ್ಳುತ್ತಿದ್ದು, ಚರ್ಮದ ಹೊಳಪು ಹೆಚ್ಚಾಗಿದೆ ಎಂದು ಹಲವು ಉಪಯೋಗ ಬಿಚ್ಚಿಡುತ್ತಾರೆ.
ಅಷ್ಟೇ ಅಲ್ಲದೆ, ನಾನು ನನ್ನ ಸ್ನೇಹಿತನಿಂದ ಈ ವೀರ್ಯವನ್ನು ಪಡೆಯುತ್ತಿದ್ದೇನೆ. ಸ್ಮೂದಿ ತಯಾರು ಮಾಡಬೇಕೆಂದರೆ ನಾವು ಪಡೆಯುವ ವೀರ್ಯ ಆರೋಗ್ಯಕರವಾಗಿರಬೇಕು. ಹಾಗಾಗಿ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ವೈಜ್ಞಾನಿಕವಾಗಿ ಇದಕ್ಕೆ ಯಾವ ಪುರಾವೆ ಇಲ್ಲ. ಇದು ಆ ಮಹಿಳೆಯ ನಂಬಿಕೆ ಅಷ್ಟೇ. ಆದರೆ ಕೊರೋನಾ ಸಂದರ್ಭದಲ್ಲಿ ಹೀಗೊಂದು ಸುದ್ದಿಮಾಡಿದ್ದಾರೆ.

Latest Videos

click me!