ಕತ್ತೆ ಹಾಲು ದುಬಾರಿ ಅಂತ ಗೊತ್ತು, ಆದರೆ ಇಲಿ ಹಾಲಿನ ಬೆಲೆ ಕೇಳಿದ್ರಾ?

First Published | Sep 11, 2023, 5:26 PM IST

ನೀವು ಯಾವ ಹಾಲು ಕುಡಿಯುತ್ತೀರಿ? ಹಸುವಿನ ಹಾಲು, ಎಮ್ಮೆಯ ಹಾಲು? ಕತ್ತೆಯ ಹಾಲು? ಇವುಗಳಲ್ಲಿ ಯಾವುವುದಾದರಲ್ಲಿ ಒಂದಾದರೂ ಹಾಲು ಕುಡಿಯುತ್ತೀರಿ ಅಲ್ವಾ? ಆದರೆ ಯಾವತ್ತಾದರೂ ಇಲಿಯ ಹಾಲಿನ ಬಗ್ಗೆ ಹೇಳಿದ್ದೀರಾ? 
 

ನೀವು ವಿವಿಧ ರೀತಿಯ ಹಾಲು ಕುಡಿಯುತ್ತೀರಿ. ವಿವಿಧ ರೀತಿಯ ಹಾಲಿನ ಬಗ್ಗೆಯೂ ಕೇಳಿರುತ್ತಿರಿ ಅಲ್ವಾ?  ಹಸುವಿನ ಹಾಲು? ಮೇಕೆ ಹಾಲು? ಸೋಯಾ ಹಾಲು? ಇತ್ಯಾದಿ. ಆದರೆ ಯಾವ ಹಾಲು ಅತ್ಯಂತ ದುಬಾರಿ ಹಾಲು ಅನ್ನೋದು ನಿಮಗೆ ಗೊತ್ತಾ? ಕತ್ತೆಯ ಹಾಲು ಎಂದು ನೀವಂದ್ರೆ, ಅದು ಸುಳ್ಳು. ಯಾಕಂದ್ರೆ ಇಲಿ ಹಾಲು (Rat milk) ಇದಕ್ಕೆ ಉತ್ತರ.
 

ಶಾಕ್ ಆಯ್ತಾ? ಆದ್ರೆ ಇದು ನಿಜ, ಇಲಿ ಹಾಲು ತುಂಬಾ ದುಬಾರಿ. ಇದು ಏಕೆ ದುಬಾರಿ? 'ಇಲಿ ಹಾಲು' ಪಡೆಯುವುದು ಸುಲಭವಲ್ಲ. 30 ನಿಮಿಷಗಳ ಪ್ರಕ್ರಿಯೆಯಲ್ಲಿ ಇಲಿಯಿಂದ ಕೊಂಚ ಮಾತ್ರ ಹಾಲು ಉತ್ಪಾದಿಸಲು ಸಾಧ್ಯ. 1 ಲೀಟರ್ ಹಾಲು ಪಡೆಯಲು ಬರೋಬ್ಬರಿ ನಾಲ್ಕು ಸಾವಿರ ಇಲಿಗಳು (40thousand rats) ಬೇಕಾಗುತ್ತವೆ. ಈ ಇಲಿಗಳ 1 ಲೀಟರ್ ಹಾಲಿನ ಮೌಲ್ಯ 23 ಸಾವಿರ ಯುರೋಗಳು. ಅಂದರೆ ಬರೋಬ್ಬರಿ 18 ಲಕ್ಷ ರೂಪಾಯಿ.

Tap to resize

ಇಲಿ ಹಾಲನ್ನು ಸಂಶೋಧನೆಯ ಸಾಧನವಾಗಿ ಬಳಸಲಾಗುತ್ತದೆ. ಮಲೇರಿಯಾ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುವ ಔಷಧಿ, ವಸ್ತುಗಳನ್ನು ತಯಾರಿಸಲು ಇಲಿ ಹಾಲನ್ನು ಬಳಸಲಾಗುತ್ತಂತೆ. ಹಾಗಿದ್ದರೆ ವಿಜ್ಞಾನಿಗಳು ಹಸುವಿನ ಹಾಲಿನ ಬದಲು ಇಲಿಗಳ ಹಾಲನ್ನು ಏಕೆ ಬಳಸುತ್ತಾರೆ?

ಸಂಶೋಧಕರ ನೆಚ್ಚಿನ ಪ್ರಾಣಿ ಎಂದರೆ ಇಲಿ ಅನ್ನೋದು ಗೊತ್ತೇ ಇದೆ. ಏಕೆಂದರೆ ಇಲಿಗಳ ಡಿಎನ್ಎ (DNA) ಬಗ್ಗೆ ತುಂಬಾ ಕಡಿಮೆ ತಿಳಿದಿದೆ, ಇತರ ಯಾವುದೇ ಪ್ರಾಣಿಗಳ ಡಿಎನ್ಎಗಿಂತ ಹೆಚ್ಚು ಎಫೆಕ್ಟಿವ್. ಇದು ಮನುಷ್ಯನ ದೇಹಕ್ಕೆ ರಿಲೇಟ್ ಆಗಿರುತ್ತದೆ. ಆದ್ದರಿಂದ ಪ್ರಯೋಗದ ಫಲಿತಾಂಶಗಳನ್ನು ವಿಶ್ಲೇಷಿಸುವುದು ಸುಲಭವಾಗುತ್ತದೆ. ಎಲ್ಲಾ ಪ್ರಯೋಗಗಳಿಗೆ ಸಾವಿರಾರು ಪ್ರಾಣಿಗಳು ಬೇಕಾಗುತ್ತವೆ. ಏಕೆಂದರೆ ಸಾವಿರಾರು ಹಸುಗಳಿಗಿಂತ ಸಾವಿರಾರು ಇಲಿಗಳನ್ನು ನಿರ್ವಹಿಸುವುದು ಹೆಚ್ಚು ಪ್ರಾಯೋಗಿಕ.

ಇಲಿ ಹಾಲು ಅತ್ಯಂತ ದುಬಾರಿ (costly milk) ಹಾಲು. ಇದಕ್ಕೆ ಕಾರಣ ಏನು ಅನ್ನೋದನ್ನು ನೀವು ಈಗಾಗಲೇ ತಿಳಿದಿರುತ್ತೀರಿ. ಸಾವಿರಾರು ಇಲಿಗಳಿಂದ ಮಾತ್ರ ಒಂದು ಲೀಟರ್ ಹಾಲು ತಯಾರಿಸಾಲು ಸಾಧ್ಯ. ಹಾಗಾಗಿ ಈ ಹಾಲು ಹೆಚ್ಚು ದುಬಾರಿಯಾಗಿದೆ.  
 

ಹಾಗಿದ್ರೆ ಹೆಚ್ಚು ಹಾಲು ಉತ್ಪಾದಿಸುವ ಪ್ರಾಣಿ ಯಾವುದು? ಒಂದು ಹಸು (cow milk) ಒಂದು ವರ್ಷದಲ್ಲಿ ಸುಮಾರು 10 ಸಾವಿರ ಲೀಟರ್ ಹಾಲನ್ನು ಉತ್ಪಾದಿಸಬಹುದು. ಇದು ತೂಕಕ್ಕಿಂತ 7 ಪಟ್ಟು ಹೆಚ್ಚು. ಮೇಕೆ ಹಾಲು ವರ್ಷಕ್ಕೆ ಅವುಗಳ ತೂಕದ 12 ಪಟ್ಟು ಉತ್ಪಾದಿಸುತ್ತದೆ.

ನೀಲಿ ತಿಮಿಂಗಿಲವು (Blue whale) ಇದುವರೆಗಿನ ಎಂದೂ ಮುರಿಯದ ದಾಖಲೆ ನಿರ್ಮಿಸಿದೆ. ಒಂದು ದಿನದಲ್ಲಿ ನೀಲಿ ತಿಮಿಂಗಿಲವು 600 ಲೀಟರ್ ಹಾಲನ್ನು ಉತ್ಪಾದಿಸುತ್ತದೆ ಅಂದರೆ ನೀವು ನಂಬಲೇಬೇಕು. ಈ ಹಾಲು ತುಂಬಾ ಕೊಬ್ಬಿನಿಂದ ಕೂಡಿರುತ್ತದೆ., ಆದ್ದರಿಂದ ಮರಿ ತಿಮಿಂಗಿಲವು ದಿನಕ್ಕೆ 100 ಕೆಜಿ ತೂಕ ಹೆಚ್ಚಿಸಲು ಸಾಧ್ಯ.
 

ಮಲೇರಿಯಾ ರೋಗವನ್ನು ಗುಣಪಡಿಸಲು ಮತ್ತು ಸಂಶೋಧನಾ ಸಾಮಗ್ರಿಗಳ ತಯಾರಿಕೆಗಾಗಿ ಇಲಿ ಹಾಲನ್ನು ಜೆನೆಟಿಕ್ ಎಂಜಿನಿಯರಿಂಗ್ ಮಾಡಲಾಗುತ್ತದೆ. ಹಾಗಾಗಿ ಇಲಿ ಹಾಲು ತುಂಬಾನೆ ದುಬಾರಿಯಾಗಿವೆ ಎಂದು ಸಂಶೋಧನೆಗಳು ತಿಳಿಸಿವೆ. 
 

Latest Videos

click me!