ತೂಕ ಇಳಿಸಿಕೊಳ್ಳಬೇಕಾ? ಬೆಳ್ಳುಳ್ಳಿ ಟೀ ಕುಡಿದು ನೋಡಿ, ಮಾಡುತ್ತೆ ಕಮಾಲ್!

First Published | Sep 8, 2023, 4:17 PM IST

ಬೆಳ್ಳುಳ್ಳಿಯಲ್ಲಿ ಪ್ರತಿಜೀವಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ, ಇದರಿಂದಾಗಿ ಇದು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳಿಂದ ಜನರನ್ನು ರಕ್ಷಿಸುತ್ತದೆ. ಆದರೆ ಬೆಳ್ಳುಳ್ಳಿ ಚಹಾದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ, ಹೌದು ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  
 

ಬೆಳ್ಳುಳ್ಳಿ ಆರೋಗ್ಯಕ್ಕೆ (garlic health benefits) ತುಂಬಾ ಪ್ರಯೋಜನಕಾರಿ ಅನ್ನೋದು ಪ್ರತಿಯೊಬ್ಬರಿಗೂ ತಿಳಿದಿರುವ ಸತ್ಯ. ಇದನ್ನು ಭಾರತೀಯ ಅಡುಗೆ ಮನೆಗಳಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಚಟ್ನಿಯನ್ನು ಅನೇಕ ಮನೆಗಳಲ್ಲಿ ತಯಾರಿಸಲಾಗುತ್ತದೆ. ಇದು ತುಂಬಾನೆ ರುಚಿಕರವಾಗಿರುತ್ತದೆ. ಇದು ಆಹಾರಕ್ಕೆ ಉತ್ತಮ ರುಚಿಯನ್ನು ನೀಡುವುದರ ಜೊತೆಗೆ ಅನೇಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ.
 

ಅನೇಕ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುತ್ತಾರೆ, ಇದು ದೇಹದ ಅನೇಕ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ, ಆದರೆ ಬೆಳ್ಳುಳ್ಳಿ ಚಹಾದ (Garlic Tea) ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಹೌದು, ಬೆಳ್ಳುಳ್ಳಿ ಚಹಾವು ಪೌಷ್ಟಿಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದು ನಿಮಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ, ಬೆಳ್ಳುಳ್ಳಿ ಚಹಾದ ಪ್ರಯೋಜನಗಳು ಯಾವುವು ಅನ್ನೋದನ್ನು ತಿಳಿದುಕೊಳ್ಳೋಣ.
 

Tap to resize

ಬೆಳ್ಳುಳ್ಳಿ ಚಹಾ
ಬೆಳ್ಳುಳ್ಳಿ ಚಹಾದಲ್ಲಿ ಆಂಟಿಆಕ್ಸಿಡೆಂಟ್, ನಂಜುನಿರೋಧಕ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿವೆ. ಇದು ದೇಹವನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ನೀವು ಸೀಸನಲ್ ರೋಗಗಳನ್ನು (seasonal health issues) ಸಹ ತಪ್ಪಿಸಬಹುದು. ಇದಕ್ಕಾಗಿ, ನೀವು ಪ್ರತಿದಿನ ಬೆಳಿಗ್ಗೆ ಬೆಳ್ಳುಳ್ಳಿ ಚಹಾವನ್ನು ಕುಡಿಯಬೇಕು.

ಪ್ರತಿದಿನ ಬೆಳ್ಳುಳ್ಳಿ ಚಹಾ (garlic tea) ಕುಡಿಯೋದರಿಂದ ಜೀರ್ಣಕ್ರಿಯೆಯನ್ನು (Digestive System) ಉತ್ತೇಜಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಅಜೀರ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ದೂರ ಮಾಡಬಹುದು. ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. 

ಬೆಳ್ಳುಳ್ಳಿ ಚಹಾ ಕ್ಯಾನ್ಸರ್ ವಿರೋಧಿ ಗುಣಗಳನ್ನು (Anti Cancer) ಹೊಂದಿದೆ. ಇದು ಅನೇಕ ರೀತಿಯ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಬೆಳ್ಳುಳ್ಳಿ ಚಹಾ ಸೇವಿಸುವ ಜನರು ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ (Breast Cancer) ಅಪಾಯವನ್ನು ಕಡಿಮೆ ಮಾಡಬಹುದು.

ಬೆಳ್ಳುಳ್ಳಿ ಚಹಾವು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಈ ಚಹಾವನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಹೆಚ್ಚು ತಿನ್ನುವುದನ್ನು ತಪ್ಪಿಸುವಿರಿ. ಈ ರೀತಿಯಾಗಿ, ಇದು ತೂಕ ನಷ್ಟಕ್ಕೆ (weight loss) ಸಹಾಯ ಮಾಡುತ್ತದೆ. 

ಬೆಳ್ಳುಳ್ಳಿ ಚಹಾವು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ, ಇದು ಚರ್ಮವನ್ನು ಫ್ರೀ Radicals ರಕ್ಷಿಸುತ್ತದೆ. ಇದು ಚರ್ಮ ಯಂಗ್ ಆಗಿರುವ ಹಾಗೆ ನೋಡಿಕೊಳ್ಳುತ್ತದೆ. ಈ ಚಹಾವನ್ನು ಕುಡಿಯುವುದರಿಂದ ಮೊಡವೆ ಮತ್ತು ಎಸ್ಜಿಮಾದಂತಹ ಚರ್ಮ ಸಂಬಂಧಿತ ಸಮಸ್ಯೆಗಳನ್ನು (skin related problems) ನಿವಾರಿಸಬಹುದು.

ಬೆಳ್ಳುಳ್ಳಿ ಚಹಾ ತಯಾರಿಸುವುದು ಹೇಗೆ?
ಸಾಮಗ್ರಿಗಳು
2-3 ಸಿಪ್ಪೆ ಸುಲಿದ ಬೆಳ್ಳುಳ್ಳಿ ಮೊಗ್ಗುಗಳು, 2 ಕಪ್ ನೀರು, ನಿಂಬೆ , ರುಚಿಗೆ ತಕ್ಕಷ್ಟು ಜೇನುತುಪ್ಪ

ತಯಾರಿಸುವ ವಿಧಾನ
ಸಿಪ್ಪೆ ಸುಲಿದ ಬೆಳ್ಳುಳ್ಳಿ ಮೊಗ್ಗುಗಳನ್ನು ಪೇಸ್ಟ್ ಮಾಡಿ.
ಈಗ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ.
ನೀರು ಕುದಿಯಲು ಪ್ರಾರಂಭಿಸಿದಾಗ, ಅದಕ್ಕೆ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
15-20 ನಿಮಿಷಗಳ ಕಾಲ ಕುದಿಯಲು ಬಿಡಿ.
ನಂತರ ನೀವು ಅದರಲ್ಲಿ ಜೇನುತುಪ್ಪ ಅಥವಾ ನಿಂಬೆ ರಸವನ್ನು ಬೆರೆಸಬಹುದು.
ನಂತರ ಇಳಿಸಿ, ಉಗುರು ಬೆಚ್ಚಗೆ ಆದಾಗ ಅದನ್ನು ಕುಡಿಯಿರಿ.
 

Latest Videos

click me!