ಕೊರೋನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಮ್ಯೂನಿಟಿ ಪವರ್ ಹೆಚ್ಚಿಸಿಕೊಳ್ಳುವತ್ತ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು. ಇಮ್ಯೂನಿಟಿ ಹೆಚ್ಚಿಸುವುದು ಹೇಗೆ ಎನ್ನುವ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಅವೆಲ್ಲವೂ ಮನೆಯಲ್ಲಿಯೇ ಸಿಗುತ್ತದೆ. ಹೌದು ಅಡುಗೆ ಮನೆಯಲ್ಲಿರುವ ಹಾಲಿಗೆ ಒಂದಷ್ಟು ಪದಾರ್ಥಗಳನ್ನು ಸೇರಿಸಿ, ಪ್ರತಿದಿನ ಸೇವಿಸಿದರೆರೋಗ ನಿರೋಧಕ ಶಕ್ತಿ ಹೆಚ್ಚುತ್ತಿದೆ. ಈ ಕ್ರಮಗಳು ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆ ಸಲಹೆ ಬಗ್ಗೆ ಒಂದಷ್ಟು ಮಾಹಿತಿ...
undefined
ಖರ್ಜೂರದ ಜೊತೆ ಹಾಲುಖರ್ಜೂರದಲ್ಲಿ ಆ್ಯಂಟಿ ಆಕ್ಸಿಡೆಂಟ್, ಆಂಟಿ-ವೈರಲ್ ಮತ್ತು ವಿಟಮಿನ್ ಮತ್ತು ಕಬ್ಬಿಣ ಸಮೃದ್ಧವಾಗಿವೆ. ಇದರ ದೈನಂದಿನ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟ, ಅಧಿಕ ರಕ್ತದೊತ್ತಡ ಇತ್ಯಾದಿಗಳನ್ನು ನಿಯಂತ್ರಣದಲ್ಲಿಡುತ್ತದೆ.
undefined
ಖರ್ಜೂರದಲ್ಲಿರುವ ಪೋಷಕಾಂಶಗಳು ಹೃದಯ, ಮೂಳೆ ಮತ್ತು ಮೆದುಳಿನ ಆರೋಗ್ಯಕ್ಕೆ ಒಳಿತು. ಕೊರೋನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಾಲಿನಲ್ಲಿ ಖರ್ಜೂರವನ್ನು ಹಾಕಿ ಕುದಿಸಿ ಸೇವಿಸಿದಾಗ ಅದರ ಗುಣಗಳು ಇಮ್ಮಡಿಗೊಳ್ಳುತ್ತದೆ.
undefined
ಬೀಜಗಳು ಮತ್ತು ಹಾಲುಬೀಜಗಳು ಎಂದರೆ ಕುಂಬಳಕಾಯಿ, ಸೂರ್ಯಕಾಂತಿ, ಚಿಯಾ ಮತ್ತು ಲಿನ್ ಸೀಡ್ ಬೀಜಗಳು ಸೇರಿವೆ. ಇವುಗಳನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತವೆ.
undefined
ಬೇರೆ ಬೇರೆ ರೀತಿಯ ಬೀಜಗಳನ್ನು ಮಿಕ್ಸಿಯಲ್ಲಿ ರುಬ್ಬಿ, ಹಾಲು ಹಾಕಿ ಕುದಿಸಿ ಕುಡಿಯಿರಿ. ಇದಕ್ಕೆ ಜೇನುತುಪ್ಪವನ್ನೂ ಸೇರಿಸಬಹುದು. ಇದರ ಸೇವನೆ ವೈರಲ್ ಸಮಸ್ಯೆಯನ್ನು ತಡೆಯುತ್ತದೆ. ಇದು ಸೀಸನಲ್ ಶೀತ, ಕೆಮ್ಮು ಮತ್ತು ಜ್ವರಗಳಿಂದ ದೂರವಿಡುತ್ತದೆ.
undefined
ಡ್ರೈ ಫ್ರುಟ್ಸ್ ಮತ್ತು ಹಾಲುಒಣಗಿದ ಹಣ್ಣುಗಳು ಅಂದರೆ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ, ಪಿಸ್ತಾ ಇತ್ಯಾದಿಗಳಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್ ಇ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚುವಂತೆ ಮಾಡುತ್ತದೆ.
undefined
ಡ್ರೈ ಫ್ರುಟ್ಸ್ ಗಳನ್ನು ಮಿಕ್ಸಿ ಮಾಡಿ, ಬಳಿಕ ಹಾಲಿನಲ್ಲಿ ಕುದಿಸಿ ಸೇವಿಸಿ. ಇದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಇದು ಋತುಮಾನದ ರೋಗಗಳ ಜೊತೆಗೆ ಮಧುಮೇಹ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
undefined
ಅರಿಶಿನ ಹಾಲನ್ನು ಕುಡಿಯಿರಿಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ, ಕ್ಯಾನ್ಸರ್ ವಿರೋಧಿ ಗುಣಗಳಿವೆ.ಮಲಗುವ ಮುನ್ನ ಬಿಸಿ ಹಾಲಿನಲ್ಲಿ ಅರ್ಧ ಚಮಚ ಅರಿಶಿನಹಾಕಿ, ಕುದಿಸಿ ಕುಡಿದರೆ ರೋಗ ನಿರೋಧಕ ಶಕ್ತಿ ಬಲವಾಗಿರುತ್ತದೆ.
undefined
ಶುಂಠಿ ಬೆರೆಸಿ ಕುಡಿಯಿರಿಶುಂಠಿಯಲ್ಲಿ ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟ್, ಆಂಟಿ ವೈರಲ್ ಗುಣಗಳಿವೆ.ಈ ಸಂದರ್ಭದಲ್ಲಿ ಇದನ್ನು ಹಾಲಿನಲ್ಲಿ ಹಾಕಿ ಕುಡಿಯಬೇಕು ಮತ್ತು ಅದರಿಂದ ಕೆಲವೇ ದಿನಗಳಲ್ಲಿ ಉತ್ತಮ ಪರಿಣಾಮ ಸಿಗುತ್ತದೆ.
undefined
ಹಾಲಿನೊಂದಿಗೆ ಕರಿಮೆಣಸುಹಾಲಿನೊಂದಿಗೆ ಕರಿಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದು ಸಹ ಉತ್ತಮ. ಇದರಿಂದ ಗಂಟಲು ಕೆರೆತ, ಶೀತ ಮೊದಲಾದ ಸಮಸ್ಯೆಗಳು ದೂರವಾಗುತ್ತವೆ.
undefined