ಮಾಂಸ ಪ್ರಿಯರಿಗೊಂದು ಬ್ಯಾಡ್ ನ್ಯೂಸ್… ಇಂಥ ಮಾಂಸ ತಿಂದ್ರೆ ಮರೆವಿನ ಖಾಯಿಲೆ ಬರುತ್ತಂತೆ!

First Published | Aug 7, 2024, 1:54 PM IST

ನೀವು ರೆಡ್ ಮೀಟ್, ವಿಶೇಷವಾಗಿ ಸಂಸ್ಕರಿಸಿದ ಕೆಂಪು ಮಾಂಸವನ್ನು ನಿಯಮಿತವಾಗಿ ಸೇವಿಸಿದರೆ, ಅದು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಕಂಡುಹಿಡಿದಿದೆ.  
 

Eating more read meat will lead to memory loss pav

ನೀವು ರೆಡ್ ಮೀಟ್ (Red Meat) ಪ್ರಿಯರೇ, ಹಾಗಿದ್ರೆ ಈ ಶಾಕಿಂಗ್ ಸುದ್ದಿ ನಿಮಗಾಗಿ. ವಿಶೇಷವಾಗಿ ಸಂಸ್ಕರಿಸಿದ ಕೆಂಪು ಮಾಂಸದಿಂದ ತಯಾರಿಸಿದ ಬರ್ಗರ್, ಪಿಜ್ಜಾ ಅಥವಾ ಸ್ಯಾಂಡ್ವಿಚ್‌ಗಳನ್ನು ತಿನ್ನೋದು ನಿಮಗೆ ತುಂಬಾ ಇಷ್ಟವಾಗಿದ್ರೆ ಅಲರ್ಟ್ ಆಗಿರಿ. ಏಕೆಂದರೆ ಹಾಗೆ ಮಾಡೋದ್ರಿಂದ ನೀವು ಮರೆವಿನ ಖಾಯಿಲೆಗೆ ಗುರಿಯಾಗಬಹುದೆಂದು ಇತ್ತೀಚಿನ ಸಂಶೋಧನೆಯೊಂದು ಕಂಡು ಹಿಡಿದಿದೆ. 

ಹೆಚ್ಚು ಸಂಸ್ಕರಿಸಿದ ಕೆಂಪು ಮಾಂಸ ತಿನ್ನುವವರು ಬುದ್ಧಿಮಾಂದ್ಯತೆಯ (Alzheimer) ಹೆಚ್ಚಿನ ಅಪಾಯ ಹೊಂದಿದ್ದಾರೆಂದು  ಅಲ್ಝೈಮರ್ಸ್ ಅಸೋಸಿಯೇಷನ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸಂಶೋಧನೆಯಲ್ಲಿ ಉಲ್ಲೇಖಿಸಿದೆ. ಆದರ ಬದಲಿಗೆ ಬೀಜಗಳು, ಬೀನ್ಸ್ ಅಥವಾ ಬೇಳೆಕಾಳು ಸೇವಿಸುವವರು ಬುದ್ಧಿಮಾಂದ್ಯತೆಯ ಅಪಾಯದಿಂದ ಪಾರಾಗಲಿದ್ದಾರಂತೆ. 

Tap to resize

ಕೆಂಪು ಮಾಂಸ ಮತ್ತು ಬುದ್ಧಿಮಾಂದ್ಯತೆಯ ನಡುವಿನ ಸಂಬಂಧ
ಸಂಸ್ಕರಿಸಿದ ಕೆಂಪು ಮಾಂಸ ಮತ್ತು ಬುದ್ಧಿಮಾಂದ್ಯತೆಯ ನಡುವೆ ಸಂಭಾವ್ಯ ಸಂಬಂಧವಿರಬಹುದು ಎಂದು ತಜ್ಞರು ಹೇಳುತ್ತಾರೆ. ಸಾಸೇಜ್ ಮತ್ತು ಬೇಕನ್ ನಂತಹ ವಸ್ತುಗಳಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ (cholesterol) ತುಂಬಾ ಹೆಚ್ಚಿವೆ. ಇದನ್ನು ಅತಿಯಾಗಿ ಸೇವಿಸಿದರೆ, ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಪ್ಲೇಕ್ ಸಂಗ್ರಹವಾಗುತ್ತೆ, ಇದು ಅಪಧಮನಿಗಳು ಕಿರಿದಾಗುವಿಕೆಗೆ ಕಾರಣವಾಗಬಹುದು ಮತ್ತು ಮೆದುಳಿಗೆ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೆದುಳಿನ ಕೋಶ ಸಾಕಷ್ಟು ಆಮ್ಲಜನಕ ಮತ್ತು ಪೋಷಣೆಯನ್ನು ಪಡೆಯುವುದಿಲ್ಲ, ಇದರಿಂದ ಬುದ್ದಿಮಾಂದ್ಯತೆ ಹೆಚ್ಚಬಹದು. 

ಕೆಂಪು ಮಾಂಸದ ಸೇವನೆ ಹೃದ್ರೋಗ, (heart problem) ಅಧಿಕ ರಕ್ತದೊತ್ತಡ (High Blood Pressure), ಪರಿಧಮನಿ ಕಾಯಿಲೆ ಮತ್ತು ಪಾರ್ಶ್ವವಾಯುವಿನಂಥ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಮೆದುಳು ಸೇರಿ ದೇಹದ ವಿವಿಧ ಭಾಗಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ದೀರ್ಘಕಾಲದ ಉರಿಯೂತ ಮತ್ತು ರಕ್ತನಾಳಗಳ ಅಸಮರ್ಪಕ ಕಾರ್ಯನಿರ್ವಹಣೆ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು.

ತಜ್ಞರು ಹೇಳುವಂತೆ ನಾವು ಗ್ರಿಲಿಂಗ್, ಫ್ರೈಯಿಂಗ್ ಅಥವಾ ಬ್ರಾಯ್ಲಿಂಗ್‌ನಂಥ ಹೆಚ್ಚಿನ ಶಾಖ ವಿಧಾನದೊಂದಿಗೆ ಮಾಂಸವನ್ನು ಬೇಯಿಸಿದಾಗ, ಹೆಟೆರೊಸೈಕ್ಲಿಕ್ ಅಮೈನ್‌ಗಳು (HCA) ಮತ್ತು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳಂಥ ಅಪಾಯಕಾರಿ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಇದು ಮೆದುಳಿನಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಊತಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ ಇದು ಜೀವಕೋಶಗಳ ಹಾನಿ ಮತ್ತು ಮೆದುಳಿನ ಮೇಲೆ ಹೆಚ್ಚಿನ ಪರಿಣಾಮ ಬೀರೋದರಿಂದ ಇದು ಅಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ನ್ಯೂರೋಡಿಜೆನರೇಟಿವ್ ಕಾಯಿಲೆಗಳಿಗೆ (Neurodegenerative Diseases) ಕಾರಣವಾಗಬಹುದು.

ಯಾವ ಆಹಾರಗಳು ಬುದ್ಧಿಮಾಂದ್ಯತೆಯನ್ನು ತಡೆಯುತ್ತವೆ
ಸಂಸ್ಕರಿಸಿದ ಕೆಂಪು ಮಾಂಸದ ಬದಲಾಗಿ ಬೀಜಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಿದರೆ ಬುದ್ಧಿಮಾಂದ್ಯತೆ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ಸೂಚಿಸಿದೆ. ಬೀಜಗಳು ಮತ್ತು ದ್ವಿದಳ ಧಾನ್ಯಗಳು ಮೆದುಳಿನ ಆರೋಗ್ಯವನ್ನು (mental health) ಕಾಪಾಡಿಕೊಳ್ಳಲು ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. 

Latest Videos

click me!