ಗಾಂಜಾವನ್ನು ವೀಡ್, ಪಾಟ್, ಡಾಪ್ ಗ್ರಾಸ್ ಎಂದೂ ಕರೆಯುತ್ತಾರೆ. ಮರಿಜುವಾನಾ ಬಳಸಿದಾಗ ನಿಮ್ಮ ದೇಹ, ಮೆದುಳಿನ ಮೇಲೆ ಹಲವಾರು ಪರಿಣಾಮಗಳಾಗುತ್ತವೆ. ಕೆನ್ನಾಬೀಸ್ ಗಿಡದಿಂದ ಸಿಗುವ ಈ ಮಾದಕ ವಸ್ತುವನ್ನು ಸೇದುವುದು, ಕುಡಿಯುವುದು, ತಿನ್ನುವ ಮೂಲಕ ಬಳಸುತ್ತಾರೆ.
ಮರಿಜುವಾನಾ ಎಂದು ಕರೆಯಲ್ಪಡುವ ಗಾಂಜಾವನ್ನು ವೀಡ್, ಪಾಟ್, ಡಾಪ್ ಗ್ರಾಸ್ ಎಂದೂ ಕರೆಯುತ್ತಾರೆ. ಮರಿಜುವಾನಾ ಬಳಸಿದಾಗ ನಿಮ್ಮ ದೇಹ, ಮೆದುಳಿನ ಮೇಲಾಗುವ ಪರಿಣಾಮಗಳಿವು.
ಹೆಚ್ಚಿನ ಜನರು ಮನಸಿನ ಖುಷಿ, ಮನರಂಜನೆಗಾಗಿ ಗಾಂಜಾವನ್ನು ಬಳಸುತ್ತಾರೆ. ಇತ್ತೀಚೆಗೆ ಹೆಚ್ಚಿನ ವೈದ್ಯರೂ ಕೆಲವು ನಿರ್ದಿಷ್ಟ ಆರೋಗ್ಯ ಸ್ಥಿತಿಯಲ್ಲಿರುವವರಿಗೆ, ಕೆಲವೊಂದು ರೋಗ ಲಕ್ಷಣಗಳಿಗೆ ಇದನ್ನು ಪ್ರಿಸ್ಕ್ರೈಬ್ ಮಾಡುತ್ತಿದ್ದಾರೆ.
ಮನಸಿನ ಮೂಡ್ ಬದಲಾಯಿಸಿ, ಮನುಷ್ಯಮ ಮೇಲೆ ಪರಿಣಾಮ ಬೀರುವಾಂಶಗಳು ಗಾಂಜಾದಲ್ಲಿವೆ. ಇವು ನಮ್ಮ ದೇಹ ಮತ್ತು ಮನಸಿನ ಮೇಲೆಯೂ ಹೆಚ್ಚಿನ ಪರಿಣಾಮ ಬೀರಬಲ್ಲವು.
ಇದು ವ್ಯಕ್ತಿಯನ್ನು ವ್ಯಸನಿಯಾಗಿಸುವುದರ ಜೊತೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮರಿಜುವಾನಾ ಸೇವಿಸಿದರೆ ಏನಾಗುತ್ತೆ..? ಇಲ್ಲಿ ಓದಿ.
ಉತ್ತೇಜನ ನೀಡುವ ಗುಣ:ಗಾಂಜಾ ವಿಪರೀತ ಉತ್ತೇಜನ ನೀಡುವಕಾರಣಕ್ಕೂ ಇದನ್ನು ಬಳಸುವವರಿದ್ದಾರೆ. ಆಹಾರ, ಸೆಕ್ಸ್ ವಿಚಾರಗಳಿಗೆ ಸ್ಪಂದಿಸುವ ಮೆದುಳಿನ ಟಿಎಚ್‌ಸಿ ಅಂಶ ಗಾಂಜಾದಲ್ಲಿರುತ್ತದೆ.
ಟಿಎಚ್‌ಸಿ ಅಂಶವು ಡೊಫಮೈನ್ ಎಂಬ ರಾಸಾಯನಿಕವನ್ನು ಹೊರ ಹಾಕುತ್ತದೆ. ಈ ರಾಸಾಯನಿಕ ಉತ್ಸಾಹದ ಜೊತೆ ಶಾಂತವಾದ, ಸಂತೃಪ್ತಿಯ ಭಾವನೆ ತರುತ್ತದೆ.
ವೀಡ್‌ನ್ನು ಸ್ಮೋಕ್ ಮಾಡುವುದು ಅಥವಾ ಪರಿಮಳವನ್ನು ತೆಗೆದುಕೊಂಡಾಗ ಟಿಎಚ್‌ಸಿ ಅಂಶ ಬೇಗನೆ ನಿಮ್ಮ ರಕ್ತದ ಜೊತೆ ಸೇರುತ್ತದೆ.
ಇದರ ಪರಿಣಾಮದಿಂದ ನಿಮ್ಮ ಮೂಡ್ ತಟ್ಟನೆ ಬದಲಾಗಿ ಉತ್ಸಾಹ ತುಂಬುತ್ತದೆ. ನಿಮ್ಮ ಮೂಡ್ ಸಂಪೂರ್ಣ ಬದಲಾಗುತ್ತದೆ.
ಸಮಾನ್ಯವಾಗಿ 30 ನಿಮಿಷಗಳಲ್ಲಿ ಟಿಎಚ್‌ಸಿ ಪ್ರಭಾವ ಅದರ ಪೀಕ್ ತಲುಪುತ್ತದೆ. ನಂತರದ 1-3 ಗಂಟೆಗಳ ಕಾಲ ಇದರ ಪರಿಣಾಮ ಹಾಗೇ ಉಳಿದುಕೊಳ್ಳುತ್ತದೆ.
ಗಾಂಜಾ ಸೇವಿಸಿದರೆ ಅಥವಾ ಕುಡಿದರೆ ನೀವು ಪ್ರಜ್ಞಾವಸ್ಥೆಗೆ ತಲುಪಲು ಹಲವು ಗಂಟೆಗಳೇ ಬೇಕಾಗುತ್ತದೆ. ನೀವು ಬಳಸುವ ಮರಿಜುವಾನಾದ ಪ್ರಬಲತೆ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ:ಎಲ್ಲರೂ ಮರಿಜುವಾನಾದಿಂದ ಖುಷಿ ಪಡೆಯುತ್ತಾರೆ ಎಂದು ಹೇಳಲಾಗದು. ಪ್ರತಿಯೊಬ್ಬರ ಅನುಭವ ಭಿನ್ನವಾಗಿರುತ್ತದೆ.
ಕೆಲವರಿಗೆ ಗಾಂಜಾ ಸೇವನೆಯಿಂದ ಆತಂಕ, ಭಯ ಹೆಚ್ಚಾಗುತ್ತದೆ. ಇದು ಮಾನಸಿಕ ಖಿನ್ನತೆಗೂ ಕಾರಣವಾಗಿ ಮಾನಸಿಕವಾಗಿ ಹಲವು ಆರೋಗ್ಯ ತೊಂದರೆಗೆ ಕಾರಣವಾಗಬಹುದು.
ಇದು ಯಾಕೆ ಈ ರೀತಿಯಾಗುತ್ತೆ ಎಂಬುದಕ್ಕೆ ಇದುವರೆಗೂ ವಿಜ್ಞಾನಿಗಳಲ್ಲಿ ಸ್ಪಷ್ಟ ಕಾರಣವಿಲ್ಲ. ಹೈ ಡೋಸ್ ಕೊಟ್ಟಾಗ ಅದು ನಿಮ್ಮಲ್ಲಿ ವ್ಯಾಮೋಹ ಹೆಚ್ಚಿಸುತ್ತದೆ. ಇದರಿಂದ ವಾಸ್ತವದೊಂದಿಗೆ ಸಂಪೂರ್ಣ ಸಂಪರ್ಕ ಕಳೆದುಕೊಳ್ಳಬಹುದು. ವಾಸ್ತವತೆಯಿಂದ ನಿಮ್ಮ ಮನಸು ಮತ್ತು ಯೋಚನೆ ದೂರ ಹೋಗುವುದರಿಂದ ಇಲ್ಲದ ವಿಷಯ ಕೇಳುವಂತೆ ನೋಡುವಂತೆ ಭ್ರಮೆಯಾಗಬಹುದು.
ಯೋಚನೆಗಳು ಸ್ಪಷ್ಟತೆ ಕಳೆದುಕೊಂಡು ವಿರೂಪಗೊಳ್ಳುವುದು:ಗಾಂಜಾ ನಿಮ್ಮ ಇಂದ್ರಿಯದ ಮೇಲೆ ಪರಿಣಾಮ ಬೀರುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೂ ವಿಪರೀತ ಪ್ರಭಾವ ಬೀರುತ್ತದೆ. ನೀವು ತೆಗೆದುಒಳ್ಳುವ ಗಂಜಾದ ಪ್ರಬಲತೆ ಮೇಲೆ ಇದು ಅವಲಂಬಿಸಿರುತ್ತದೆ. ನೀವು ಗಾಂಜಾ ಹೇಗೆ ತೆಗೆದುಕೊಂಡಿದ್ದೀರಿ ಅದನ್ನು ಬಳಸಿದ ರೀತಿ ಇವೆಲ್ಲವೂ ಅದರ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ.