Pain and Causes: ಕಾಲಲ್ಲಿ ನೋವು ಕಾಣಿಸಿಕೊಂಡಿದೆಯೇ? ಹಾಗಿದ್ರೆ ಈ ಭಯಾನಕ ರೋಗ ಕಾಡಬಹುದು

First Published Nov 8, 2021, 6:39 PM IST

ಪಾದಗಳು ನಿಮ್ಮ ಆರೋಗ್ಯದ ಸ್ಥಿತಿಯನ್ನು ಸಹ ವಿವರಿಸುತ್ತವೆ. ಹೌದು ಪಾದಗಳಲ್ಲಿ ಕಾಣಿಸುವ ನೋವು ಹಲವಾರು ಸಮಸ್ಯೆಗಳ ಲಕ್ಷಣ. ಮಧುಮೇಹ, ಥೈರಾಯ್ಡ್ (thyroid), ಅನಿಮಿಯಾ, ಗ್ಯಾನ್ ಗ್ರೀನ್, ಸಂಧಿವಾತ ಮತ್ತು ಹೃದ್ರೋಗವನ್ನು ಕಾಲುಗಳಲ್ಲಿ ಗೋಚರಿಸುವ ರೋಗಲಕ್ಷಣಗಳಿಂದ ಕಂಡುಹಿಡಿಯಬಹುದು. ಈ ಲಕ್ಷಣಗಳನ್ನು ನೋಡಿದರೆ ರೋಗವು ಬೆಳೆಯುವುದನ್ನು ತಡೆಯಬಹುದು.

ಕಾಲುಗಳಲ್ಲಿ ಊತ 
ಕಾಲುಗಳ ಊತವು ಕಿಡ್ನಿ ಸಮಸ್ಯೆ (kidney problem) ಅಥವಾ ಅನಿಮಿಯಾದ ಲಕ್ಷಣವಾಗಿರಬಹುದು. ಮತ್ತೊಂದೆಡೆ ಕಾಲಿನ ವಿವಿಧ ಭಾಗಗಳಲ್ಲಿ ನೋವು ಅಥವಾ ಊತ ಗೋಚರಿಸಿದರೆ, ಇದು ಸಂಧಿವಾತ ಅಥವಾ ಹೃದ್ರೋಗದಿಂದಲೂ ಉಂಟಾಗಬಹುದು. ಆದುದರಿಂದ ಕಾಲುಗಳಲ್ಲಿ ನೋವು ಕಾಣಿಸಿಕೊಂಡರೆ, ಊತ ಮೊದಲಾದ ಸಮಸ್ಯೆ ಇದ್ದರೆ ಆ ಬಗ್ಗೆ ಹೆಚ್ಚು ಗಮನ ಹರಿಸಬೇಕು. 

ಇನ್ನು ಸಂಧಿವಾತದಲ್ಲಿ ( Arthritis) ಕಾಲಿನ ತುದಿಯಲ್ಲೂ ಊತವನ್ನು ಉಂಟುಮಾಡಬಹುದು. ಕಾಲಿನ ತುದಿಯಲ್ಲಿ ಕೆಂಪು ಪಟ್ಟೆಗಳು ಕಾಣಿಸಿಕೊಂಡರೂ, ಇದು ಹೃದಯದ ಸೋಂಕಿನ ಲಕ್ಷಣವಾಗಿರಬಹುದು. ಆದುದರಿಂದ ಹೆಚ್ಚು ಜಾಗರೂಕರಾಗುವುದು ಅವಶ್ಯಕ. ಅಂತಹ ನೋವು ಕಾಣಿಸಿಕೊಂಡರೆ ಕೂಡಲೆ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿ. 

ಕಾಲುಗಳಲ್ಲಿ  ಸೆಳೆತ 
ಕಾಲುಗಳಲ್ಲಿ ಸೆಳೆತ ಅಧಿಕ ರಕ್ತದೊತ್ತಡ ಅಥವಾ ಅಧಿಕ ರಕ್ತ ಸಕ್ಕರೆಯ ಲಕ್ಷಣವಾಗಿರಬಹುದು. ಈ ಪರಿಸ್ಥಿತಿಯಲ್ಲಿ ರಕ್ತ ಪರಿಚಲನೆಯು (High blood pressure) ಹೆಚ್ಚುತ್ತದೆ, ಇದರಿಂದ ಪಾದಗಳಲ್ಲಿ ಸೆಳೆತ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ವಿಟಮಿನ್ E ಮತ್ತು ಡಿ ಕೊರತೆಯೂ ಕಾಲುಗಳಲ್ಲಿ ಸೆಳೆತಕ್ಕೆ ಕಾರಣವಾಗುತ್ತದೆ. 

ಇನ್ನು ಕಾಲುಗಳಲ್ಲಿ ಸೆಳೆತವು ಮಧುಮೇಹದ ಲಕ್ಷಣವೂ ಆಗಿರಬಹುದು. ಮಧುಮೇಹ (Diabetes) ಕಾಲಿನ ತುದಿಯಲ್ಲೂ ಊತವನ್ನು ಉಂಟುಮಾಡಬಹುದು. ಮಧುಮೇಹವು ಹಿಮ್ಮಡಿ ನೋವು ಸಹ ಉಂಟುಮಾಡಬಹುದು. ಕಾಲುಗಳಲ್ಲಿ ಡ್ರೈನೆಸ್ ಥೈರಾಯ್ಡ್ ಕಾಯಿಲೆಯ ಚಿಹ್ನೆ ಇರಬಹುದು. 

ಪಾದಗಳ ಬಣ್ಣವನ್ನು ಬದಲಾಯಿಸುವುದು
ಪಾದಗಳ ಬಣ್ಣವನ್ನು ಬದಲಾಯಿಸುವುದು ಗ್ಯಾನ್ ಗ್ರೀನ್ (Gangrene) ನಿಂದ ಉಂಟಾಗಬಹುದು. ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗದ ಕಾರಣ ಈ ಬ್ಯಾಕ್ಟೀರಿಯಾ ರೋಗ ವಾಗಬಹುದು. ಇದನ್ನು ಕಡೆಗಣಿಸಬಾರದು. ಯಾಕೆಂದರೆ ಇದರಿಂದ ಮುಂದೆ ದೊಡ್ಡ ಸಮಸ್ಯೆಯೇ ಉಂಟಾಗಬಹುದು. ಆದುದರಿಂದ ಆರಂಭದಲ್ಲೇ ಗಮನ ಹರಿಸಿದರೆ ಉತ್ತಮ. 

ಬೆರಳು ದಪ್ಪಗಾಗುತ್ತಿದೆಯೇ?
ಕಾಲಿನ ಬೆರಳುಗಳು ದಪ್ಪಗಾಗುವುದು ಕರುಳಿನ ಕಾಯಿಲೆಯ ( Intestine disease ) ಸಂಕೇತವಾಗಿದೆ. ಇದು ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದ್ರೋಗದ ಕಾರಣದಿಂದಾಗಿಯೂ ಸಂಭವಿಸಬಹುದು. ನಿಮ್ಮ ಕಾಲ್ಬೆರಳಿನಲ್ಲಿ ಅಥವಾ ಹೆಬ್ಬೆರಳಲ್ಲಿ ಯಾವಾಗಲೂ ನೋವಿದ್ದರೆ, ಅದು ದೇಹದಲ್ಲಿ ಹೆಚ್ಚಿನ ಪ್ರಮಾಣದ ಮೂತ್ರದ ಲಕ್ಷಣವಾಗಿದೆ. ಇದರಿಂದ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುತ್ತದೆ.

ಕಾಲುಗಳಲ್ಲಿ ನೋವು
ಕಾಲಿನಾದ್ಯಂತ ನೋವು ಕಾಣಿಸಿಕೊಂಡರೆ ರಕ್ತ ಪರಿಚಲನೆಯಿಂದ ಉಂಟಾಗಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವು (blood sugar level) ಹೆಚ್ಚಾದಾಗ ಮತ್ತು ಆರ್ಥಾರೈಟೀಸ್ ಸಮಸ್ಯೆಯಿಂದ ಕೂಡ ಕಾಲಿನ ನೋವು ಸಂಭವಿಸುತ್ತದೆ. ಅಲ್ಲದೆ, ದೇಹದಲ್ಲಿ ವಿಟಮಿನ್, ಮಿನರಲ್, ಪೊಟ್ಯಾಶಿಯಮ್ ಅಥವಾ ಕ್ಯಾಲ್ಸಿಮ್ ಕೊರತೆ ಇದ್ದರೆ,  ಕಾಲುಗಳು ಸಹ ನೋಯಬಹುದು.
 

ಪಾದಗಳ ಮರಗಟ್ಟುವಿಕೆ
ಕೆಲವೊಮ್ಮೆ ಪಾದಗಳು ಮರಗಟ್ಟುತ್ತವೆ. ಇದು ನರದೌರ್ಬಲ್ಯದಿಂದ (Nervous breakdown) ಉಂಟಾಗುತ್ತದೆ. ಮಧುಮೇಹ ಇದ್ದಾಗಲೂ ಪಾದಗಳು ಮರಗಟ್ಟುತ್ತವೆ. ನೀವು ಹೆಚ್ಚು ಎಣ್ಣೆಯುಕ್ತ ಆಹಾರ ಸೇವಿಸಬೇಡಿ. ಇದು ಪಾದಗಳ ಮರಗಟ್ಟುವಿಕೆಗೂ ಕಾರಣವಾಗಬಹುದು. ಇದರಿಂದ ಕೊಬ್ಬಿನ ಕೋಶಗಳು ಹೆಚ್ಚಾಗುತ್ತವೆ. ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 

click me!