ಹಾಲು ಆರೋಗ್ಯಕ್ಕೆ ಉತ್ತಮ ಮತ್ತು ಪೌಷ್ಠಿಕ ಆಹಾರವಾಗಿದೆ. ವೈದ್ಯರು ಸಹ ಮಕ್ಕಳಿಂದ ಹಿಡಿದು ಹಿರಿಯರಿಗೆ ಇದನ್ನೇ ಸೇವನೆ ಮಾಡಲು ಹೇಳಲಾಗುತ್ತದೆ. ಹಾಲು ಕುಡಿಯುವುದರಿಂದ (drinking milk) ಕಫದ ಸಮಸ್ಯೆ ಹೆಚ್ಚಾಗುತ್ತದೆಯೇ ಎಂಬ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿವೆ. ಶೀತದ ಸಮಸ್ಯೆಯಲ್ಲಿ ಹಾಲು ಕುಡಿಯುವಾಗ ಏನಾಗುತ್ತದೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಶೀತ ಅಥವಾ ಕೆಮ್ಮಿನ (cold and cough) ಸಮಸ್ಯೆ ಇದ್ದರೆ , ಆ ಸಂದರ್ಭದಲ್ಲಿ ಹಾಲು ಕುಡಿಯುವುದರಿಂದ ನಿಮ್ಮ ಕೆಮ್ಮು ಹೆಚ್ಚಾಗುತ್ತದೆಯೇ? ಹಾಗಿದ್ದಲ್ಲಿ, ಸಮಸ್ಯೆ ಹೆಚ್ಚಾಗಲು ನಿಜವಾಗಿಯೂ ಡೈರಿ ಉತ್ಪನ್ನಗಳ ಕಾರಣವೇ ಎಂದು ನೀವು ತಿಳಿದುಕೊಳ್ಳಬೇಕು. ಆ ಕುರಿತು ಸಂಶೋಧನೆಗಳು ಏನು ಹೇಳುತ್ತವೆ, ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
211
ಕಫ ಏಕೆ ರೂಪುಗೊಳ್ಳುತ್ತದೆ?
ಶೀತ, ಫ್ಲೂ ಮತ್ತು ಇತರ ಮೇಲ್ಭಾಗದ ಉಸಿರಾಟದ ಸೋಂಕುಗಳು (Upper Respiratory Infections )ಮೂಗು ಸೋರುವಿಕೆ, ಕಫ, ಗಂಟಲು ನೋವು, ದಟ್ಟಣೆ ಮತ್ತು ಜ್ವರ ಮೊದಲಾದ ಸಮಸ್ಯೆಗಳನ್ನು ಹೊಂದಿರಬಹುದು. ಈ ರೋಗಲಕ್ಷಣಗಳು ದೇಹದ ರಕ್ಷಣಾ ಕಾರ್ಯವಿಧಾನದ ಭಾಗವಾಗಿದೆ. ತುಂಬಾ ಕಫವಾಗುವುದು ಎಂದರೆ ದೇಹವು ಸೋಂಕಿನ ವಿರುದ್ಧ ಹೋರಾಡುತ್ತಿದೆ ಎಂದರ್ಥ.
311
ಡೈರಿ ಉತ್ಪನ್ನಗಳಿಂದ (diary product) ಏನಾಗುತ್ತದೆ?
ತಜ್ಞರ ಪ್ರಕಾರ, ಶೀತದಲ್ಲಿ ಕೆಲವೊಂದು ಆಹಾರಗಳನ್ನು ತಪ್ಪಿಸಬೇಕಾಗುತ್ತದೆ. ಅಲರ್ಜಿ ಇರುವವರಲ್ಲಿ ಕೆಲವು ವಸ್ತುಗಳನ್ನು ತಿನ್ನುವುದರಿಂದ ಕೆಲವೊಮ್ಮೆ ಕಫದ ಸಮಸ್ಯೆ ಉಲ್ಬಣವಾಗಬಹುದು, ಆದರೆ ಹಾಲು, ಐಸ್ ಕ್ರೀಮ್ ಮತ್ತು ಮೊಸರಿನಂತಹ ಡೈರಿ ಉತ್ಪನ್ನಗಳನ್ನು ತಿನ್ನುವುದರಿಂದ ಶೀತದ ಸಮಸ್ಯೆ ಹೆಚ್ಚಾಗುವುದಿಲ್ಲ ಎಂದು ವಿಜ್ಞಾನವು ಹೇಳುತ್ತದೆ.
411
ಅಮೇರಿಕನ್ ರಿವ್ಯೂ ಆಫ್ ರೆಸ್ಪಿರೇಟರಿ ಡಿಸೀಸ್ ನಲ್ಲಿ (American Review of Respiratory Disease ) ಪ್ರಕಟವಾದ ಅಧ್ಯಯನದ ಪ್ರಕಾರ, 60 ಜನರ ಮೇಲೆ ಅಧ್ಯಯನವನ್ನು ನಡೆಸಲಾಯಿತು. ಅವರಿಗೆ ಸಾಮಾನ್ಯ ಶೀತ ಸಮಸ್ಯೆಗಳು ಇದ್ದವು. ಅಧ್ಯಯನವು ಈ ಜನರನ್ನು 10 ದಿನಗಳ ವರೆಗೆ ಮೇಲ್ವಿಚಾರಣೆ ಮಾಡಿತು. ಅವರಲ್ಲಿ ಕೆಲವರು ಡೈರಿ ಉತ್ಪನ್ನಗಳನ್ನು ತೆಗೆದುಕೊಂಡರು ಮತ್ತು ಕೆಲವರು ತೆಗೆದುಕೊಳ್ಳಲಿಲ್ಲ.
511
ಕೆಲವು ದಿನಗಳ ನಂತರ ಎಲ್ಲರೂ ತಮ್ಮ ಮೂಗಿನಿಂದ ಮೂಗಿನ ಸ್ರವಿಕೆಗಳನ್ನು ಪರಿಶೀಲಿಸಿದರು. ಹಾಲು ಕುಡಿದವರು ಮತ್ತು ಕುಡಿಯದ ಜನರ ಕಫದಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ ಎಂದು ವಿಜ್ಞಾನಿಗಳು ಕಂಡುಕೊಂಡರು. ಅಂದರೆ ಶೀತದ ಸಮಯದಲ್ಲಿ ಹಾಲು ಕುಡಿಯುವುದರಿಂದ ಯಾವುದೇ ಸಮಸ್ಯೆ ಉಂಟಾಗೋದಿಲ್ಲ.
611
ಅಮೇರಿಕನ್ ಕಾಲೇಜ್ ಆಫ್ ನ್ಯೂಟ್ರಿಷನ್ (American College of Nutrition) ಜರ್ನಲ್ ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದಲ್ಲಿ, ವಿಜ್ಞಾನಿಗಳು ಹಾಲು ಅಥವಾ ಡೈರಿ ಉತ್ಪನ್ನಗಳ ಸೇವನೆಯು ಕಫದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಕಂಡುಕೊಂಡಿದ್ದಾರೆ. ಭಾಗವಹಿಸಿದ ಕೆಲವರಿಗೆ ಕುಡಿಯಲು ಹಸುವಿನ ಹಾಲನ್ನು ನೀಡಲಾಯಿತು ಮತ್ತು ಕೆಲವರಿಗೆ ಕುಡಿಯಲು ಸೋಯಾ ಹಾಲನ್ನು ನೀಡಲಾಯಿತು.
711
ಎರಡೂ ರೀತಿಯ ವಸ್ತುಗಳನ್ನು ಅಂದರೆ ದನದ ಮತ್ತು ಸೋಯಾ ಹಾಲನ್ನು (soya milk) ಸೇವಿಸಿದ ನಂತರ ಅಧ್ಯಯನದ ಫಲಿತಾಂಶಗಳು ಒಂದೇ ಆಗಿದ್ದವು. ಅಧ್ಯಯನದಲ್ಲಿ ಭಾಗವಹಿಸುವವರಿಗೆ ಕುಡಿಯಲು ಯಾವ ರೀತಿಯ ಹಾಲನ್ನು ನೀಡಲಾಯಿತು ಎಂದು ತಿಳಿದಿರಲಿಲ್ಲ, ಆದರೆ ಅವರು ಅದೇ ಫಲಿತಾಂಶಗಳನ್ನು ತೋರಿಸಿದರು.
811
ಇಲ್ಲಿವರೆಗೆ ನಡೆಸಿದ ಸಂಶೋಧನೆಗಳ ಪ್ರಕಾರ ಡೈರಿ ಉತ್ಪನ್ನಗಳ ಸೇವನೆಯಿಂದ ಕಫದ ಸಮಸ್ಯೆ ಹೆಚ್ಚಾಗುತ್ತದೆ
ಎಂಬುದಕ್ಕೆ ತಜ್ಞರು ಇನ್ನೂ ಯಾವುದೇ ಪುರಾವೆಗಳನ್ನು ಕಂಡುಕೊಂಡಿಲ್ಲ. ಶೀತದ ಸಮಯದಲ್ಲಿ ಡೈರಿ ಉತ್ಪನ್ನಗಳ (diary product) ವನೆಯಿಂದ ಅಚಾನಕ್ ಆಗಿ ನೆಗಡಿ ಜಾಸ್ತಿಯಾಗಬಹುದು. ಆದರೆ ಅದಕ್ಕೆ ಡೈರಿ ಉತ್ಪನ್ನಗಳೇ ಕಾರಣ ಎಂದು
ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
911
ಜೆನೆಟಿಕ್ ಮೇಕಪ್ ಅನ್ನು (genetic makeup) ಅವಲಂಬಿಸಿ ಪರಿಣಾಮಗಳು
ಮತ್ತೊಂದು ಸಂಶೋಧನೆಯ ಪ್ರಕಾರ, ಕಫದ ರಚನೆಯ ಮೇಲೆ ಹಾಲಿನ ಸೇವನೆಯ ಪರಿಣಾಮವು ವ್ಯಕ್ತಿಯ ಆನುವಂಶಿಕ ಮೇಕಪ್ ಮತ್ತು ನೀವು ಯಾವ ರೀತಿಯ ಡೈರಿ ಪ್ರೋಟೀನ್ ತೆಗೆದುಕೊಳ್ಳುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರಿಗೆ ಒಂದೊಂದು ರೀತಿಯ ಸಮಸ್ಯೆ ಕಾಡುತ್ತದೆ.
1011
ಹಸುವಿನ ಹಾಲಿನಲ್ಲಿ ಎ1 ಕ್ಯಾಸಿನ್ ಪ್ರೋಟೀನ್ ಕಂಡುಬರುತ್ತದೆ. ಇದರಿಂದ ಕೆಲವರ ಕರುಳಿನಲ್ಲಿ ಕಫದ ಸಮಸ್ಯೆ ಹೆಚ್ಚಾಗುತ್ತದೆ. ಇದು ದೇಹದಾದ್ಯಂತ ಪರಿಚಲನೆಗೆ ಕಾರಣವಾಗುತ್ತದೆ, ಇದು ದಟ್ಟಣೆಗೆ ಕಾರಣವಾಗುತ್ತದೆ. ಆದಾಗ್ಯೂ, ಸಂಶೋಧನೆಯನ್ನು ಬಹಳ ಸೀಮಿತ ವ್ಯಾಪ್ತಿಯಲ್ಲಿ ನಡೆಸಲಾಯಿತು ಮತ್ತು ಅದು ಆನುವಂಶಿಕ ಕೊಂಡಿಗಳಿಗೆ ಸಂಬಂಧಿಸಿದ ಬಗ್ಗೆ ಹೆಚ್ಚಿನ ಮಾನವ ಅಧ್ಯಯನಗಳ ಅಗತ್ಯವಿದೆ.
1111
ಹಾಲು ಕುಡಿಯುವುದನ್ನು ನಿಲ್ಲಿಸಬೇಡಿ
ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಹಾಲು ಕುಡಿಯುವುದನ್ನು ನಿಲ್ಲಿಸಿದರೆ, ಅದು ಉತ್ತಮ ನಿರ್ಧಾರವಲ್ಲ ಎಂದು ತಜ್ಞರು ನಂಬುತ್ತಾರೆ. ಜರ್ನಲ್ ಆಫ್ ಪೀಡಿಯಾಟ್ರಿಕ್ ನರ್ಸಿಂಗ್ (Journal of Pediatric Nursing ) ಪ್ರಕಾರ, ಮಕ್ಕಳಿಗೆ ಶೀತ ಸಮಸ್ಯೆ ಇದ್ದರೆ, ಡೈರಿ ಉತ್ಪನ್ನಗಳ ಸೇವನೆಯು ಕ್ಯಾಲ್ಸಿಯಂ, ಪ್ರೋಟೀನ್, ಕೊಬ್ಬಿನಾಮ್ಲಗಳು ಮತ್ತು ಅದರಲ್ಲಿ ಇರುವ ವಿವಿಧ ವಿಟಮಿನ್ ಗಳಿಂದ ಪ್ರಯೋಜನ ಪಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.