ಒಂದು ವೇಳೆ ನಿಮಗೆ ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಇದ್ದರೆ, ಈಗಲೇ ಬದಲಾಯಿಸಿ. ಯಾಕೆಂದರೆ ರಾತ್ರಿ ಊಟ ಮಾಡುವುದು ತಡವಾದಷ್ಟು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆ ಸಮತೋಲನ ತಪ್ಪುತ್ತದೆ. ಇದರಿಂದ ಏನೆಲ್ಲಾ ತೊಂದರೆಗಳಿವೆ ಗಮನಿಸೋಣ...
ಹೌದು, ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ತಡರಾತ್ರಿ ಊಟ ಮಾಡುವವರಲ್ಲಿ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವು ಹೆಚ್ಚಾಗುತ್ತದೆ. ಈ ಸಂಶೋಧನೆಯಲ್ಲಿ, ಆಹಾರ ಮತ್ತು ಕುಡಿಯುವ ಅಭ್ಯಾಸಗಳ ಬಗ್ಗೆ, ಜನರು ನಿದ್ರೆ ಮತ್ತು ತಿನ್ನುವ ಸಮಯದ ಬಗ್ಗೆ ಪ್ರಶ್ನಿಸಲಾಗಿತ್ತು.
ಸಂಶೋಧನೆಯಲ್ಲಿ ಕಂಡುಕೊಂಡಂತೆ ತಡ ರಾತ್ರಿ ಊಟ ಮಾಡುವ ಅಭ್ಯಾಸಗಳನ್ನು ಹೊಂದಿರುವ ಜನರು ಕ್ಯಾನ್ಸರ್ ನ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ.
ಈ ಸಂಶೋಧನೆಗಾಗಿ ಸಂಶೋಧಕರು 621 ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳು ಮತ್ತು 1205 ಸ್ತನ ಕ್ಯಾನ್ಸರ್ ರೋಗಿಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಇದರಲ್ಲಿ 872 ಪುರುಷರು ಮತ್ತು 1321 ಮಹಿಳೆಯರು ಇದ್ದರು. ಈ ಸಂಶೋಧನೆಯಲ್ಲಿ, ಈ ಜನರ ನಿದ್ದೆ ಮತ್ತು ತಿನ್ನುವ ಅಭ್ಯಾಸಗಳನ್ನು ಸಾಮಾನ್ಯ ಜನರ ಹವ್ಯಾಸಗಳೊಂದಿಗೆ ಹೋಲಿಸಲಾಯಿತು.
ರಾತ್ರಿ ನಿದ್ರೆ ಗೆಟ್ಟವರು ಕ್ಯಾನ್ಸರ್ ಗೆ ಹೆಚ್ಚು ಬಲಿಯಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ವರದಿಯಲ್ಲಿ ತಿಳಿಸಿದ್ದಾರೆ. ರಾತ್ರಿ ಊಟವಾದ ನಂತರ ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಹೊತ್ತು ಎದ್ದವರಲ್ಲಿ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವು 20% ರಷ್ಟು ಕಡಿಮೆಯಿರುವುದನ್ನು ಕಂಡುಕೊಳ್ಳಲಾಯಿತು.
ಸಂಶೋಧಕರ ಪ್ರಕಾರ, ರಾತ್ರಿ ಊಟವನ್ನು 9 ಗಂಟೆಗೂ ಮೊದಲು ಸೇವಿಸಬೇಕಾಗುತ್ತದೆ, ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಈ ಸಂಶೋಧನೆಯ ಪ್ರಕಾರ ರಾತ್ರಿ 10 ಗಂಟೆಯ ನಂತರ ತಿನ್ನುವವರಿಗೆ ಹೋಲಿಸಿದರೆ ರಾತ್ರಿ 9 ಗಂಟೆಯ ಒಳಗೆ ತಿನ್ನುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ.
ಈ ಅಧ್ಯಯನದ ಫಲಿತಾಂಶಗಳು ದೃಢಪಟ್ಟರೆ, ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಸಂಶೋಧನೆಯ ಪ್ರಮುಖ ಸಂಶೋಧಕರು ತಿಳಿಸಿದ್ದಾರೆ. ಕ್ಯಾನ್ಸರ್ ಬಾರದೇ ಇರಲು ಜನರು ರಾತ್ರಿ ಬೇಗನೆ ಊಟ ಮಾಡುವತ್ತ ಗಮನ ಹರಿಸಬೇಕು.
ರಾತ್ರಿ ಸಾಧ್ಯವಾದಷ್ಟು 9 ಗಂಟೆ ಮುನ್ನ ಊಟ ಮಾಡಿ, ಅಥವಾ ನೀವು ನಿದ್ರೆ ಮಾಡುವ ಎರಡು ಗಂಟೆಗೆ ಮುನ್ನ ಆಹಾರ ಸೇವಿಸಬೇಕು. ಇದರಿಂದ ಕ್ಯಾನ್ಸರ್ ಉಂಟಾಗುವಂತಹ ಅಪಾಯ ತಪ್ಪುತ್ತದೆ.
ಈ ಆಹಾರಗಳಿಂದ ದೂರವಿರಿಸಕ್ಕರೆಯುಕ್ತ ಪಾನೀಯಗಳು, ಅಲ್ಟ್ರಾ-ಸಂಸ್ಕರಿಸಿದ ಸೂಪ್ ಗಳು ಅಥವಾ ಮಾಂಸಗಳು, ಆಲ್ಕೋಹಾಲ್, ಧೂಮಪಾನ, ಸಂಸ್ಕರಿಸಿದ ಆಹಾರಗಳು ಮತ್ತು ಅಧಿಕ ಪ್ರೋಟೀನ್ ಆಹಾರಗಳಿಂದ ದೂರವಿರಲು ಹೇಳಲಾಗುತ್ತದೆ.
ಈ ಆಹಾರಗಳು ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ಸಕ್ಕರೆ, ಸಂಸ್ಕರಿತ ತೈಲ ಅಥವಾ ಕೊಬ್ಬು ಅಧಿಕಪ್ರಮಾಣದಲ್ಲಿರುವ ಉತ್ಪನ್ನಗಳು ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸಬಹುದು.