ಯಾರಾದರೂ ನಿಮ್ಮನ್ನು ಮುಟ್ಟಿದ ತಕ್ಷಣ ನೀವು ನಗಲು ಪ್ರಾರಂಭಿಸಿದ್ರೆ, ನಿಮಗೆ ಕಚಗುಳಿಯಾಗುತ್ತೆ(Tickle) ಎಂದರ್ಥ. ಕೆಲವು ಜನರು ತುಂಬಾ ಸ್ಪರ್ಶ ಸೂಕ್ಷ್ಮವಾಗಿರುತ್ತಾರೆ, ನೀವು ಅವರ ಮುಂದೆ ಅಂತಹ ಸನ್ನೆ ಮಾಡಿದರೂ, ಅವರಿಗೆ ಕಚಗುಳಿಯಾದಂತೆ ನಗಲು ಪ್ರಾರಂಭಿಸುತ್ತಾರೆ. ಹಾಗೆ ಕಚಗುಳಿ ಆಗದ ಜನರೂ ಇದ್ದಾರೆ.
ಕಚಗುಳಿಯೇ ಆಗದ ಜನರ ದೇಹದ ಸೂಕ್ಷ್ಮ ಪ್ರದೇಶವನ್ನು ಮುಟ್ಟಿದರೂ, ಅವರಿಗೆ ಯಾವ ರೀತಿಯ ಅನುಭವವೂ ಆಗೋದಿಲ್ಲ. ನಿಮ್ಮ ಸ್ನೇಹಿತನಿಗೆ ಏಕೆ ಕಚಗುಳಿ ಆಗುತ್ತೆ ಅಥವಾ ಆಗೋದಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಸನ್ನೆಗೆ ಅವನು ಏಕೆ ನಗಲು(Laugh) ಪ್ರಾರಂಭಿಸುತ್ತಾನೆ ಮತ್ತು ಯಾರಾದರೂ ನಿಮ್ಮ ಹೊಟ್ಟೆಗೆ ಕಚಗುಳಿ ಮಾಡಿದರೂ, ನೀವು ಅವರ ಮೇಲೆ ಯಾಕೆ ಕೋಪಗೊಳ್ಳುವುದಿಲ್ಲ ಗೊತ್ತಾ.
ನಮ್ಮ ದೇಹ(Body) ತುಂಬಾ ಅದ್ಭುತವಾದದು. ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿದ್ದಾನೆ ಮತ್ತು ವಿಷಯಗಳಿಗೆ ಅವರ ಪ್ರತಿಕ್ರಿಯೆಯೂ ವಿಭಿನ್ನವಾಗಿರುತ್ತೆ. ಇಲ್ಲಿ ನಮ್ಮ ದೇಹವನ್ನು ತಿಳಿದುಕೊಳ್ಳಲು ಸಹಾಯ ಮಾಡುವಂತಹ ಒಂದು ಅದ್ಭುತ ಸಂಗತಿಯನ್ನು ತಿಳಿದುಕೊಳ್ಳೋಣ.
ಕಚಗುಳಿ ಎಂದರೇನು?: ಯಾರದೋ ಸ್ಪರ್ಶಕ್ಕೆ(Touch) ದೇಹವು ಪ್ರತಿಕ್ರಿಯಿಸಿದಾಗ, ವಿಶೇಷವಾಗಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮುಟ್ಟಿದಾಗ ಪ್ರತಿಕ್ರಿಸಿದ್ರೆ, ಅದನ್ನು ಕಚಗುಳಿಗೊಳಿಸುವಿಕೆ ಎಂದು ಕರೆಯಲಾಗುತ್ತೆ. ಯಾರಾದರೂ ಕುತ್ತಿಗೆ, ಹೊಟ್ಟೆ, ಕಂಕುಳು, ಕಿವಿಗಳನ್ನು ಸ್ಪರ್ಶಿಸಿದರೆ, ನೀವು ಸೋಲಲು ಪ್ರಾರಂಭಿಸುತ್ತೀರಿ. ಅದನ್ನೇ ಟಿಕ್ಕಿಲ್ ಅಥವಾ ಕಚಕುಳಿ ಎಂದು ಕರೆಯಲಾಗುತ್ತೆ.
ಕಚಗುಳಿಗಳಲ್ಲಿ ಎರಡು ವಿಧಗಳಿವೆ - ನಿಸ್ಮೆಸಿಸ್ ಮತ್ತು ಗಾರ್ಗೆಲಾಸಿಸ್. ನಿಸ್ಮೆಸಿಸ್ ಎಂಬುದು ಸಣ್ಣ ಸೆನ್ಸೇಷನ್(Sensation) ಆಗಿದ್ದು, ಇದರಲ್ಲಿ ನಿಮ್ಮ ಶರೀರಕ್ಕೆ ಸಣ್ಣ ಗರಿಯೊಂದು ಟಚ್ ಆದ ಅನುಭವ ಉಂಟಾಗುತ್ತೆ. ಎರಡನೆಯ ಸಂವೇದನೆಯಲ್ಲಿ, ಒಬ್ಬ ವ್ಯಕ್ತಿಯು ನಿಮ್ಮನ್ನು ಸ್ಪರ್ಶಿಸಿದಾಗ ಉಂಟಾಗುವ ಭಾವನೆಯನ್ನ ಕಚಗುಳಿಗೊಳಿಸುವಿಕೆ ಎಂದು ಕರೆಯಲಾಗುತ್ತೆ. ಈ ಸಂವೇದನೆಯನ್ನು ನೀವು ನಿಮ್ಮ ಮೇಲೆ ಪ್ರಯತ್ನಿಸಲು ಸಾಧ್ಯವಿಲ್ಲ.
ಪುನರಾವರ್ತಿತವಾಗಿ ಎ-ಇ-ಐ-ಒ-ಯು ಅನ್ನು ಅಭ್ಯಾಸ ಮಾಡುತ್ತಾರೆ. ಪ್ರತಿ ಸ್ವರವನ್ನು ಉಚ್ಚರಿಸಲು 5 ಸೆಕೆಂಡುಗಳನ್ನು ನೀಡಿ. ಈ ಬಾಯಿ ವ್ಯಾಯಾಮವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಮುಖದ ಸ್ನಾಯುಗಳನ್ನು ಹಿಗ್ಗಿಸುತ್ತದೆ, ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಫೈನ್ ಲೈನ್ಸ್ ತೆಗೆದುಹಾಕುತ್ತದೆ.
ಕಚಗುಳಿ ಏಕೆ ಆಗುತ್ತೆ?: ಯಾರಾದರೂ ನಿಮ್ಮನ್ನು ಸ್ಪರ್ಶಿಸಿದಾಗ, ಪ್ರತಿಯೊಬ್ಬರ ಮೆದುಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತೆ. ಭಾವನಾತ್ಮಕ ಪ್ರತಿಕ್ರಿಯೆ ಮತ್ತು ನೋವಿನ ಪ್ರತಿಕ್ರಿಯೆಗಳು ಹೈಪೋಥಾಲಮಸ್(Hypothallamus) ಅನ್ನು ಉತ್ತೇಜಿಸುತ್ತೆ. ನಿಮಗೆ ಕಚಗುಳಿಯಾದಾಗ, ನೀವು ಸುಮ್ಮನೆ ನಗೋದಿಲ್ಲ, ಆದರೆ ಆಟೊನೊಮಿಕ್ ಎಮೋಷನಲ್ ರೆಸ್ಪಾನ್ಸ್ ಪಡೆಯುತ್ತೀರಿ. ವಾಸ್ತವವಾಗಿ, ಕಚಗುಳಿಯಾಗೋ ಸಮಯದಲ್ಲಿ ನಿಮ್ಮ ದೇಹದ ಚಲನೆಗಳು ತೀವ್ರ ನೋವಿನಿಂದ ಬಳಲುತ್ತಿರುವ ವ್ಯಕ್ತಿಯ ಚಲನೆಗಳನ್ನು ಅನುಕರಿಸುತ್ತವೆ. ಕಚಗುಳಿಯ ಸಮಯದಲ್ಲಿ ನೋವು ಮತ್ತು ಸ್ಪರ್ಶದ ಗ್ರಾಹಿಗಳು ಪ್ರಚೋದಿಸಲ್ಪಡುತ್ತವೆ.
ದೇಹದ ಈ ಭಾಗಗಳಲ್ಲಿ ಕಚಗುಳಿ ಉಂಟಾಗುತ್ತೆ
ನೀವು ಎಲ್ಲಿಯಾದರೂ ಕೆಲವು ಜನರಿಗೆ ಕಚಗುಳಿ ಮಾಡಿದರೆ, ಅವರು ನಗಲು ಪ್ರಾರಂಭಿಸುತ್ತಾರೆ. ಕೆಲವು ಜನರು ಒಂದು ನಿರ್ದಿಷ್ಟ ಭಾಗದಲ್ಲಿ ಮಾತ್ರ ಕಚಗುಳಿ ಅನುಭವಿಸುತ್ತಾರೆ. ದೇಹದ ಮೇಲಿನ ಸಾಮಾನ್ಯವಾಗಿ ಕಚಗುಳಿಯಾಗುವ ಪ್ರದೇಶಗಳು ಇವು:
ಹೊಟ್ಟೆ(Stomach)
ಕಂಕುಳ
ಪಾದ
ಕತ್ತು
ಲೋವೆರ್ ಅಬ್ ಸೈಟ್ಸ್
ಹಿಪ್ಸ್
ಕಚಗುಳಿ ಆಗುವ ದೇಹದ ಪ್ರದೇಶಗಳು ಸಾಮಾನ್ಯವಾಗಿ ಮೂಳೆಗಳಿಲ್ಲದ ಪ್ರದೇಶಗಳಾಗಿವೆ.
ನೀವು ನಿಮ್ಮನ್ನು ಏಕೆ ಕಚಗುಳಿಗೊಳಿಸಲು ಸಾಧ್ಯವಿಲ್ಲ?: ಬೇರೆ ಯಾರಾದರೂ ನಿಮ್ಮನ್ನು ಮುಟ್ಟಿದರೆ, ನೀವು ನಗುತ್ತೀರಿ, ಆದರೆ ನೀವು ನಿಮಗೆ ಕಚಗುಳಿ ಮಾಡಲು ಸಾಧ್ಯವಿಲ್ಲ. ಇದು ಯಾಕೆ ಹೀಗೆ ಎಂದು ನಿಮಗೆ ತಿಳಿದಿದ್ಯಾ? ಅದು ಹೀಗೆ ಸಂಭವಿಸಲಿದೆ ಎಂದು ನಿಮಗೆ ಮೊದಲೇ ತಿಳಿದಿರೋದರಿಂದ ನೀವು ನಿಮಗೇನೆ ಕಚಗುಳಿಗೊಳಿ ಇಡಲು ಸಾಧ್ಯವಿಲ್ಲ. ಸರ್ಪ್ರೈಸ್ ಗಳ(Surprise) ಕೊರತೆಯಿದ್ದಾಗ ಮತ್ತು ಮೆದುಳಿಗೆ ತಿಳಿದಾಗ, ನೀವು ನಗೋದಿಲ್ಲ. ನೀವು ಈಗಾಗಲೇ ಸಂವೇದನೆಯನ್ನು ನಿರೀಕ್ಷಿಸಿದಾಗ, ಇದು ಸಂಭವಿಸೋದಿಲ್ಲ.
ನೀವು ಇತರರು ಮುಟ್ಟಿದಾಗ ಉಂಟಾಗುವ ಕಚಗುಳಿ ತಪ್ಪಿಸಲು ಬಯಸೋದಾದ್ರೆ, ನೀವು ನಿಮ್ಮ ಮನಸ್ಸನ್ನು ಮೋಸಗೊಳಿಸಬಹುದು. ಇನ್ನೊಬ್ಬ ವ್ಯಕ್ತಿ ನಿಮಗೆ ಕಚಗುಳಿ ಮಾಡುತ್ತಿದ್ದರೆ, ನೀವು ಅವನ ಅಥವಾ ಅವಳ ಕೈಗಳ ಮೇಲೆ ನಿಮ್ಮ ಕೈಯನ್ನು ಇರಿಸಿ. ಇದು ಮೆದುಳಿಗೆ(Brain) ಸಂವೇದನೆಯನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತೆ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಿಗ್ರಹಿಸುತ್ತೆ.