Baby Care: ಮಗುವನ್ನು ನಗಿಸಲು ಕಚಗುಳಿ ಇಡ್ತೀರಾ? ಈ ತಪ್ಪು ಮಾಡ್ಬೇಡಿ

First Published | Mar 11, 2023, 1:17 PM IST

ಸಣ್ಣ ಮಕ್ಕಳನ್ನು ನಗಿಸಲು ಹೆಚ್ಚಿನ ಜನ ಕಚಗುಳಿ ಮಾಡುತ್ತಾರೆ. ಸರಿಯಾಗಿ ಮಾತನಾಡಲು ಸಾಧ್ಯವಾಗದ ನವಜಾತ ಶಿಶು ಕಚಗುಳಿಯನ್ನು ಇಷ್ಟಪಡುತ್ತಾ ಅಥವಾ ಇಲ್ಲವಾ ಎಂದು ನಮಗೆ ಹೇಳಲು ಸಾಧ್ಯವಿಲ್ಲ. ಆದ್ದರಿಂದ, ಮಕ್ಕಳನ್ನು ಹೇಗೆ ಮತ್ತು ಯಾವ ರೀತಿ ಕಚಗುಳಿ ಮಾಡೋದು ಸರಿಯೋ, ತಪ್ಪೋ ಎಂದು ತಿಳಿದುಕೊಳ್ಳೋಣ.

ನಿಮ್ಮ ಸುತ್ತಮುತ್ತಲಿನ ಅಥವಾ ನಿಮ್ಮ ಮನೆಯ ಜನರು ಚಿಕ್ಕ ಮಕ್ಕಳೊಂದಿಗೆ(Small children) ಆಟವಾಡೋನ್ನು ನೀವು ಆಗಾಗ್ಗೆ ನೋಡಿರಬಹುದು. ವಿಶೇಷ ಏನೂ ಇಲ್ಲದಿದ್ದರೂ, ಹೆಚ್ಚಿನ ಕುಟುಂಬಗಳಲ್ಲಿ, ಜನರು ಸಂಜೆ ಕೆಲಸದಿಂದ ಮನೆಗೆ ಮರಳಿದ ನಂತರ ತಮ್ಮ ಮಕ್ಕಳೊಂದಿಗೆ ಆಟವಾಡುತ್ತಾರೆ. ಮಗುವಿನ ಮುಖದ ಮೇಲಿನ ನಗು ದಿನವಿಡೀ ಪೋಷಕರ ಒತ್ತಡವನ್ನು ಕ್ಷಣಾರ್ಧದಲ್ಲಿ ತೆಗೆದುಹಾಕುತ್ತೆ. ಆದರೆ ನಿಮ್ಮ ಮಗುವನ್ನು ನಗಿಸಲು ಕಚಗುಳಿ ಇಡೋ ಪೋಷಕರಲ್ಲಿ ನೀವೂ ಒಬ್ಬರಾಗಿದ್ದರೆ, ತಕ್ಷಣ ನಿಮ್ಮ ಅಭ್ಯಾಸವನ್ನು ಬದಲಾಯಿಸಿ. ಹಾಗೆ ಮಾಡೋದರಿಂದ ನಿಮ್ಮ ಮಗುವಿಗೆ ಸಮಸ್ಯೆಗಳು ಉಂಟಾಗಬಹುದು. 
 

ಸಾಮಾನ್ಯವಾಗಿ ಎರಡು ರೀತಿಯ ಕಚಗುಳಿಗಳಿವೆ(Tickle). ಮೊದಲನೆಯದು ನಿಸ್ಮೆಸಿಸ್, ಅದು ಮಗುಗೆ ಖುಷಿ ನೀಡುತ್ತೆ ಮತ್ತು ಎರಡನೆಯದು ಗಾರ್ಗಲ್ಸಿಸ್, ಮಗುಗೆ ಇಷ್ಟವಾಗದಂತದ್ದು, ವೇಗವಾಗಿ ಕಚಗುಳಿ ಮಾಡುತ್ತಲೇ ಇರೋದು. ಸರಿಯಾಗಿ ಮಾತನಾಡಲು ಸಾಧ್ಯವಾಗದ ನವಜಾತ ಶಿಶು ಕಚಗುಳಿಯನ್ನು ಇಷ್ಟಪಡುತ್ತೋ ಅಥವಾ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ, ಮಕ್ಕಳಿಗೆ ಹೇಗೆ ಮತ್ತು ಯಾವ ರೀತಿಯ ಕಚಗುಳಿ ಹಾನಿಯನ್ನುಂಟುಮಾಡುತ್ತೆ ಎಂಬುದನ್ನು ತಿಳಿದುಕೊಳ್ಳೋಣ.  

Tap to resize

ನೋವಿನ(Pain) ಭಾವನೆ: ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಒಂದು ಸ್ಟಡಿ ಪ್ರಕಾರ ಮಗುವಿಗೆ ಕಚಗುಳಿ ಇಡೋದ್ರಿಂದ ನೋವಿಗೆ ಕಾರಣವಾಗಬಹುದು ಎಂದು ಹೇಳುತ್ತೆ. ಹಿಂದಿನ ಕಾಲದಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ, ಕಚಗುಳಿಯಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. 

ಮೆಲ್ಲನೆ, ಸ್ವಲ್ಪ ಹೊತ್ತು ಕಚಗುಳಿ ಇಡೋದ್ರಿಂದ ಯಾವುದೇ ಹಾನಿಯಾಗೋದಿಲ್ಲ, ಮಗು ಕೂಡ ಖುಷಿಯಿಂದ ಆಟವಾಡುತ್ತೇ, ಆದರೆ ದೀರ್ಘಕಾಲದವರೆಗೆ ಕಚಗುಳಿ ಮಾಡಿದಾಗ, ಅದು ಮಗುವಿಗೆ ನೋವನ್ನು ಉಂಟುಮಾಡಬಹುದು.ಇದರಿಂದ ಮಗುವಿನ ಆರೋಗ್ಯಕ್ಕೆ(Health) ತೊಂದರೆ ಆಗಬಹುದು.   

ಅಸಹಜ ಅನುಭವ: ಮಗುವಿಗೆ ಪದೇ ಪದೇ ಕಚಗುಳಿ  ಮಾಡೋದ್ರಿಂದ, ಅದು ಅಳಲು(Cry) ಪ್ರಾರಂಭಿಸಬಹುದು. ಇದಲ್ಲದೆ, ಮಗು ಸ್ವಲ್ಪ ದೊಡ್ಡವನಾಗಿದ್ದರೆ ಅವನಿಗೆ ಅಸಹಜ ಅನುಭವವಾಗಲು ಪ್ರಾರಂಭಿಸುತ್ತೆ. ಇದರಿಂದ ಮಗುಗೆ ಹೆಚ್ಚಿನ ಕಿರಿಕಿರಿ ಉಂಟಾಗಬಹುದು.    

ಗಾಯದ (Wound) ಅಪಾಯ: ಶಿಶುಗಳಿಗೆ ಮಾತ್ರವಲ್ಲದೆ ಶಾಲೆಯ ಚಿಕ್ಕ ಮಕ್ಕಳಿಗೂ ಅತಿಯಾಗಿ ಕಚಗುಳಿ ಮಾಡೋದ್ರಿಂದ, ಅದು ಕೆಲವೊಮ್ಮೆ ಅವರಿಗೆ ಚಿತ್ರಹಿಂಸೆಯಾಗಬಹುದು ಎಂದು ಸಂಶೋಧನೆ ಹೇಳುತ್ತೆ. ಮಗುವನ್ನು ನಗಿಸಲು ಅಥವಾ ಒಳ್ಳೆಯ ಭಾವನೆ ಮೂಡಿಸಲು, ಮನೆಯ ಜನರು ಮಗುವನ್ನು ನಿರಂತರವಾಗಿ ಕಚಗುಳಿ ಮಾಡುತ್ತಲೇ ಇರುತ್ತಾರೆ. 

ಹೀಗೆ ಹೆಚ್ಚು ಹೆಚ್ಚು ಕಚಗುಳಿ ಮಾಡೋ ಕಾರಣದಿಂದಾಗಿ ಅನೇಕ ಬಾರಿ ಮಗು ದಣಿವನ್ನು ಅನುಭವಿಸುತ್ತೆ. ಇದಲ್ಲದೆ, ಕಚಗುಳಿ ಮಾಡೋ ಸಮಯದಲ್ಲಿ ಮಗು ತನ್ನ ಕಾಲುಗಳನ್ನು(Leg) ಗಟ್ಟಿಯಾಗಿ ಅಲ್ಲಾಡಿಸಬಹುದು. ಈ ಕಾರಣದಿಂದಾಗಿ ಮಗುವಿನ ಬಾಹ್ಯ ಅಥವಾ ಆಂತರಿಕ ಅಂಗಗಳಲ್ಲಿ ಗಾಯವಾಗಬಹುದು.

ಬಿಕ್ಕಳಿಕೆ(Hiccup): ಅತಿಯಾದ ಕಚಗುಳಿ ಮಗುವಿನಲ್ಲಿ ಬಿಕ್ಕಳಿಕೆಗೆ ಕಾರಣವಾಗಬಹುದು. ಇದು ನಿಮ್ಮ ಸುತ್ತಲೂ ಅನೇಕ ಬಾರಿ ಸಂಭವಿಸೋದನ್ನು ನೀವು ನೋಡಿರಬಹುದು. ಆದ್ದರಿಂದ ಪೋಷಕರು ಮತ್ತು ಸಂಬಂಧಿಕರು ಮಗುವನ್ನು ಹೆಚ್ಚು ಕಚಗುಳಿಗೊಳಿಸದಂತೆ ನೋಡಿಕೊಳ್ಳಬೇಕು. 
 

Latest Videos

click me!