ಬೆಳಗ್ಗೆ ಎದ್ದ ಮೇಲೆ ಮತ್ತೆ ಮಲಗಬೇಕೆನಿಸಿದರೆ, ಈ ರೋಗವಿರಬಹುದು!

First Published | Mar 10, 2023, 3:24 PM IST

ವಾರದಲ್ಲಿ ಎಷ್ಟು ಬಾರಿ ನೀವು ಬೆಳಿಗ್ಗೆ ಎದ್ದು, ನಿದ್ದೆ ಅಥವಾ ದಣಿವು ತಡೆಯಲಾರದೆ ಮತ್ತೆ ನಿದ್ರೆಗೆ ಜಾರುತ್ತೀರಿ? ಬೆಳಿಗ್ಗೆ ಎದ್ದ ನಂತರ ನಿಮಗೆ ದಣಿವಾಗಿದೆ ಎಂದು ನೀವು ಭಾವಿಸುತ್ತೀರಾ? ಹಾಗಿದ್ದರೆ, ಅದು ಏಕೆ ಸಂಭವಿಸುತ್ತದೆ ಎನ್ನುವ ಬಗ್ಗೆ ತಿಳಿಯೋಣ. 
 

ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಿದರೂ, ಮುಂಜಾನೆ ಮತ್ತೆ ನಿಮಗೆ ನಿದ್ರೆ ಬರುವಂತೆ ಅನಿಸಿದ್ರೆ, ಮತ್ತೆ ಮಲಗಿದ್ದು ಏನು ಪ್ರಯೋಜನ ಅಲ್ವಾ? ಆದರೆ ಜನರು ಬೆಳಗಿನ ನಿದ್ರೆ ಅತ್ಯುತ್ತಮ ಎಂದು ನಂಬುತ್ತಾರೆ. ಬೆಳಿಗ್ಗೆ ಎದ್ದ ನಂತರ ಮತ್ತೆ ನಿದ್ರೆಗೆ ಜಾರುವ ಅಭ್ಯಾಸದ ಬಗ್ಗೆ ಜನರಿಗೆ ಚೆನ್ನಾಗಿ ತಿಳಿದಿರುತ್ತದೆ. ರಾತ್ರಿಯಲ್ಲಿ ಒಮ್ಮೆ ಮಲಗಿದ ನಂತರ, ನೀವು ಬೆಳಗ್ಗೆ ಬೇಗನೆ ಎದ್ದೇಳುವಿರಿ ಮತ್ತು ನಂತರ ಮತ್ತೆ ನಿದ್ರೆ ಬರುವಂತೆ ಅನಿಸುತ್ತೆ ಅಲ್ವಾ? ಇದರಿಂದ ನಿಮ್ಮ ಇಡೀ ದಿನ ದಣಿವಿನಿಂದ ಕೂಡಿರುತ್ತೆ. 

ನಿದ್ರೆಯಿಂದ ಎದ್ದ ಬಳಿಕ ಮತ್ತೆ ನಿದ್ರೆ ಬರುವಂತೆ ಅನಿಸೋದನ್ನು, ಸ್ಲೀಪ್ ಇನಾರ್ಟಿಯಾ (sleep inertia) ಎಂದು ಕರೆಯಲಾಗುತ್ತದೆ. ಇದು ವೈದ್ಯಕೀಯ ಸ್ಥಿತಿ ಮತ್ತು ಇದು ಅನೇಕ ಜನರಿಗೆ ಸಂಭವಿಸುತ್ತದೆ. ಅಲಾರಂ ಆಫ್ ಆಗುವ ಮೊದಲು ನೀವು ಎದ್ದಾಗ, ನಿದ್ದೆ ಮಾಡಲು ಇನ್ನೂ ಸಮಯ ಇದೆ ಎಂದು ಅನಿಸಿದಾಗ, ಮತ್ತೆ ನಿದ್ದೆ ಮಾಡುವ ಮನಸಾಗುತ್ತೆ. ಆದರೆ ಮತ್ತೆ ಎದ್ದಾಗ ದಣಿದ ಅನುಭವ ಆಗುತ್ತೆ.

Tap to resize

ಸ್ಲೀಪ್ ಇನಾರ್ಟಿಯಾ ಎಂದರೇನು? (what is sleep inertia)
ಇದು ನಾವು ಎಚ್ಚರಗೊಳ್ಳುವ ಪರಿವರ್ತನೆಯ ಸ್ಥಿತಿ. ಆದರೆ ನಮ್ಮ ಮೆದುಳಿಗೆ ನಿದ್ರೆ ಮತ್ತು ಎಚ್ಚರದ ನಡುವಿನ ಪರಿವರ್ತನೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ನಿದ್ರೆಯ ಜಡತ್ವ ಎಂದು ಕರೆಯಲಾಗುತ್ತದೆ. ಇದು ಉಂಟಾದಾಗ ನಿದ್ರೆಯ ಸಮಯದಲ್ಲಿ, ನಿಮ್ಮ ಮನಸ್ಥಿತಿ ಕೆಟ್ಟದಾಗಿರಬಹುದು, ನಿಮ್ಮ ಉತ್ಪಾದಕತೆ ಕಡಿಮೆಯಾಗಿರಬಹುದು, ನಿಮಗೆ ತೀವ್ರವಾದ ತಲೆನೋವು ಇರಬಹುದು, ಆಯಾಸವಾಗಬಹುದು, ಕಣ್ಣುಗಳಲ್ಲಿ ಭಾರವೂ ಇರಬಹುದು. ಇದು ಕೆಲವೇ ನಿಮಿಷಗಳಲ್ಲಿ ಮುಗಿಯಬಹುದು ಮತ್ತು ಹಲವಾರು ಗಂಟೆಗಳವರೆಗೆ ಇರುತ್ತದೆ. ಹಾಗಾಗಿ ಎದ್ದ ನಂತರ ಮತ್ತೆ ನಿದ್ರೆ ಮಾಡುವಂತಹ ಮನಸ್ಥಿತಿ ಉಂಟಾಗುತ್ತೆ.

ಸ್ಲೀಪ್ ಇನಾರ್ಟಿಯಾ ಬಗ್ಗೆ ಸಂಶೋಧನೆ ಏನು ಹೇಳುತ್ತದೆ?
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ (NCBI) ನಡೆಸಿದ ಸಂಶೋಧನೆಯ ಪ್ರಕಾರ ಇದನ್ನು sleep drunkenness ಎಂದೂ ಕರೆಯಬಹುದು. ಇದು ಕೆಲವು ಸಂದರ್ಭಗಳಲ್ಲಿ ಗಂಭೀರವಾಗಿರಬಹುದು. ಉದಾಹರಣೆಗೆ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸೈನಿಕರು ಮುಂತಾದ ವೃತ್ತಿಗಳಲ್ಲಿ, ಜನರು ತಕ್ಷಣ ಎದ್ದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ವೃತ್ತಿಗಳಲ್ಲಿ, ಕರೆಗಳು ರಾತ್ರಿಯ ಯಾವುದೇ ಸಮಯದಲ್ಲಿ ಬರಬಹುದು. ಅಂತಹ ಸಂದರ್ಭಗಳಲ್ಲಿ ಈ ಸಮಸ್ಯೆ ಇದ್ದರೆ ಅಪಾಯಕಾರಿ.

ಈ ಸಮಸ್ಯೆ ನಿವಾರಿಸೋದು ಹೇಗೆ?
ಸ್ಲೀಪ್ ಇನಾರ್ಟಿಯಾದಿಂದ ತುಂಬಾ ತೊಂದರೆಯಾಗಿದ್ದರೆ, ನೀವು ಮೊದಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ವೈದ್ಯರಿಂದ ನೀವು ಕೆಲವೊಂದು ಸಲಹೆಗಳನ್ನು ಪಡೆದುಕೊಂಡು, ಅದನ್ನು ಅಳವಡಿಸಿದ್ರೆ ಸಮಸ್ಯೆ ದೂರ ಆಗುತ್ತೆ.

ಈ ಸಮಸ್ಯೆ ನಿವಾರಿಸಲು ನೀವಿಷ್ಟು ಮಾಡಿದ್ರೆ ಸಾಕು.
ಕಿರು ನಿದ್ದೆಗೆ (naps) ಒಗ್ಗಿಕೊಳ್ಳಿ. 2017 ರ ಅಧ್ಯಯನವು 10-20 ನಿಮಿಷಗಳ ನಿದ್ರೆ ಉತ್ತಮವೆಂದು ಹೇಳಿದೆ.  ಇದು ನಿದ್ರೆಯ ಕೊರತೆಯನ್ನು ಸಹ ನಿವಾರಿಸುತ್ತದೆ.  
ಎದ್ದ ನಂತರ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವುದು ನಿದ್ರೆಯನ್ನು ಮುರಿಯಲು ಉತ್ತಮ ಮಾರ್ಗ. 2016 ರ ಅಧ್ಯಯನವು ಇದನ್ನು ದೃಢಪಡಿಸಿದೆ.  
ಎದ್ದ ನಂತರ ನೀವು ತುಂಬಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ, ಕೆಫೀನ್ ಸೇವಿಸೋದು ಉತ್ತಮ.

ನಿಗದಿತ ಮಲಗುವ ಸಮಯದ ದಿನಚರಿ ನಿಮ್ಮನ್ನು ನಿದ್ರಾಹೀನತೆಯ ಸಮಸ್ಯೆಯಿಂದ ರಕ್ಷಿಸಬಹುದು. ಸರಿಯಾಗಿ ನಿದ್ರೆ ಮಾಡಲು ನಿಮ್ಮ ಗ್ಯಾಜೆಟ್ ನ್ನು (stay away from gadget) ಸಾಧ್ಯವಾದಷ್ಟು ರಾತ್ರಿ ಸಮಯ ದುರ ಇಡಬೇಕು ಹಾಗೂ ನಿದ್ರೆಗೆ ಸರಿಯಾಗಿ ವೇಳಾಪಟ್ಟಿ ಸಿದ್ಧಪಡಿಸಬೇಕು. 

Latest Videos

click me!