Beetroot Benefits: ಕೆಂಪು ತರಕಾರಿ ಸೇವಿಸೋ ಮೂಲಕ ಈ ಎಲ್ಲಾ ರೋಗಗಳಿಗೆ ಹೇಳಿ ಗುಡ್ ಬೈ!

First Published | Nov 23, 2022, 7:45 PM IST

ನಮ್ಮ ಭಾರತೀಯ ಅಡುಗೆಯ  ಖಜಾನೆಯಲ್ಲಿ ಎಂತೆಂತಹ ಅನೇಕ ತರಕಾರಿಗಳಿವೆ ಅಂದ್ರೆ, ಅವು ರುಚಿಯಲ್ಲಿ ಮಾತ್ರವಲ್ಲದೆ ಆರೋಗ್ಯದಲ್ಲಿಯೂ ಪ್ರಯೋಜನಕಾರಿಯಾಗಿವೆ. ಅವುಗಳಲ್ಲಿ ಬೀಟ್ ರೂಟ್ ಕೂಡ ಒಂದು. ಇದನ್ನು ತಿನ್ನೋದರಿಂದ ಆಗುವ ಪ್ರಯೋಜನ ಯಾವ್ಯಾವುವು ಅನ್ನೋದನ್ನು ತಿಳಿಯೋಣ.

ಚಳಿಗಾಲದಲ್ಲಿ, ವಿವಿಧ ರೀತಿಯ ತರಕಾರಿಗಳು ಮಾರುಕಟ್ಟೆಗೆ ಬರುತ್ತವೆ. ಹಸಿರು ಎಲೆ ತರಕಾರಿಗಳಿಂದ ಹಿಡಿದು ಮೂಲಂಗಿ, ಬೀಟ್ ರೂಟ್(Beet root), ಕ್ಯಾರೆಟ್ ಮತ್ತು ಬದಕಾಯಿವರೆಗೆ ಎಲ್ಲಾ ತರಕಾರಿಗಳು ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತೆ. ಆದರೆ ಒಂದು ಸಣ್ಣ ಕೆಂಪು ಬೀಟ್ ರೂಟ್ ನಿಮ್ಮ ಆರೋಗ್ಯಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತೆ ಎಂದು ನಿಮಗೆ ತಿಳಿದಿದ್ಯಾ? ಹೌದು ಬೀಟ್ ರೂಟ್ ನಿಂದ ತುಂಬಾನೆ ಲಾಭ ಇದೆ, ಅವುಗಳ ಬಗ್ಗೆ ಡೀಟೈಲ್ ಆಗಿ ತಿಳಿದುಕೊಳ್ಳೋಣ.

ಈ ಬೀಟ್ರೂಟ್ ಅಗತ್ಯ ವಿಟಮಿನ್ಸ್(VItamins), ಮಿನರಲ್ಸ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ಆಹಾರದಲ್ಲಿ ಸೇರಿಸುವ ಮೂಲಕ, ಅನೇಕ ರೋಗಗಳಿಂದ ದೂರವಿರಬಹುದು. ಬೀಟ್ರೂಟ್ನಲ್ಲಿರುವ ಪೋಷಕಾಂಶಗಳ ಬಗ್ಗೆ ಮತ್ತು ಅದನ್ನು ತಿನ್ನುವ ಮೂಲಕ ಯಾವ ರೋಗಗಳನ್ನು ತೊಡೆದುಹಾಕಬಹುದು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ. 

Tap to resize

ಬೀಟ್ ರೂಟ್ ನಲ್ಲಿರುವ ಪೋಷಕಾಂಶಗಳು: ಬೀಟ್ರೂಟ್ ಪೌಷ್ಠಿಕಾಂಶದಿಂದ ಸಮೃದ್ಧವಾಗಿದೆ. ಇದು ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಜೀವಕೋಶಗಳ ನಷ್ಟದಿಂದ ರಕ್ಷಿಸುತ್ತೆ ಮತ್ತು ಹೃದ್ರೋಗದ(Heart problems) ಅಪಾಯವನ್ನು ಕಡಿಮೆ ಮಾಡುತ್ತೆ. ಅಷ್ಟೇ ಅಲ್ಲದೇ ಇದು ಉರಿಯೂತ ಕಡಿಮೆ ಮಾಡುತ್ತೆ ಮತ್ತು ಕ್ಯಾನ್ಸರ್ ಮತ್ತು ಇತರ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತೆ. ಇದು ಕ್ಯಾಲೋರಿ, ಫ್ಯಾಟ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಸೇರಿದಂತೆ ಅನೇಕ ಇತರ ಅಂಶಗಳನ್ನು ಒಳಗೊಂಡಿದೆ. 

ಕ್ಯಾನ್ಸರ್ ನಂತಹ(Cancer) ರೋಗಗಳಿಂದ ರಕ್ಷಿಸುತ್ತೆ: ಬೀಟ್ರೂಟ್ನಿಂದ ತಯಾರಿಸಿದ ಕೆಲವು ರಾಸಾಯನಿಕಗಳು ಕ್ಯಾನ್ಸರ್-ವಿರೋಧಿ ಪರಿಣಾಮಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ಅನೇಕ ಸಂಶೋಧನೆಗಳಲ್ಲಿ ಹೇಳಿದ್ದಾರೆ. ಇದನ್ನು ಪ್ರತಿದಿನ ಸೇವಿಸುವ ಮೂಲಕ, ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳನ್ನು ನಿಯಂತ್ರಿಸಬಹುದು.

ಸ್ಟ್ಯಾಮಿನಾ(Stamina) ಹೆಚ್ಚಿಸಲು ಬೆಸ್ಟ್: ಬೀಟ್ರೂಟ್ ಮತ್ತು ಅದರ ಜ್ಯೂಸ್ ವ್ಯಾಯಾಮದ ಸಮಯದಲ್ಲಿ  ಹೃದಯ ಮತ್ತು ಶ್ವಾಸಕೋಶಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತೆ. ಬೀಟ್ರೂಟ್ನಿಂದ ಬಿಡುಗಡೆಯಾದ ನೈಟ್ರಿಕ್ ಆಕ್ಸೈಡ್ ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತೆ. ಹಾಗಾಗಿ ಕೆಲವು ಕ್ರೀಡಾಪಟುಗಳು ವ್ಯಾಯಾಮ ಮಾಡುವಾಗ ಬೀಟ್ರೂಟ್ ತಿನ್ನುತ್ತಾರೆ ಅಥವಾ ಬೀಟ್ರೂಟ್ ಜ್ಯೂಸ್ ಕುಡಿಯುತ್ತಾರೆ.

ಹೃದ್ರೋಗ ಮತ್ತು ಪಾರ್ಶ್ವವಾಯುವನ್ನು(Paralysis) ತಡೆಗಟ್ಟುತ್ತೆ: ಬೀಟ್ ರೂಟ್ ಫೋಲೇಟ್ ನಿಂದ ಸಮೃದ್ಧವಾಗಿದೆ, ಇದು ಜೀವಕೋಶಗಳು ಬೆಳೆಯಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತೆ. ರಕ್ತನಾಳಗಳಿಗೆ ಉಂಟಾಗುವ ಹಾನಿ ನಿಯಂತ್ರಿಸುವಲ್ಲಿ ಫೋಲೇಟ್ ಪ್ರಮುಖ ಪಾತ್ರ ವಹಿಸುತ್ತೆ, ಇದರ ಜೊತೆಗೆ  ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯ ಕಡಿಮೆ ಮಾಡುತ್ತೆ .

ಜೀರ್ಣಕ್ರಿಯೆ(Digestion) ಸುಧಾರಿಸುತ್ತೆ: ಬೀಟ್ರೂಟ್ ನಾರಿನ ಉತ್ತಮ ಮೂಲವಾಗಿದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತೆ ಮತ್ತು ಗ್ಯಾಸ್, ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ನೋವಿನ ಸಮಸ್ಯೆಯನ್ನು ತೆಗೆದುಹಾಕುತ್ತೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ರೆ ನೀವು ಇದನ್ನ ನಿಯಮಿತವಾಗಿ ಸೇವಿಸಬಹುದು.

ಲಿವರ್(Liver) ಆರೋಗ್ಯಕರವಾಗಿರಿಸಿಕೊಳ್ಳಲು: ಬೀಟ್ರೂಟ್ ಅಥವಾ ಅದರ ಜ್ಯೂಸ್ ನಿಯಮಿತವಾಗಿ ಕುಡಿಯುವ ಮೂಲಕ, ಕೆಲವು ಲಿವರ್ ಕಿಣ್ವಗಳ ಪ್ರಮಾಣವು ಹೆಚ್ಚಾಗುತ್ತೆ. ಇವು ಲಿವರನ್ನು ರಕ್ಷಿಸಲು ಸಹಾಯ ಮಾಡುತ್ತವೆ, ಮತ್ತು ಫ್ಯಾಟಿ ಲಿವರ್ ಮತ್ತು ಇತರ ಸಮಸ್ಯೆಗಳಿಂದ ರಕ್ಷಿಸುತ್ತವೆ. ಹಾಗಾಗಿ ಹೆಚ್ಚು ಹೆಲ್ತಿಯಾಗಿರಲು ದಿನನಿತ್ಯ ಬೀಟ್ರೂಟ್ ಸೇವಿಸಿ.  

Latest Videos

click me!