ಪನೀರ್(Paneer) ಸಾಮಾನ್ಯವಾಗಿ ಈಗ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಚ್ಚು ಇಷ್ಟ ಪಟ್ಟು ತಿನ್ನುವ ಆಹಾರ ಪದಾರ್ಥವಾಗಿದೆ. ವಿಶೇಷವಾಗಿ ಮದುವೆಯ ಪಾರ್ಟಿಗಳಲ್ಲಿ, ವಿವಿಧ ರೀತಿಯ ಪನೀರ್ ಡಿಷಸ್ ತಯಾರಿಸಲಾಗುತ್ತೆ, ಅದನ್ನು ಜನರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಪನೀರ್ ಮಸಾಲಾ ಜೊತೆಗೆ, ಪನೀರ್ ಟಿಕ್ಕಾ, ಪನೀರ್ ಪಕೋಡಾಗಳು ಸಹ ಇತ್ತೀಚಿನ ದಿನಗಳಲ್ಲಿ ತುಂಬಾ ಫೇಮಸ್ ಆಗಿದೆ. ಅಂತಹ ಅನೇಕ ಶಾಪ್ಸ್ ಮಾರುಕಟ್ಟೆಯಲ್ಲಿ ಕಂಡುಬರುತ್ತವೆ, ಅಲ್ಲಿ ಜನರ ಗುಂಪು ಸಂಜೆ ಈ ಆಹಾರಗಳನ್ನು ತಿನ್ನೋದನ್ನು ಕಾಣಬಹುದು.
ಪನೀರ್ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಪನೀರ್ ನಲ್ಲಿ ಪ್ರೋಟೀನ್ (Protein) ಹೇರಳವಾಗಿ ಕಂಡುಬರುತ್ತೆ, ಆದರೆ ನಿಮಗೆ ತಿಳಿದಿದ್ಯಾ, ಇದು ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ, ಹೌದು, ಆದ್ರೆ ಪನೀರ್ ಅತಿಯಾಗಿ ಸೇವಿಸಿದ್ರೆ, ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ . ಪನೀರ್ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಹಾನಿ ಉಂಟಾಗುತ್ತೆ ನೋಡೋಣ ಬನ್ನಿ
ಪನೀರ್ ಸೇವನೆಯ ಅನಾನುಕೂಲತೆಗಳು ಹೀಗಿವೆ: ಅಧಿಕ ರಕ್ತದೊತ್ತಡದ (High Blood Pressure) ಸಮಸ್ಯೆಗಳನ್ನು ಹೊಂದಿರುವ ಜನರು ಪನೀರ್ ಸೇವಿಸೋದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಅದು ಸಮಸ್ಯೆಯನ್ನು ಹೆಚ್ಚಿಸುತ್ತೆ. ಯಾಕಂದ್ರೆ ಇದನ್ನು ಸೇವಿಸೋದ್ರಿಂದ ರಕ್ತದೊತ್ತಡ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುತ್ತದೆ. ಆದುದರಿಂದ ಇದನ್ನು ಅವಾಯ್ಡ್ ಮಾಡೋದು ಬೆಸ್ಟ್.
ಹೊಟ್ಟೆಯ ಸಮಸ್ಯೆ ಇರುವವರು ಅಥವಾ ಮಲಬದ್ಧತೆ(Constipation), ಅಸಿಡಿಟಿ ಇತ್ಯಾದಿಗಳಿಂದ ತೊಂದರೆಗೀಡಾದವರು, ಜೀರ್ಣಾಂಗ ವ್ಯವಸ್ಥೆಯನ್ನು ಸುರಕ್ಷಿತವಾಗಿರಿಸಲು ಆಹಾರದಲ್ಲಿ ಪನೀರ್ ಸೇರಿಸಬಾರದು. ಪನೀರ್ ಹೊಟ್ಟೆಯಲ್ಲಿ ಕರಗಲು ಮೂರು ದಿನಗಳನ್ನು ತೆಗೆದುಕೊಳ್ಳುತ್ತೆ. ಇದರ ಸೇವನೆಯು ಮಲಬದ್ಧತೆ, ಅಸಿಡಿಟಿ ಸಮಸ್ಯೆಗಳನ್ನು ಹೆಚ್ಚಿಸುತ್ತೆ.
ಏನಾದರೂ ತಿಂದ ಕೂಡಲೇ ಹೊಟ್ಟೆಯ ಸಮಸ್ಯೆ ನಿಮಗೆ ಕಾಡುತ್ತದೆಯೇ? ಅಂದ್ರೆ ಫುಡ್ ಪಾಯಿಸನ್ (Food Poison)ಸಮಸ್ಯೆಗಳನ್ನು ಹೊಂದಿರುವ ಜನರು ಪನೀರ್ ಸೇವಿಸೋದನ್ನು ತಪ್ಪಿಸಬೇಕು ಯಾಕಂದ್ರೆ ಅದರಲ್ಲಿ ಸಾಕಷ್ಟು ಪ್ರೋಟೀನ್ ಇದೆ, ಆದ್ದರಿಂದ ಇದು ಸಮಸ್ಯೆಯನ್ನು ಇನ್ನೂ ಹೆಚ್ಚಿಸುತ್ತೆ.
ಪನೀರ್ ನೀವು ತುಂಬಾ ಇಷ್ಟ ಪಟ್ರೆ ಸ್ವಲ್ಪ ಪ್ರಮಾಣದಲ್ಲಿ ಅದನ್ನು ಸೇವಿಸಿ ಪರವಾಗಿಲ್ಲ. ಆದರೆ ಪನೀರ್ ಅತಿಯಾಗಿ ಸೇವಿಸಿದ್ರೆ, ಅದು ವಾಕರಿಕೆ, ತಲೆನೋವು(Head ache), ಹಸಿವಾಗದಿರುವುದು ಇತ್ಯಾದಿಗಳಿಗೆ ಕಾರಣವಾಗಬಹುದು. ಹಾಗಾಗಿ ಪನೀರ್ ಸೇವನೆಯನ್ನು ನಿಯಂತ್ರಿಸೋದು ತುಂಬಾ ಒಳ್ಳೇದು.
ಅತಿಯಾದ ಪನೀರ್ ಸೇವನೆಯು ತಲೆನೋವು ಮತ್ತು ಮೈಗ್ರೇನ್(Migraine) ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಪನೀರಿಂದ ದೂರ ಇರೋದು ಹೆಲ್ತ್ ಗೆ ಒಳ್ಳೇದು. ಇಷ್ಟ ಎಂದು ಪ್ರತಿದಿನ ಪನೀರ್ ಮಾಡಿ ತಿಂತಾ ಇದ್ರೆ ಮೈಗ್ರೇನ್ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.
ನೀವು ಗರ್ಭಿಣಿಯೇ(Pregnant)? ಹಾಗಿದ್ರೆ ಪನೀರ್ ನಿಂದ ದೂರ ಇರಿ. ಹೌದು, ಗರ್ಭಿಣಿಯರು ಪನೀರ್ ಸೇವಿಸಬಾರದು. ಇದು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟುಮಾಡುತ್ತೆ ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಪನೀರ್ ಸೇವಿಸಬೇಕು. ಹೀಗಿದ್ದಾಗ ಮಾತ್ರ ನೀವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತೆ.