National Vaccination Day 2023: ಇತಿಹಾಸ, ಮಹತ್ವ ತಿಳಿಯಿರಿ…

First Published Mar 16, 2023, 5:16 PM IST

ಭಾರತವು ಈಗ ಎಂಆರ್ ವ್ಯಾಕ್ಸಿನೇಷನ್ ಅಭಿಯಾನದ ಮೂಲಕ 324 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಮೂಲಕ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಯತ್ತ ಸಾಗುತ್ತಿದೆ. ಮಾರ್ಚ್ 16 ನ್ನು ರಾಷ್ಟ್ರೀಯ ವ್ಯಾಕ್ಸಿನೇಷನ್ ದಿನ ಎಂದು ಆಚರಿಸಲಾಗುತ್ತೆ.

ಮಾನವನ ಆರೋಗ್ಯದಲ್ಲಿ ಲಸಿಕೆಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ 16 ರಂದು ದೇಶಾದ್ಯಂತ ರಾಷ್ಟ್ರೀಯ ವ್ಯಾಕ್ಸಿನೇಷನ್ ದಿನ (National Vaccination Day) ಅಥವಾ ರಾಷ್ಟ್ರೀಯ ರೋಗನಿರೋಧಕ ದಿನವನ್ನು ಆಚರಿಸಲಾಗುತ್ತದೆ. ಮಾರಣಾಂತಿಕ ರೋಗಗಳ ವಿರುದ್ಧ ಹೋರಾಡಲು ಲಸಿಕೆಗಳ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ ಮತ್ತು ಪ್ರತಿ ಮಗುವಿಗೆ ವ್ಯಾಕ್ಸಿನೇಷನ್ ಖಚಿತಪಡಿಸಿಕೊಳ್ಳಲು ವೈದ್ಯರು, ಮುಂಚೂಣಿ ಆರೋಗ್ಯ ಕಾರ್ಯಕರ್ತರ ಕಠಿಣ ಪರಿಶ್ರಮವನ್ನು ಗುರುತಿಸುತ್ತದೆ ಮತ್ತು ಪ್ರಶಂಸಿಸುತ್ತದೆ.

ವ್ಯಾಕ್ಸಿನೇಷನ್ ಸಾರ್ವಜನಿಕ ಆರೋಗ್ಯದ (public health) ಪ್ರಮುಖ ಅಂಶ. ಲಸಿಕೆಗಳು ಅದೇ ರೋಗಕಾರಕದಿಂದ ಭವಿಷ್ಯದಲ್ಲಿ ಉಂಟಾಗಬಹುದಾದಂತಹ ರೋಗಗಳ ವಿರುದ್ಧ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ದಡಾರ, ಚಿಕನ್ ಪೋಕ್ಸ್, ಟೆಟನಸ್, ರುಬೆಲ್ಲಾ, ಪೋಲಿಯೊ ಮತ್ತು ಇತ್ತೀಚೆಗೆ ಕೋವಿಡ್ -19 ನಂತಹ ಹಲವಾರು ಮಾರಣಾಂತಿಕ ಕಾಯಿಲೆಗಳ ಹರಡುವಿಕೆಯನ್ನು ಲಸಿಕೆ ಕಡಿಮೆ ಮಾಡುತ್ತದೆ.

Latest Videos


ಇತಿಹಾಸ:
1995 ರಲ್ಲಿ ಭಾರತ ಸರ್ಕಾರವು ದೇಶದಿಂದ ಪೋಲಿಯೊವನ್ನು ನಿರ್ಮೂಲನೆ ಮಾಡಲು ಪಲ್ಸ್ ಪೋಲಿಯೊ (pulse polio) ರೋಗನಿರೋಧಕ ಕಾರ್ಯಕ್ರಮವನ್ನು ಅಧಿಕೃತವಾಗಿ ಪ್ರಾರಂಭಿಸಿದಾಗ ಈ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಮಾರ್ಚ್ 16, 1995 ರಂದು, 1988 ರಲ್ಲಿ ಪ್ರಾರಂಭವಾದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಜಾಗತಿಕ ಪೋಲಿಯೊ ನಿರ್ಮೂಲನಾ ಉಪಕ್ರಮದ ಭಾಗವಾಗಿ ಭಾರತದಲ್ಲಿ ಓರಲ್ ಪೋಲಿಯೊ ಲಸಿಕೆಯ ಮೊದಲ ಡೋಸ್ ನೀಡಲಾಯಿತು. 'ದೋ ಬೂಂದ್ ಜಿಂದಗಿ ಕಿ' ಎಂಬ ರಾಷ್ಟ್ರವ್ಯಾಪಿ ಅಭಿಯಾನದ ಮೂಲಕ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಲಾಯಿತು.

ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ 0-5 ವರ್ಷ ವಯಸ್ಸಿನ ಮಕ್ಕಳಿಗೆ ಎರಡು ಹನಿ ಲಸಿಕೆಯನ್ನು ಮೌಖಿಕವಾಗಿ ನೀಡಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪಶ್ಚಿಮ ಬಂಗಾಳದ ಹೌರಾದಲ್ಲಿ ಕೊನೆಯ ಪೋಲಿಯೊ ಪ್ರಕರಣ 2011 ರಲ್ಲಿ ವರದಿಯಾಗಿದೆ ಮತ್ತು WHO ಮಾರ್ಚ್ 27, 2014 ರಂದು ಭಾರತವನ್ನು ಪೋಲಿಯೊ ಮುಕ್ತ ಎಂದು ಘೋಷಿಸಿತು.

ಭಾರತವು ಈಗ ಎಂಆರ್ ವ್ಯಾಕ್ಸಿನೇಷನ್ ಅಭಿಯಾನದ ಮೂಲಕ 324 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಮೂಲಕ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಯತ್ತ ಸಾಗುತ್ತಿದೆ. ಈ ಬಗ್ಗೆ ರಾಷ್ಟ್ರದ ಮೂಲೆ ಮೂಲೆಯಲ್ಲಿ ಜನರಿಗೆ ಜಾಗೃತಿ ನೀಡುವ ಸಲುವಾಗಿ ಇಂದಿನ ದಿನವನ್ನು ವ್ಯಾಕ್ಸಿನೇಷನ್ ದಿನವನ್ನಾಗಿ ಆಚರಿಸಲಾಗುತ್ತದೆ. 

ಪ್ರಾಮುಖ್ಯತೆ:
ಮಕ್ಕಳು ಮತ್ತು ವಯಸ್ಕರಿಗೆ ಲಸಿಕೆ ನೀಡುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ವ್ಯಾಕ್ಸಿನೇಷನ್ ದಿನವನ್ನು ಆಚರಿಸಲಾಗುತ್ತದೆ. ಹೆಚ್ಚು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ಅವುಗಳನ್ನು ದೂರವಿಡಲು ವ್ಯಾಕ್ಸಿನೇಷನ್ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಇದು ಲಸಿಕೆ ಪಡೆಯುವ ಅಗತ್ಯವನ್ನು ಸೂಚಿಸುತ್ತದೆ ಮತ್ತು ಆರೋಗ್ಯವಾಗಿರಲು ಪ್ರೋತ್ಸಾಹಿಸುತ್ತದೆ.

ಕೋವಿಡ್ -19  (Covid 19) ವಿರುದ್ಧ ರೋಗನಿರೋಧಕ ಶಕ್ತಿಯನ್ನು ಪಡೆಯಲು ಒಂದು ಲಸಿಕೆ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಹೇಗೆ ಸಹಾಯ ಮಾಡಿತು ಎಂಬುದಕ್ಕೆ ಭಾರತ ಇತ್ತೀಚೆಗೆ ಸಾಕ್ಷಿಯಾಗಿದೆ. ದೇಶದಲ್ಲಿ ಈವರೆಗೆ 2,20,64,71,236 ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
 

ಥೀಮ್:
ಪ್ರತಿ ವರ್ಷ, ಈ ದಿನವನ್ನು ನಿರ್ದಿಷ್ಟ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತದೆ. 2022 ರಲ್ಲಿ, 'ಲಸಿಕೆಗಳು ಎಲ್ಲರಿಗೂ ಕೆಲಸ ಮಾಡುತ್ತವೆ' ಎಂಬುದು ವಿಷಯವಾಗಿತ್ತು. ಆದಾಗ್ಯೂ, ಈ ವರ್ಷದ ಥೀಮ್ ಅನ್ನು ಇನ್ನೂ ಘೋಷಿಸಲಾಗಿಲ್ಲ.

click me!