ಸುಸ್ತು ಸುಸ್ತು ಆಗುತ್ತಾ? ನೆಗ್ಲೆಕ್ಟ್ ಮಾಡ್ಬೇಡಿ, ಇದುTatt syndrome ಇರಬಹುದು!

First Published | Mar 16, 2023, 12:26 PM IST

ಕೆಲವು ಜನರು ಸಾಮಾನ್ಯವಾಗಿ ಯಾವುದೇ ರೀಸನ್ ಇಲ್ಲದೇ ತುಂಬಾ ದಣಿಯುತ್ತಾರೆ. ಟೆಸ್ಟ್ ಮಾಡಿದ ನಂತರ, ವ್ಯಕ್ತಿ ದೈಹಿಕವಾಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎಂದು ತೋರುತ್ತೆ, ಇದು ಯಾವುದೇ ಮಾನಸಿಕ ಸಮಸ್ಯೆಯ ಲಕ್ಷಣವೇ? ಅದರ ಬಗ್ಗೆ ಹೆಚ್ಚಾಗಿ ತಿಳಿಯಲು ಮುಂದೆ ಓದಿ.
 

ನಿಮಗೂ ದಿನಪೂರ್ತಿ ಆಯಾಸದ ಅನುಭವ ಆಗ್ತಿದ್ಯಾ? ಟೆಸ್ಟ್ ಮಾಡ್ಸಿದ್ರೆ ಎಲ್ಲಾನೂ ನಾರ್ಮಲ್ ಆಗಿದ್ಯಾ? ಹಾಗಿದ್ರೆ ನಿಮಗೆ ಆಗಿರೋದು ಏನು? ಇದು ಟಾಟ್ ಸಿಂಡ್ರೋಮ್ (Tatt Syndrome). ಏನಿದು ಅಂತಾ ಯೋಚನೆ ಮಾಡ್ತೀರಾ? ಟಾಟ್ ಸಿಂಡ್ರೋಮ್ ಆಧುನಿಕ ಜೀವನಶೈಲಿಗೆ ಸಂಬಂಧಿಸಿದ ಮಾನಸಿಕ ಸಮಸ್ಯೆ (mental problem). ಇದರಲ್ಲಿ ವ್ಯಕ್ತಿ ಎಲ್ಲಾ ಸಮಯದಲ್ಲೂ ದಣಿವನ್ನು ಅನುಭವಿಸುತ್ತಾನೆ. ಪುರುಷರಿಗಿಂತ ಮಹಿಳೆಯರು ಈ ಸಮಸ್ಯೆಯಿಂದ ಹೆಚ್ಚು ತೊಂದರೆಗೀಡಾಗುತ್ತಾರೆ. 

ಮನಃಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ, ಪ್ರತಿ 10 ಜನರಲ್ಲಿ ಒಬ್ಬರು ಟಾಟ್ ಸಿಂಡ್ರೋಮ್‌ಗೆ ಬಲಿಯಾಗುತ್ತಾರೆ. ಆದರೆ ಜನರು ಇದನ್ನು ಕೆಲಸದಿಂದ ಉಂಟಾಗುವ ಸಣ್ಣ ಆಯಾಸವೆಂದು (tiredness) ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಕ್ರಮೇಣ ಈ ಸಮಸ್ಯೆ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತೆ. ಮನಸ್ಥಿತಿಯಲ್ಲಿ ಕಿರಿಕಿರಿ ಉಂಟಾಗುತ್ತೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಅದರತ್ತ ಗಮನ ಹರಿಸುವ ಮೂಲಕ, ನೀವು ಈ ಸಮಸ್ಯೆಯನ್ನು ಸುಲಭವಾಗಿ ತೊಡೆದುಹಾಕಬಹುದು.

Tap to resize

ಪ್ರಮುಖ ರೋಗಲಕ್ಷಣಗಳು ಹೀಗಿವೆ 
ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡಿದ ನಂತರ ದಣಿವನ್ನು ಅನುಭವಿಸುತ್ತಾರೆ, ಆದರೆ ಎರಡು-ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆದ ನಂತರ, ಈ ಸಮಸ್ಯೆ ಅದೇ ಸರಿ ಹೋಗುತ್ತೆ, ಆದರೆ ವಿಶ್ರಾಂತಿಯ ಹೊರತಾಗಿಯೂ, ಒಬ್ಬ ವ್ಯಕ್ತಿಯು ಸತತ ಆರು ತಿಂಗಳು ದಣಿದಿದ್ದರೆ, ಅದು ಟಾಟ್ ಸಿಂಡ್ರೋಮ್ ಲಕ್ಷಣವಾಗಿರಬಹುದು. 

ಕಣ್ಣು ರೆಪ್ಪೆಗಳಲ್ಲಿ ಭಾರ, ಏಕಾಗ್ರತೆ, ಉತ್ಸಾಹ ಮತ್ತು ಶಕ್ತಿಯ ಕೊರತೆ, ತುಂಬಾ ಹತಾಶೆ ಆದಂತಹ ಭಾವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆ ಇತ್ಯಾದಿಗಳು ಸಹ ಇದರ ಮುಖ್ಯ ಲಕ್ಷಣಗಳಾಗಿವೆ. ಈ ಬಗ್ಗೆ ನೀವು ಎಚ್ಚರದಿಂದ ಇರೋದು ಉತ್ತಮ.

ಟಾಟ್ ಸಿಂಡ್ರೋಮ್ಗೆ ಕಾರಣವೇನು?
ಒಬೆಸಿಟಿ, ಆತಂಕ ಮತ್ತು ಒತ್ತಡವು ಭಾವನಾತ್ಮಕ ಕಾರಣಗಳಾಗಿವೆ. ಇದಲ್ಲದೆ, ಅತಿಯಾದ ಕೆಫೀನ್, ಆಲ್ಕೋಹಾಲ್ ಮತ್ತು ಜಂಕ್ ಫುಡ್ ಸೇವನೆ, ತಡರಾತ್ರಿಯವರೆಗೆ ಮೊಬೈಲ್‌ನಲ್ಲಿ (using mobile till late night) ಸಮಯ ಕಳೆಯೋದು ಮುಂತಾದ ಕೆಟ್ಟ ಅಭ್ಯಾಸಗಳು ಈ ಸಮಸ್ಯೆಯ ರೋಗಲಕ್ಷಣಗಳನ್ನು ಹೆಚ್ಚಿಸುತ್ತವೆ.

tired

ತಡೆಗಟ್ಟುವಿಕೆ ಮತ್ತು ಚಿಕಿತ್ಸೆ 
- ಸಾಧ್ಯವಾದಷ್ಟು ಮನೆಕೆಲಸವನ್ನು ನೀವೇ ಮಾಡಿ, ದೈಹಿಕ ಚಟುವಟಿಕೆಯು ಮಾನಸಿಕ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತೆ.
- ನಿಯಮಿತ ಯೋಗ ಮತ್ತು ಧ್ಯಾನವು ಸಹ ಪರಿಹಾರ ನೀಡುತ್ತೆ.
- ಈ ಪ್ರಯತ್ನಗಳು ರೋಗಲಕ್ಷಣಗಳಲ್ಲಿ ಯಾವುದೇ ಬದಲಾವಣೆಯನ್ನು ತೋರಿಸದಿದ್ದರೆ, ಮನಃಶಾಸ್ತ್ರಜ್ಞರ ಸಲಹೆ ಪಡೆಯೋದು ಒಳ್ಳೇದು.
- ಕಾಗ್ನೇಟಿವ್ ಬಿಹೇವಿಯರ್ ಥೆರಪಿ ಸಹಾಯದಿಂದ ಇದರ ರೋಗಲಕ್ಷಣಗಳನ್ನು ನಿಯಂತ್ರಿಸಬಹುದು.

Latest Videos

click me!