ನಾಭಿಗೆ ಪ್ರತಿದಿನ ಹಿಂಗು ಹಚ್ಚಿ ಆಯುರ್ವೇದ ಮಾತ್ರವಲ್ಲ, ಜ್ಯೋತಿಷ್ಯ ಪ್ರಯೋಜನವನ್ನೂ ಪಡೆಯಿರಿ

First Published | May 29, 2024, 6:14 PM IST

ಹಿಂಗು ಅಡುಗೆಗೆ ಮಾತ್ರ ಪ್ರಯೋಜನ ನೀಡೋದಲ್ಲ, ಇದರಿಂದ ಅನೇಕ ಜ್ಯೋತಿಷ್ಯ ಪ್ರಯೋಜನಗಳೂ ಕೂಡ ಇವೆ. ಇದನ್ನು ನಾಭಿ ಮೇಲೆ ಹಚ್ಚೋದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ.
 

ಜ್ಯೋತಿಷ್ಯದಲ್ಲಿ (Astrology) ಅನೇಕ ವಿಷಯಗಳನ್ನು ಹೇಳಲಾಗಿದೆ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿದರೆ ಜೀವನ ಸಂತೋಷದಿಂದ ತುಂಬಿರೋದು ಗ್ಯಾರಂಟಿ. ಇವುಗಳಲ್ಲಿ ಒಂದು ನಾಭಿ ಪ್ರದೇಶದಲ್ಲಿ ಹಿಂಗು ಬಳಸುವುದು. ಹಿಂಗನ್ನು ನಾಭಿಗೆ ಹಚ್ಚೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ. 

ಹಿಂಗು ಯಾವುದೇ ನಕಾರಾತ್ಮಕ ಶಕ್ತಿಯನ್ನು (negative energy) ದೂರವಿರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ಚಿಕ್ಕ ಮಕ್ಕಳ ನಾಭಿ ಅಥವಾ ಕೂದಲಿಗೆ ಹಿಂಗು ಹಚ್ಚಲಾಗುತ್ತೆ. ಹಿಂಗಿನ ಕಟುವಾದ ವಾಸನೆಯು ದುಷ್ಟ ಶಕ್ತಿಗಳನ್ನು ದೂರವಿರಿಸುತ್ತದೆ ಮತ್ತು ಯಾವುದೇ ಅಹಿತಕರ ಘಟನೆ ಆಗದಂತೆ ಇದು ಕಾಪಾಡುತ್ತದೆ. ಜ್ಯೋತಿಷ್ಯದ ಪ್ರಕಾರ, ಹಿಂಗು ಬುಧ ಗ್ರಹಕ್ಕೆ ಸಂಬಂಧಿಸಿದೆ, ಇದು ಸಂವಹನ, ಬುದ್ಧಿವಂತಿಕೆ ಮತ್ತು ನರಮಂಡಲವನ್ನು ನಿಯಂತ್ರಿಸುತ್ತದೆ. ಬುಧನನ್ನು ನಾಭಿ ಚಕ್ರದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ, ಇದು ವೈಯಕ್ತಿಕ ಶಕ್ತಿ, ಆತ್ಮವಿಶ್ವಾಸ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಗ್ರಹವಾಗಿದೆ. ಹೊಕ್ಕುಳಿನ ಮೇಲೆ ಹಿಂಗು ಹಚ್ಚುವುದರಿಂದ ಬುಧ ಸಕಾರಾತ್ಮಕವಾಗಿ ವರ್ತಿಸೋದಕ್ಕೆ ಆರಂಭಿಸುತ್ತಾನೆ. ಇದರಿಂದ ಆರೋಗ್ಯ ಚೆನ್ನಾಗಿರುತ್ತೆ ಎಂದು ಹೇಳಲಾಗುವುದು. 
 

Latest Videos


ನಾಭಿಯ ಮೇಲೆ ಹಿಂಗು ಹಚ್ಚುವುದರಿಂದ ಬುಧ ಗ್ರಹ ಬಲವಾಗುತ್ತದೆ
ಜಾತಕದಲ್ಲಿ ಬುಧ ದುರ್ಬಲವಾಗಿದ್ದರೆ, ಅದು ಬುದ್ಧಿವಂತಿಕೆ ಮತ್ತು ನಡವಳಿಕೆಯ ಮೇಲೂ ಭಾರಿ ಪರಿಣಾಮ ಬೀರುತ್ತದೆ. ಅಂತಹ ವ್ಯಕ್ತಿಯು ಯಾವುದೇ ಕೆಲಸದಲ್ಲಿ ತ್ವರಿತವಾಗಿ ಯಶಸ್ಸನ್ನು ಪಡೆಯುವುದಿಲ್ಲ, ಮತ್ತು ಕೆಲಸಕ್ಕೆ ಸರಿಯಾದ ಫಲಿತಾಂಶವೂ ಸಿಗೋದಿಲ್ಲ. ಇನ್ನು ಬುಧವನ್ನು ಸಂವಹನ ಮತ್ತು ಬುದ್ಧಿವಂತಿಕೆಯ ಗ್ರಹವೆಂದು ಕರೆಯಲಾಗುತ್ತದೆ . ಅದು ಸಮತೋಲನ ಕಳೆದುಕೊಂಡಾಗ ಅದರ ಪರಿಣಾಮವು ಆತಂಕ, ಚಡಪಡಿಕೆ ಮತ್ತು ಅನೇಕ ಜೀರ್ಣಕಾರಿ ಸಮಸ್ಯೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆವಾಗ ನೀವು ಹೊಕ್ಕುಳಿನ ಭಾಗದಲ್ಲಿ ಹಿಂಗು ಹಚ್ಚಿದಾಗ, ಅದು ಬುಧವನ್ನು ಬಲಪಡಿಸುತ್ತದೆ. ಇದರಿಂದ ಜೀರ್ಣಕಾರಿ ಸಮಸ್ಯೆಗಳು (digestion problem) ಸಹ ದೂರವಾಗುತ್ತವೆ. 

ಹಿಂಗು ನಾಭಿ ಚಕ್ರವನ್ನು ಬಲಪಡಿಸುತ್ತದೆ
ಜ್ಯೋತಿಷ್ಯದ ಪ್ರಕಾರ, ಮಣಿಪುರ ಚಕ್ರವು (Manipur Chakra) ನಿಮ್ಮ ಹೊಕ್ಕುಳಿನ ಪ್ರದೇಶದಲ್ಲಿದೆ ಎನ್ನಲಾಗುವುದು, ಇದು ವೈಯಕ್ತಿಕ ಶಕ್ತಿ, ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಈ ಚಕ್ರವು ಸಮತೋಲಿತ ಮತ್ತು ಸಕ್ರಿಯವಾದಾಗ, ವ್ಯಕ್ತಿಯು ಸಬಲನಾಗುತ್ತಾನೆ, ಪರಿಶ್ರಮಿಯಾಗುತ್ತಾನೆ. ನೀವು ನಾಭಿಯ ಮೇಲೆ ಹಿಂಗು ಹಚ್ಚಿದರೆ ಅದು ಮಣಿಪುರ ಚಕ್ರವನ್ನು ಸಕ್ರಿಯಗೊಳಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ, ಇದು ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿಸುತ್ತೆ.  ದೇಹವು ಶಕ್ತಿಯುತವಾಗುತ್ತೆ. 

ನಾಭಿಯ ಮೇಲೆ ಹಿಂಗು ಹಚ್ಚುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ
ಆಯುರ್ವೇದದಲ್ಲಿ, (Ayurveda) ಹಿಂಗು ಅದರ ಜೀರ್ಣಕಾರಿ ಗುಣಲಕ್ಷಣಗಳು ಮತ್ತು ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಹೊಕ್ಕುಳಿನ ಮೇಲೆ ಹಿಂಗು ಹಚ್ಚುವುದರಿಂದ ಆರೋಗ್ಯಕರ ಜೀರ್ಣಕ್ರಿಯೆ ಸಾಧ್ಯವಾಗುತ್ತೆ. ಇದರಿಂದಾಗಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಒಟ್ಟಾರೆ ಆರೋಗ್ಯ ಯೋಗಕ್ಷೇಮವನ್ನು ಸುಧಾರಿಸುತ್ತದೆ. ಮನೆಮದ್ದಾಗಿ, ಚಿಕ್ಕ ಮಕ್ಕಳಿಗೆ ಹೊಟ್ಟೆ ನೋವು ಅಥವಾ ಗ್ಯಾಸ್ ನಂತಹ ಸಮಸ್ಯೆಗಳಿದ್ದಾಗ ಅವರ ಹೊಕ್ಕುಳಿನಲ್ಲಿ ಹಿಂಗು ಹಚ್ಚುತ್ತಾರೆ. ಇದರಿಂದ ಬೇಗನೆ ಹೊಟ್ಟೆನೋವು ನಿವಾರಣೆಯಾಗುತ್ತೆ. 

ನಾಭಿಯ ಮೇಲೆ ಹಿಂಗು ಹಚ್ಚುವುದರಿಂದ ನರಮಂಡಲ ಕಂಟ್ರೋಲ್ ನಲ್ಲಿರುತ್ತೆ
ಜ್ಯೋತಿಷ್ಯದಲ್ಲಿ ಬುಧನ ಪ್ರಭಾವವು ನರಮಂಡಲದೊಂದಿಗೆ ನಿಕಟ ಸಂಬಂಧ ಹೊಂದಿದೆ ಮತ್ತು ಬುಧ ಶಕ್ತಿಯಲ್ಲಿನ ಅಸಮತೋಲನವು ನರಗಳ ಉದ್ವೇಗ, ಆತಂಕ ಮತ್ತು ಚಡಪಡಿಕೆ ಮೊದಲಾದ ಸಮಸ್ಯೆಗೆ ಕಾರಣವಾಗುತ್ತದೆ. ನಾಭಿಯ ಭಾಗಕ್ಕೆ ಹಿಂಗು ಹಚ್ಚುವುದರಿಂದ ನಿಮ್ಮ ನರಮಂಡಲವನ್ನು ನಿಯಂತ್ರಿಸಬಹುದು ಮತ್ತು ಇದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ನಾಭಿಯ ಮೇಲೆ ಹಿಂಗು ಹಚ್ಚುವುದರಿಂದ ಮಾನಸಿಕ ಸಾಮರ್ಥ್ಯಗಳನ್ನು ತೀಕ್ಷ್ಣಗೊಳಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ನಾಭಿಯ ಮೇಲೆ ಹಿಂಗು ಹೇಗೆ ಹಚ್ಚುವುದು?
ನೀವು ಹೊಕ್ಕುಳಿನ (navel) ಮೇಲೆ ಹಿಂಗು ಹಚ್ಚೋದಾದರೆ, ಅದು ಉತ್ತಮ ಗುಣಮಟ್ಟದ್ದಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಮೊದಲಿಗೆ, ಒಂದು ಚಮಚ ನೀರಿನಲ್ಲಿ ಒಂದು ಚಿಟಿಕೆ ಹಿಂಗಿನ ಪುಡಿಯನ್ನು ಬೆರೆಸಿ ಅದರ ಪೇಸ್ಟ್ ತಯಾರಿಸಿ.
ಬೆಳಿಗ್ಗೆ ಸ್ನಾನ ಮಾಡಿದ ನಂತರ ಈ ಪೇಸ್ಟ್ ಅನ್ನು ಹೊಕ್ಕುಳಿನ ಭಾಗಕ್ಕೆ ಹಚ್ಚಿ.
ಹಿಂಗಿನ ಸುವಾಸನೆ ನಿಮ್ಮ ಚಕ್ರಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಜ್ಯೋತಿಷ್ಯ ಮತ್ತು ಆಯುರ್ವೇದ ಎರಡರಲ್ಲೂ, ನಾಭಿಗೆ ಹಿಂಗು ಹಚ್ಚುವುದು ಉಪಯುಕ್ತವೆಂದು ಪರಿಗಣಿಸಲಾಗಿದೆ. ಇದರ ಬಳಕೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. 

click me!