ರಾತ್ರಿ ಮಲಗಿಕೊಂಡೇ ತೂಕ ಇಳಿಸಬಹುದು? ಹೇಗೆ ಗೊತ್ತಾ?

First Published | May 26, 2024, 7:02 PM IST

ಇಂದಿನ ಆಧುನಿಕ ಜೀವನಶೈಲಿಗೆ ಅಡಿಕ್ಟ್ ಆಗಿರುವ ಜನರು ಸ್ಥೂಲಕಾಯದಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲಿಯೂ ಮಹಾನಗರಗಳಲ್ಲಿ ವಾಸಿಸುವ ಜನರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

30ನೇ ವಯಸ್ಸಿನಲ್ಲಿಯೇ 40ರಂತೆ ಯುವಕ/ಯುವತಿಯರು ಕಾಣುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಮಯವಿಲ್ಲದ ಸಮಯದಲ್ಲಿ ಕೆಲಸ, ನಿದ್ದೆ, ಆಹಾರ ಸೇವನೆ ಎಲ್ಲವೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ತುಂಬಾ ಕಡಿಮೆ ಜನ ಮಾತ್ರ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ.

ತೂಕ ಇಳಿಸಲು ಜಿಮ್, ಯೋಗ, ವಾಕಿಂಗ್ ಮಾಡುತ್ತಾರೆ. ಕೆಲವರು ಆಹಾರ ಸೇವನೆ ಕಟ್ಟುನಿಟ್ಟಿನ ಪಥ್ಯೆ ಮಾಡುತ್ತಾರೆ. ಬಹುತೇಕರು ಇದೆಲ್ಲಾ ಮಾಡೋದಕ್ಕೆ ಸಮಯ ಎಲ್ಲಿದೆ ಎಂದು ಕೇಳುತ್ತಾರೆ. ಕೆಲಸ ಮುಗಿಸಿ ಬರೋ ವೇಳೆಗೆ ದೇಹ ವಿಶ್ರಾಂತಿ ಕೇಳುತ್ತದೆ. ಇಂತಹ ಸಮಯದಲ್ಲಿ ವಾಕಿಂಗ್, ಜಿಮ್‌ಗೆ ಯಾವಾಗ ಹೋಗಬೇಕು ಎಂದು ಹೇಳುತ್ತಾರೆ.

Tap to resize

ಇಂದು ನಾವು ನಿಮಗೆ ಯಾವುದೇ ಜಿಮ್, ವಾಕಿಂಗ್, ಕಸರತ್ತು ನಡೆಸದೇ ಸರಳವಾಗಿ ತೂಕ ಇಳಿಸೋದು ಹೇಗೆ ಅಂತ ಹೇಳುತ್ತಿದ್ದೇವೆ. ಈ ಟಿಪ್ಸ್ ಫಾಲೋ ಮಾಡಿದರೆ ಸರಳವಾಗಿ ಹೊಟ್ಟೆಯ ಸುತ್ತಲೂ ಸಂಗ್ರಹಗೊಂಡಿರುವ ಕೊಬ್ಬು ಕರಗಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದಕ್ಕಾಗಿ ನೀವು ರಾತ್ರಿ ಮಲಗುವ ಮೊದಲು ಒಂದು ಕೆಲಸ ಮಾಡಬೇಕು. ಈ ಒಂದು ಕೆಲಸ ಮಾಡೋದರಿಂದ ಮಲಗಿದ ಮೇಲೆ ದೇಹದ ತೂಕ ಇಳಿಕೆಯಾಗುತ್ತದೆ. ಆದ್ರೆ ಇದರ ಪರಿಣಾಮ ಒಂದೆರಡು ದಿನಕ್ಕೆ ಕಾಣಲ್ಲ. ಇದೊಂದು ನಿಧಾನ ಪ್ರಕ್ರಿಯೆಯಾಗಿದ್ದು, ದಪ್ಪ ಆದವರು ಅಥವಾ ದಪ್ಪ ಆಗಬಾರದು ಅಂತ ಅಂದುಕೊಳ್ಳೋರು ಈ ಟಿಪ್‌ ಫಾಲೋ ಮಾಡಬಹುದು.

ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿನೀರು (luke warm water drinking) ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಬಿಸಿನೀರು ಕುಡಿಯೋದರಿಂದ ರಾತ್ರಿ ಸೇವಿಸಿದ ಆಹಾರ ಬೇಗ ಜೀರ್ಣವಾಗುತ್ತದೆ. ಇದರ ಜೊತೆಗೆ ಜೀರ್ಣಶಕ್ತಿ ಹೆಚ್ಚಳವಾಗುತ್ತದೆ. ಬಿಸಿನೀರು ಫ್ಯಾಟ್‌ ಬರ್ನಿಂಗ್ ಕೆಲಸ ಮಾಡುತ್ತದೆ.

ಬಿಸಿನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಬಿಸಿನೀರು ಸೇವನೆ ಸೂಕ್ಷ್ಮಾಣು ಜೀವಿಗಳಿಂದ ನಿಮ್ಮ ದೇಹವನ್ನು ರಕ್ಷಣೆ ಮಾಡುತ್ತದೆ. ವಾತಾವರಣ ಬದಲಾವಣೆ ಸಂದರ್ಭದಲ್ಲಿಯೂ ಬಿಸಿನೀರು ಕುಡಿಯೋದು ಒಳ್ಳೆಯದು. ಒಂದು ಲೋಟ ಬಿಸಿನೀರು ಆರೋಗ್ಯಕ್ಕೆ ಒಳ್ಳೆಯದು.

ಈ ಎಲ್ಲದರ ಜೊತೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಫಾಸ್ಟ್‌ಫುಡ್ ಹೆಚ್ಚು ಕೊಲೆಸ್ಟ್ರಾಲ್ ಸಂಗ್ರಹಕ್ಕೆ ಕಾರಣವಾಗುತ್ತದೆ. ರಾತ್ರಿ ಊಟ ಲಘು ಆಗಿರುವಂತೆ ಕಾಳಜಿ ವಹಿಸಬೇಕು. ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯೋದರಿಂದಲೂ ಹಂತ ಹಂತವಾಗಿ ತೂಕ ಇಳಿಸಬಹುದಾಗಿದೆ.

Latest Videos

click me!