ಜಾಂಡೀಸನ್ನು ಕಾಮಾಲೆ (Jaundice) ಎಂದೂ ಕರೆಯುತ್ತಾರೆ. ಈ ರೋಗದ ಬಗ್ಗೆ ನಿಮಗೂ ತಿಳಿದಿರಬೇಕು ಅಲ್ವಾ? ಈ ರೋಗ ಇದ್ರೆ ಆ ವ್ಯಕ್ತಿಯ ಚರ್ಮ ಅಥವಾ ಕಣ್ಣುಗಳ ಬಿಳಿ ಭಾಗಗಳು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ಕಾಮಾಲೆ ದೇಹದಲ್ಲಿರುವ ದ್ರವಗಳನ್ನು ಸಹ ಬದಲಾಯಿಸಬಹುದು, ಉದಾಹರಣೆಗೆ ಮೂತ್ರದ ಬಣ್ಣವೂ ಹಳದಿಯಾಗುತ್ತೆ .
ಕಾಮಾಲೆ ರೋಗದಲ್ಲಿ, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಯಾಕಂದ್ರೆ ಯಾವುದೇ ರೀತಿಯ ನಿರ್ಲಕ್ಷ್ಯವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತೆ. ಕಾಮಾಲೆ ಇದ್ದಾಗ ವೈದ್ಯರು ಕೆಲವು ಆಹಾರ ತಿನ್ನಬಾರದು ಎಂದು ಸಲಹೆ ನೀಡುತ್ತಾರೆ ಯಾಕಂದ್ರೆ ಅವು ಯಕೃತ್ತಿನ (Liver) ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಕಾಮಾಲೆ ಹೊಂದಿರುವಾಗ ಏನನ್ನು ತಿನ್ನಬಾರದು ಎಂಬುದನ್ನು ತಿಳಿಯೋಣ.
ನಿಮಗೆ ಕಾಮಾಲೆ ಇದ್ದಾಗ ಏನು ತಿನ್ನಬಾರದು?
ಫ್ರೈಡ್ ಫುಡ್ (Fried food)
ಜಾಂಡೀಸ್ ರೋಗಿಗಳು ಮೊದಲನೇಯದಾಗಿ ಫ್ರೈಡ್ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು, ಏಕೆಂದರೆ ಇದು ಯಕೃತ್ತಿನ ಮೇಲೂ ಪರಿಣಾಮ ಬೀರುತ್ತೆ. ಕಾಮಾಲೆಯಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಸಾಧ್ಯವಾದಷ್ಟು ಸಿಂಪಲ್ ಫುಡ್ ತಿನ್ನಿ.
ಚಹಾ ಮತ್ತು ಕಾಫಿ(Coffee)
ಚಹಾ ಮತ್ತು ಕಾಫಿ ಹೆಚ್ಚು ಕುಡಿಯಬಾರದು ಅನ್ನೋದನ್ನು ತುಂಬಾ ಸಲ ಕೇಳಿರುತ್ತೀರಿ. ಕೆಫೀನ್ ಚಹಾ ಮತ್ತು ಕಾಫಿಯಲ್ಲಿ ಕಂಡುಬರುತ್ತೆ, ಇದು ಆರೋಗ್ಯಕ್ಕೆ ಹಾನಿಕಾರಕ, ವಿಶೇಷವಾಗಿ ಕಾಮಾಲೆ ರೋಗಿಗಳಿಗೆ ಇದು ಅಪಾಯ, ಆದ್ದರಿಂದ ಅದನ್ನು ತಪ್ಪಿಸಿ.
ಜಂಕ್ ಫುಡ್ಸ್(Junk Food)
ಸಹಜವಾಗಿ, ಕಾಮಾಲೆ ಇದ್ದಾಗ ತಿನ್ನಲು ಮನಸ್ಸಿರೋದಿಲ್ಲ, ಆದ್ದರಿಂದ, ಮನಸ್ಸಿಗೆ ಖುಷಿ ನೀಡುವ ಆಹಾರ ತಿನ್ನಬೇಕು ಎಂದು ತೋರುತ್ತೆ ಮತ್ತು ಅದಕ್ಕಾಗಿ, ಜನರು ಜಂಕ್, ಸಂಸ್ಕರಿಸಿದ (Refined Food), ಸಿಹಿ ವಸ್ತುಗಳನ್ನು (Sweets) ತಿನ್ನಲು ಪ್ರಾರಂಭಿಸುತ್ತಾರೆ, ಆದರೆ ಇದು ಸರಿಯಲ್ಲ.
ಜಾಂಡೀಸ್ ಇದ್ದರೆ, ಜಂಕ್ ಫುಡ್ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಏಕೆಂದರೆ ಅವುಗಳಲ್ಲಿ ಯಾವುದೇ ರೀತಿಯ ಪೋಷಕಾಂಶಗಳಿಲ್ಲ, ಈ ಕಾರಣದಿಂದಾಗಿ ಅವು ಕೊಬ್ಬನ್ನು(Fat) ಹೆಚ್ಚಿಸುವ ಕೆಲಸ ಮಾತ್ರ ಮಾಡುತ್ತವೆ ಅಷ್ಟೇ, ಕಾಮಾಲೆ ರೋಗಿಗಳು ಕೊಬ್ಬನ್ನು ಹೆಚ್ಚಿಸುವ ವಸ್ತುಗಳನ್ನು ತಿನ್ನಬಾರದು.
ಸಕ್ಕರೆ(Sugar)
ಸಂಸ್ಕರಿಸಿದ ಸಕ್ಕರೆಯು ಸಾಕಷ್ಟು ಫ್ರಕ್ಟೋಸ್ ಕಾರ್ನ್ ಸಿರಪ್ ಹೊಂದಿರುತ್ತೆ, ಇದು ಯಕೃತ್ತಿನಲ್ಲಿ ಕೊಬ್ಬನ್ನು ಸಂಗ್ರಹಿಸುವ ಕೆಲಸ ಮಾಡುತ್ತೆ, ಆದ್ದರಿಂದ ಜಾಂಡೀಸ್ ಇದ್ದರೆ ಕಡಿಮೆ ಪ್ರಮಾಣದ ಸಿಹಿ ವಸ್ತುಗಳನ್ನು ಸೇವಿಸಿ, ಯಾಕಂದ್ರೆ ಅದನ್ನು ಹೆಚ್ಚು ತಿನ್ನೋದರಿಂದ ಯಕೃತ್ತಿನಲ್ಲಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತೆ.
ಬಾಳೆಹಣ್ಣು(Banana)
ಕಾಮಾಲೆ ರೋಗಿಗಳು ಬಾಳೆಹಣ್ಣು ತಿನ್ನಬಾರದು. ಏಕೆಂದರೆ ಬಾಳೆಹಣ್ಣಿನಲ್ಲಿ ಸಾಕಷ್ಟು ಫೈಬರ್ ಇದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ತೊಂದರೆಗೊಳಿಸುತ್ತೆ. ಇದು ನಿಮ್ಮ ದೇಹದಲ್ಲಿ ಬಿಲಿರುಬಿನ್ ಮಟ್ಟವನ್ನು ಹೆಚ್ಚಿಸುವ ಕೆಲಸ ಸಹ ಮಾಡುತ್ತೆ, ಇದು ಕಾಮಾಲೆಯನ್ನು ಮತ್ತಷ್ಟು ಹೆಚ್ಚಿಸುತ್ತೆ.