ಪ್ರತಿ ವರ್ಷದಂತೆ ಇಂದು ದೇಶಾದ್ಯಂತ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಜೀವಗಳನ್ನು ಉಳಿಸುವ ವೈದ್ಯರಿಗೆ ಗೌರವ ಮತ್ತು ಕೃತಜ್ಞತೆ ವ್ಯಕ್ತಪಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಸೆಲೆಬ್ರೇಟ್ ಮಾಡುವ ದಿನವಾಗಿದೆ.
2023 ರಲ್ಲಿ, 33 ನೇ ರಾಷ್ಟ್ರೀಯ ವೈದ್ಯರ ದಿನವನ್ನು (National Doctors Day) ಜುಲೈ 1 ರಂದು ಆಚರಿಸಲಾಗುತ್ತಿದೆ. ಈ ದಿನವನ್ನು ಹೇಗೆ ಮತ್ತು ಏಕೆ ಆಚರಿಸಲಾಯಿತು, ಪ್ರಾಮುಖ್ಯತೆ ಮತ್ತು ಈ ವರ್ಷದ ಥೀಮ್ ಅನ್ನು ಅನ್ನೋದು ಏನು ಎಂದು ತಿಳಿಯಲು ಮುಂದೆ ಓದಿ..
ವೈದ್ಯರ ದಿನದ ಇತಿಹಾಸ
ಜುಲೈ 1, 1991 ರಿಂದ ದೇಶದಲ್ಲಿ ವೈದ್ಯರ ದಿನವನ್ನು ಪ್ರಾರಂಭಿಸಲಾಯಿತು. ಈ ದಿನವನ್ನು ಪ್ರಸಿದ್ಧ ವೈದ್ಯ, ಶಿಕ್ಷಣ ತಜ್ಞ ಮತ್ತು ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ.ಬಿಧಾನ್ ಚಂದ್ರ ರಾಯ್ (Dr. Bidhan Chandra Roy) ಅವರ ಗೌರವಾರ್ಥವಾಗಿ ಆಚರಿಸಲಾಗುತ್ತದೆ.
ಬಿಧಾನ್ ಚಂದ್ರ ಜುಲೈ 1, 1882 ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದರು. ಅವರಿಗೆ 1976ರಲ್ಲಿ ಭಾರತ ರತ್ನವನ್ನು ನೀಡಲಾಯಿತು. ಅವರ ಎಲ್ಲಾ ಕೊಡುಗೆಗಳನ್ನು ಗೌರವಿಸಲು ಪ್ರತಿವರ್ಷ ಜುಲೈ 1 ಅನ್ನು ವೈದ್ಯರ ದಿನವಾಗಿ ಆಚರಿಸಲಾಗುತ್ತದೆ.
ರಾಷ್ಟ್ರೀಯ ವೈದ್ಯರ ದಿನ 2023 ರ ಥೀಮ್ (Theme of doctors Day)
ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ವಿಭಿನ್ನ ವಿಷಯಗಳೊಂದಿಗೆ ಆಚರಿಸಲಾಗುತ್ತದೆ. ಈ ವರ್ಷವೂ ಒಂದು ವಿಶೇಷ ಥೀಮ್ ನೊಂದಿಗೆ ಆಚರಿಸಲಾಗುತ್ತದೆ., ಈ ವರ್ಷದ ಥೀಮ್ "ಫ್ರಂಟ್ ಲೈನ್ ನಲ್ಲಿ ಫ್ಯಾಮಿಲಿ ಡಾಕ್ಟರ್”..
ರಾಷ್ಟ್ರೀಯ ವೈದ್ಯರ ದಿನದ ಉದ್ದೇಶ
ವೈದ್ಯರ ಕರ್ತವ್ಯಗಳು, ಪ್ರಾಮುಖ್ಯತೆ ಮತ್ತು ಕೊಡುಗೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಆ ಪ್ರಮುಖ ಕೊಡುಗೆಗಳಿಗಾಗಿ ವೈದ್ಯರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ದಿನ ನಮಗೆ ಅವಕಾಶ ನೀಡುತ್ತದೆ.
ರಾಷ್ಟ್ರೀಯ ವೈದ್ಯರ ದಿನದ ಮಹತ್ವ
ವೈದ್ಯರ ಕೆಲಸಕ್ಕೆ ಧನ್ಯವಾದ ಹೇಳಲು ಮತ್ತು ಗೌರವಿಸಲು ರಾಷ್ಟ್ರೀಯ(respect and thank doctors) ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಮಗುವಿನ ಜನನದಿಂದ ಹಿಡಿದು ಆರೋಗ್ಯಕರ ಜೀವನಶೈಲಿಯವರೆಗೆ ವೈದ್ಯರ ಪಾತ್ರ ಬಹಳ ವಿಶೇಷವಾಗಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ವೈದ್ಯರ ದಿನವನ್ನು ಆಚರಿಸಲಾಗುತ್ತದೆ.