Sultan Keson: ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ ದಾಖಲೆ: ಇವರ ಹೈಟ್ ಹೆಚ್ಚಲು ಕಾರಣವೇನು ಗೊತ್ತಾ?

First Published Feb 14, 2024, 12:37 PM IST

ಸುಲ್ತಾನ್ ಕೊಸೆನ್ 8 ಅಡಿ 3 ಇಂಚು ಅಂದರೆ 251 ಸೆಂ.ಮೀ ಎತ್ತರವಿದ್ದಾರೆ. ಅವರು 2009 ರಲ್ಲಿ ವಿಶ್ವದ ಅತಿ ಎತ್ತರದ ಜೀವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಪ್ರಪಂಚದಲ್ಲಿ ಏನೇನೋ ರೋಗದಿಂದ, ಯಾವುದೋ ಸಮಸ್ಯೆಯಿಂದ ದೇಹದ ಅಂಗಗಳು ಯಾವುದೋ ಸಮಸ್ಯೆಗೆ ಗುರಿಯಾಗುತ್ತವೆ. ಹಲವು ಸಮಸ್ಯೆಯಿಂದ ಕೆಲವರು ಕುಳ್ಳರಾಗಿ ಬೆಳೆದರೆ, ಕೆಲವರು ಉದ್ದವಾಗಿ ಬೆಳೆಯುತ್ತಾರೆ, ಇನ್ನೂ ಕೆಲವರು ದಪ್ಪವಾಗಿ ಬೆಳೆಯುತ್ತಾರೆ, ಇದೀಗ ಪ್ರಪಂಚದ ಅತ್ಯಂತ ಎತ್ತರವಾದ ವ್ಯಕ್ತಿಯ ಬಗ್ಗೆ ತಿಳಿಸುತ್ತೇವೆ. 

ಪ್ರಪಂಚದ ಅತ್ಯಂತ ಎತ್ತರ ಮನುಷ್ಯ (tallest man of world) ಯಾರೆಂದು ನಿಮಗೆ ಗೊತ್ತಾ? ಅವರು ಬೇರಾರು ಇಲ್ಲ ಸುಲ್ತಾನ್ ಕೋಸೇನ್, ಇವರು ಟರ್ಕಿಯ ವ್ಯಕ್ತಿಯಾಗಿದ್ದು, ಇವರಿಗೆ 41 ವರ್ಷ ವಯಸ್ಸಾಗಿದೆ. ಇವರ ಹೈಟ್ ನೋಡಿದ್ರೇನೆ ಅಯ್ಯೋ ಇಷ್ಟೊಂದು ಉದ್ದನಾ ಎಂದು ಹೇಳುವಂತಿದೆ. 

ಸುಲ್ತಾನ್ ಕೋಸೇನ್ (Sultan Kosen) ಅವರ ಹೈಟ್ ಬರೋಬ್ಬರಿ 8 ಅಡಿ 3 ಇಂಚುಗಳಷ್ಟಿದೆ. ಅಂದ್ರೆ ಸುಮಾರು 251 ಸೆಂಟಿಮೀಟರ್. ನಿಜವಾಗ್ಲೂ ನಿಮಗೆ ಇವರ ಹೈಟ್ ಬಗ್ಗೆ ಕೇಳಿ ಶಾಕ್ ಆಗಿರ್ಬೇಕು ಅಲ್ವಾ? ಇಷ್ಟೋಂದು ಎತ್ತರ ಇರೋ ಜನರು ಇರ್ತಾರ ಎಂದು. 
 

ಸುಲ್ತಾನ್ ಪ್ರಪಂಚದ ಅತ್ಯಂತ ಎತ್ತರದ ವ್ಯಕ್ತಿಯಾಗಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ (Guinness World Record) ನಲ್ಲಿ ಇವರ ಹೆಸರು ದಾಖಲಾಗಿದೆ. ಇವರ ಮುಂದೆ ಸಾಮಾನ್ಯ ಎತ್ತರದ ಮನುಷ್ಯರು ನಿಂತರೆ ಕಾಣಿಸೋದೆ ಇಲ್ಲ. 
 

ಇವರು ಎಷ್ಟೊಂದು ಹೈಟ್ ಇದ್ದಾರೆ ಅಂದ್ರೆ ಗ್ರೌಂಡ್ ಫ್ಲೋರ್ ಮೇಲೆ ನಿಂತು ಮೊದಲ ಮಹಡಿಯಲ್ಲಿರುವ ಕೋಣೆಯ ಕಿಟಕಿಯನ್ನು ಸಹ ಮುಚ್ಚಬಹುದು, ಅಷ್ಟೊಂದು ಎತ್ತರವಾಗಿದ್ದಾರೆ. ಆದರೆ ಇವರ ಈ ಹೈಟ್ ಹಿಂದೆ ಕಾರಣವೂ ಇದೆ. 
 

ಅತಿಯಾದ ಎತ್ತರ ಇರೋದು ಸುಲಭದ ಮಾತಲ್ಲ. ಎಲ್ಲಾ ಕಡೆಯಲ್ಲೂ, ಹಲವು ಸಂದರ್ಭಗಳಲ್ಲೂ ಇವರು ಹಲವಾರು ಸಮಸ್ಯೆಗಳನ್ನು ಎದುರಿಸಿಕೊಂಡೇ ಬಂದಿದ್ದಾರೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಇವರಿಗೆ ತುಂಬಾನೆ ಸಮಸ್ಯೆ ಉಂಟಾಗಿದೆ. 
 

ಇವರಿಗೆ ಯಾರ ಮನೆಗೆ ಹೋಗೋದಕ್ಕೂ ಸಾಧ್ಯವಿಲ್ಲ. ಯಾಕಂದ್ರೆ ಸಾಮಾನ್ಯ ಬಾಗಿಲಿನಿಂದ ಇವರಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಹೊಟೇಲ್ ನಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ, ಯಾಕಂದ್ರೆ ಇವರ ಹೈಟ್ ನ ಬೆಡ್ ಅಲ್ಲಿ ಇರೋದೇ ಇಲ್ಲ. ವಿಮಾನದಲ್ಲಿ ಹೋಗೋದಾದ್ರೆ ಫಸ್ಟ್ ಕ್ಲಾಸ್ ನಲ್ಲೇ ಹೋಗಬೇಕು. 
 

ಅಷ್ಟಕ್ಕೂ ಇವರ ಹೈಟ್ ಗೆ ಕಾರಣ ಒಂದು ಕಾಯಿಲೆ. ಹೌದು ಸುಲ್ತಾನ್ ಅವರ ಮಸ್ತಿಷ್ಕದ ಪಿಟ್ಯೂಟರಿ ಗ್ರಂಥಿಯಲ್ಲಿ ಒಂದು ಟ್ಯೂಮರ್ (tumor) ಇದೆ. ಇದೇ ಕಾರಣದಿಂದ ಇವರ ಎತ್ತರ ಬೆಳೆಯುತ್ತಲೇ ಹೋಗುತ್ತಿದೆ. 
 

click me!