ತೂಕ ಇಳಿಸಲು ಜಪಾನೀ ವಾಟರ್ ಥೆರಪಿ, ಏನಿದು ಮಂತ್ರ?

Suvarna News   | Asianet News
Published : Jan 28, 2021, 04:25 PM IST

ದೇಹದಲ್ಲಿ ಶೇ.55ರಷ್ಟು ನೀರಿರುತ್ತದೆ. ಆದ್ದರಿಂದ ದೇಹದಲ್ಲಿ ನೀರಿನ ಪ್ರಮಾಣವನ್ನು ಸಮತೋಲನದಲ್ಲಿಟ್ಟು, ಸಾಕಷ್ಟು ನೀರು ಕುಡಿದು ವಿಷಗಳನ್ನು ಹೊರಹಾಕುವುದು ತುಂಬಾ ಮುಖ್ಯ. ಆದರೆ ಕುಡಿಯುವ ನೀರು ಮಾತ್ರ ಪ್ರಯೋಜನವಾಗೋವಲ್ಲ. ಅನೇಕ ಅಧ್ಯಯನಗಳಲ್ಲಿ, ನೀರು ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ. ಹೆಚ್ಚಿನವರು ತೂಕ ಹೆಚ್ಚುತ್ತಿರುವ ಬಗ್ಗೆ ತಲೆ ಬಿಸಿ ಮಾಡಿ ಕೊಂಡಿರುತ್ತಾರೆ. ಬಳಕುವ ಬಳ್ಳಿಯಂತಾಗಲು ಹರಸಾಹಸ ಮಾಡುತ್ತಿರುತ್ತಾರೆ. ಆದರೆ, ಗ್ರಾಮ್ ತೂಕವೂ ಇಳಿದಿರೋಲ್ಲ. ನೀರು ಕುಡಿಯುವ ಮೂಲಕ ತೂಕ ಇಳಿಸಿಕೊಳ್ಳಲು ಬಯಸುವಿರಾದರೆ, ಒಂದು ವಿಶೇಷ ವಿಧಾನ ಇಲ್ಲಿದೆ, ಇದರ ಹೆಸರು ಜಪಾನೀಸ್ ವಾಟರ್ ಥೆರಪಿ. ಏನಿದು?

PREV
110
ತೂಕ ಇಳಿಸಲು ಜಪಾನೀ ವಾಟರ್ ಥೆರಪಿ, ಏನಿದು ಮಂತ್ರ?

ಜಪಾನೀ ವಾಟರ್ ಥೆರಪಿ ಎಂದರೇನು?
ಈ ಥೆರಪಿಯಲ್ಲಿ, ಬೆಳಿಗ್ಗೆ ಎದ್ದ ತಕ್ಷಣ ಕೋಣೆಯ ತಾಪಮಾನದಲ್ಲಿ ಹಲವಾರು ಲೋಟ ನೀರನ್ನು ಕುಡಿಯಬೇಕು. ಜೊತೆಗೆ, ಕಟ್ಟುನಿಟ್ಟಾಗಿ ತಿನ್ನುವ ವಿಧಾನವನ್ನು ಸಹ ಅನುಸರಿಸಬೇಕು. ಇದರಲ್ಲಿ 15 ನಿಮಿಷದಲ್ಲಿ ಊಟ ಮಾಡುವ ವಿಧಾನವು ಇರುತ್ತದೆ. ಈ ವಿಧಾನಗಳನ್ನು  ಬಳಸಿದರೆ, ಸ್ನ್ಯಾಕ್ಸ್ ಮತ್ತು ಆಹಾರದ ನಡುವೆ ಒಂದು ದೀರ್ಘವಾದ ಅಂತರವಿರಬೇಕು. 

210

ನೀರು ಹೇಗೆ ತೂಕವನ್ನು ಕಡಿಮೆ ಮಾಡುತ್ತದೆ
ತೂಕ ಇಳಿಸಲು ನೀರು ಸಹಕಾರಿ ಎಂದು ಅನೇಕ ಅಧ್ಯಯನಗಳು ಹೇಳಿವೆ. ಅಂತಹ ಒಂದು ಅಧ್ಯಯನದ ಪ್ರಕಾರ, ಊಟಕ್ಕೂ ಮುನ್ನ 2.1 ಕಪ್ ಅಥವಾ 500 ಮಿಲಿ ಲೀಟರ್ ನೀರು ಕುಡಿದಾಗ ತೂಕ ಇಳಿಸಿಕೊಳ್ಳಲು ಬಯಸುವವರು, ಊಟ ಕ್ಕೂ ಮುನ್ನ ನೀರು ಕುಡಿಯದವರಿಗಿಂತ 13 ಪ್ರತಿಶತ ಕಡಿಮೆ ಆಹಾರ ಸೇವಿಸುತ್ತಾರೆ. 
 
310

ಇನ್ನೊಂದು ಸಂಶೋಧನೆಯ ಪ್ರಕಾರ,  ಸಕ್ಕರೆ ಪಾನೀಯಗಳ ಬದಲಿಗೆ ನೀರನ್ನು ಕುಡಿದರೆ, ಅದು  ಕ್ಯಾಲೋರಿಯ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಹೆಚ್ಚುವುದಿಲ್ಲ ಎಂದು ತಿಳಿದು ಬಂದಿದೆ. 

410

ಹೆಚ್ಚುವರಿ ಕ್ಯಾಲೋರಿಗಳನ್ನು ಸೇವಿಸಬೇಡಿ
ನೀರಿನಲ್ಲಿರುವ ಹೈಡ್ರೇಷನ್ ಕಾಂಪ್ಲೆಕ್ಸ್ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಂಬಲಾಗಿದೆ. ಊಟಕ್ಕೂ ಮುನ್ನ ನೀರು ಕುಡಿದರೆ, ಅದು  ಆಹಾರವನ್ನು ಅತಿಯಾಗಿ ತಿನ್ನದಂತೆ ತಡೆಯುತ್ತದೆ ಮತ್ತು ಎರಡು ಊಟದ ನಡುವೆ  ಸೇವಿಸುವ ಆಹಾರವನ್ನೂ ಕಡಿಮೆ ಮಾಡುತ್ತದೆ.  ಇದು ಹೆಚ್ಚುವರಿ ಕ್ಯಾಲೋರಿಗಳನ್ನು ತಿನ್ನುವುದನ್ನು ತಪ್ಪಿಸುತ್ತದೆ.

510

ಊಟದ ನಡುವೆ ಕನಿಷ್ಠ ಎರಡು ಗಂಟೆಗಳ ಅಂತರ
ಬೆಳಿಗ್ಗೆ ಎದ್ದ ನಂತರ ಕೋಣೆಯ ತಾಪಮಾನದಲ್ಲಿ 180 ಮಿಲಿ ಲೀಟರ್ ನೀರನ್ನು ಕುಡಿಯಬೇಕು.  ಊಟಕ್ಕೂ 45 ನಿಮಿಷ ಮೊದಲು ನೀರು ಕುಡಿಯಿರಿ. ನಂತರ ದಿನವಿಡೀ ಸಾಧ್ಯವಾದಷ್ಟು ನೀರು ಕುಡಿದು,  ಹೈಡ್ರೇಟ್ ಆಗಿ ಇರಿಸಿಕೊಳ್ಳಿ. 

610

ಆಹಾರ ಸೇವನೆಯ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಿ. 15 ನಿಮಿಷದಲ್ಲಿ ಊಟ ಮಾಡಿ, ಊಟಕ್ಕೂ ಕನಿಷ್ಠ ಎರಡು ಗಂಟೆ ಅಂತರ ವಿರಲಿ. ಈ ಚಿಕಿತ್ಸೆಯಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಯಾವುದನ್ನು ತಿನ್ನಬಾರದು ಮತ್ತು ಯಾವುದನ್ನು ತಿನ್ನಬೇಕು ಎಂಬ ಬಗ್ಗೆ ಯಾವುದೇ ನಿಷೇಧವಿಲ್ಲ. ಆದರೆ, ಆ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. 

710

ಈ ಚಿಕಿತ್ಸೆ ಜಪಾನ್ ನಲ್ಲಿ ಜನಪ್ರಿಯವಾಗಿದ್ದು, ಪ್ರಪಂಚದ ಇತರ ಭಾಗದ ಜನರು ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ವಿಜ್ಞಾನಿಗಳ ಅಭಿಪ್ರಾಯ ಮಿಶ್ರವಾಗಿದೆ. ಕೆಲವರು ಈ ಚಿಕಿತ್ಸೆಪರಿಣಾಮಕಾರಿ ಎಂದು ಹೇಳಿದರೆ, ಕೆಲವರು 15 ನಿಮಿಷಗಳ ಅಂತರ, ದೀರ್ಘಾವಧಿಯಲ್ಲಿ ತೂಕ ಕಳೆದುಕೊಳ್ಳಲು ಸಹಾಯಕಾರಿಯಲ್ಲ ಎಂದು ಹೇಳುತ್ತಾರೆ. 

810

ಇಷ್ಟು ಕಡಿಮೆ ಸಮಯದಲ್ಲಿ, ಹೊಟ್ಟೆಯು ನಿಮ್ಮ ಹೊಟ್ಟೆತುಂಬಿದ ಸಂಕೇತವನ್ನು ಮೆದುಳಿಗೆ ನೀಡುವುದಿಲ್ಲ. ಪರಿಣಾಮವಾಗಿ ಹೆಚ್ಚು ಆಹಾರ ಸೇವಿಸುತ್ತೀರಿ. ಇದರಿಂದ ತೂಕ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. 

910

ನಿಧಾನವಾಗಿ ಆಹಾರ ಸೇವನೆ ಮಾಡಿದರೆ ತೂಕ ಇಳಿಕೆ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಎಕ್ಸ್ ಪೋ ಪ್ರಕಾರ, ಜಪಾನಿನ ವಾಟರ್ ಥೆರಪಿಯು ಆರಂಭದಲ್ಲಿ ತೂಕ ಕಳೆದುಕೊಳ್ಳಲು ಸಹಾಯಕಾರಿಯಾಗಿದೆ, ಆದರೆ ಇದು ಅಷ್ಟೊಂದು ಸುಲಭವಲ್ಲ.  

1010

ವಾಟರ್ ಥೆರಪಿಯ ಇನ್ನೊಂದು ಅನಾನುಕೂಲವೆಂದರೆ  ಅತಿಯಾದ ಜಲೀಕರಣದ ಬಲಿಪಶುವಾಗಬಹುದು. ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ಸೋಡಿಯಂ ನ ಸಾಂದ್ರತೆ ಕಡಿಮೆಯಾಗುತ್ತದೆ ಮತ್ತು ಅಪಾಯಕಾರಿಯೂ ಆಗಬಹುದು.  ಆದ್ದರಿಂದ ಈ ಚಿಕಿತ್ಸೆಯನ್ನು ಅಳವಡಿಸಿಕೊಳ್ಳುವ ಮುನ್ನ ತಜ್ಞರನ್ನು ಸಂಪರ್ಕಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories