ದೇಹದ ಕೂದಲಲ್ಲಿ ಬದಲಾವಣೆಯಾದ್ರೆ ಅದು ಈ ರೋಗ ಲಕ್ಷಣವೂ ಇರಬಹುದು

Suvarna News   | Asianet News
Published : Jan 27, 2021, 03:45 PM ISTUpdated : Jan 27, 2021, 03:47 PM IST

ದೇಹದ ಕೂದಲಿನ ಬೆಳವಣಿಗೆಯಲ್ಲಿ ಯಾವುದಾದರೂ ಬದಲಾವಣೆಗಳನ್ನು ಗಮನಿಸಿದ್ದೀರಾ? ಏನಾದರೂ ಬದಲಾವಣೆ ಕಂಡು ಬಂದರೆ ಆ ಬಗ್ಗೆ ಗಮನ ಹರಿಸಲೇಬೇಕು. ಯಾಕೆಂದರೆ ಇದರಿಂದ ಸಾಲು ಸಾಲು ಸಮಸ್ಯೆಗಳು ಕಾಡಬಹುದು. ದೇಹದ ಕೂದಲು ತಿಳಿಸಲು ಪ್ರಯತ್ನಿಸುತ್ತಿರುವ 5 ಸಂಗತಿಗಳು ಇಲ್ಲಿವೆ.

PREV
112
ದೇಹದ ಕೂದಲಲ್ಲಿ ಬದಲಾವಣೆಯಾದ್ರೆ ಅದು ಈ ರೋಗ ಲಕ್ಷಣವೂ ಇರಬಹುದು

ದೇಹದ ಕೂದಲು ಹೊಂದುವುದು ಸಾಮಾನ್ಯ, ಮತ್ತು ನಮ್ಮಲ್ಲಿ ಹೆಚ್ಚಿನವರು ಅವುಗಳನ್ನು ಕಂಡ ತಕ್ಷಣ ತೆಗೆಯಲು ಪ್ರಯತ್ನಿಸುತ್ತಾರೆ. ಮಾನವ ದೇಹದ ಮೇಲೆ ಸುಮಾರು 5 ಮಿಲಿಯನ್ ಕೂದಲಿನ ಕಿರುಚೀಲಗಳಿವೆ ಎಂದು ತಿಳಿದಿದೆಯೇ? ಇದು  ಆಕರ್ಷಣೆಗೆ ಒಳಗಾಗಿಸಬಹುದಾದರೂ, ದೇಹದ ಕೂದಲು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಮಾಹಿತಿ ನೀಡಬಲ್ಲದು.

212

ದೇಹವನ್ನು ಆವರಿಸಿಕೊಳ್ಳುವ ಸೂಕ್ಷ್ಮವಾದ ಕೂದಲುಗಳು ವೆಲಸ್ ಹೇರ್ ಗಳಿಂದ ಮಾಡಲ್ಪಟ್ಟಿವೆ, ಇದನ್ನು ಟರ್ಮಿನಲ್ ಹೇರ್ ಎಂದು ಸಹ ಕರೆಯಲಾಗುತ್ತದೆ. ಇದು ಹುಬ್ಬು, ರೆಪ್ಪೆ, ಗದ್ದ, ತೋಳುಗಳ ಕೆಳಗೆ, ತಲೆಬುರುಡೆಯಲ್ಲಿ  ಕಾಣಿಸಿಕೊಳ್ಳುತ್ತದೆ. ಕೆಲವರ ಮೈಮೇಲೆ ಕೂದಲು ಕಡಿಮೆ ಇದ್ದರೆ, ಇನ್ನು ಕೆಲವರಿಗೆ ಕೂದಲು ಕಪ್ಪಾಗಿ ಒರಟಾಗಿ ಕೂಡಿರುತ್ತದೆ. ಅಧ್ಯಯನಗಳು ಸೂಚಿಸುವಂತೆ,  ದೇಹದ ಕೂದಲು ಇದ್ದಕ್ಕಿದ್ದಂತೆ ಬದಲಾದಾಗ, ಅದು ಬೇರೆ ಕಡೆ ಏನಾದರೂ ತಪ್ಪಾಗಿರಬಹುದು ಎಂದು ಸುಳಿವು ನೀಡಬಹುದು. 

312

ದೇಹದ ಕೂದಲು ಏನು ಹೇಳಲು ಪ್ರಯತ್ನಿಸಬಹುದು? ದೇಹದಲ್ಲಿ ಅಸಹಜ ಕೂದಲು ಬೆಳವಣಿಗೆಯನ್ನುಗಮನಿಸಿದ್ದೀರಾ? ಹಾಗಾದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದಾದ ಸೂಕ್ಷವಾದ ವಿಷಯಗಳೇನು? ಮೊದಲಾದ ಮಾಹಿತಿ ಇಲ್ಲಿದೆ, ಗಮನಿಸಿ... 

412

ಹಾರ್ಮೋನುಗಳು ಅಸಮತೋಲನ: ಆಂಡ್ರೋಜೆನ್ ಗಳು ಎಂದು ಕರೆಯಲ್ಪಡುವ ಹಾರ್ಮೋನುಗಳು ದೇಹದ ಕೂದಲು ಬೆಳೆಯಲು ಪ್ರಮುಖ ಕಾರಣವಾಗಿವೆ. ಅವುಗಳನ್ನು ಪುರುಷ ಹಾರ್ಮೋನುಗಳೆಂದು ಕರೆದರೂ, ಪುರುಷರು ಮತ್ತು ಮಹಿಳೆಯರು ಇಬ್ಬರ ದೇಹದಲ್ಲೂ ಇವು ಬೆಳೆಯುತ್ತದೆ.  

512

ಮಹಿಳೆಯ ದೇಹದಲ್ಲಿ ಈ ಹಾರ್ಮೋನುಗಳು ಹಠಾತ್ತಾಗಿ ಹೆಚ್ಚಾದರೆ, ಪುರುಷ ಮಾದರಿಯ ಕೂದಲು ಬೆಳೆಯಲು ಕಾರಣವಾಗಬಹುದು. ಅಲ್ಲದೆ, ಪಿರಿಯಡ್ಸ್ ಸಮಯದಲ್ಲಿ ಈಸ್ಟ್ರೋಜನ್ ಮಟ್ಟಗಳು ಕಡಿಮೆಯಾದಾಗ ಮತ್ತು ಟೆಸ್ಟೋಸ್ಟೆರಾನ್ ಮಟ್ಟಗಳು ಹೆಚ್ಚಾದಾಗ, ಇದು ಕೂದಲು ತೆಳುವಾಗಲು ಕಾರಣವಾಗುತ್ತದೆ, ಹಾಗೆಯೇ ಮುಖದ ಮೇಲಿನ ಕೂದಲು ಒರಟಾಗಿರಬಹುದು.

612

ಕಬ್ಬಿಣದ ಕೊರತೆ ಇದೆ: ಗಮನಾರ್ಹವಾದ ಕೂದಲು ಉದುರುವಿಕೆಯನ್ನು ಗಮನಿಸಿದ್ದೀರಾ? ದೇಹ ಮತ್ತು ತಲೆಯಿಂದ ಹೆಚ್ಚು ಕೂದಲು ಉದುರುತ್ತಿದ್ದರೆ ರಕ್ತದಲ್ಲಿ ರಕ್ತಹೀನತೆ ಅಥವಾ ಕಬ್ಬಿಣದ ಕೊರತೆಗೆ ಕಾರಣವಾಗಬಹುದು. ದೇಹದಲ್ಲಿ ಸಾಕಷ್ಟು ಕಬ್ಬಿಣಾಂಶವು ಇಲ್ಲದಿದ್ದಾಗ, ರಕ್ತದಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿಮಾಡಲು ಅಸಮರ್ಥವಾಗುತ್ತದೆ. 

712

ಹಿಮೋಗ್ಲೋಬಿನ್ ಎಂಬುದು  ದೇಹದ ಜೀವಕೋಶಗಳ ಬೆಳವಣಿಗೆ ಮತ್ತು ದುರಸ್ತಿಗಾಗಿ ಆಮ್ಲಜನಕವನ್ನು ಒಯ್ಯುವ ಒಂದು ಪ್ರೋಟೀನ್ ಆಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹ ಕಾರಣವಾಗಿದೆ.

812

ಪಿಸಿಒಎಸ್ ಇದಕ್ಕೆ ಕಾರಣವಾಗಿರಬಹುದು: ಪಿಸಿಒಎಸ್ ಎಂಬುದು ಚಯಾಪಚಯ ಮತ್ತು ಹಾರ್ಮೋನ್ ಅಸಮತೋಲನವಾಗಿದ್ದು, ಭಾರತದಲ್ಲಿ ಪ್ರತಿ 5 ಮಹಿಳೆಯರಲ್ಲಿ ಒಬ್ಬರು ಮಹಿಳೆಯ ಮೇಲೆ ಪರಿಣಾಮ ಬೀರುತ್ತಿದೆ. ಇದು ದೇಹದಲ್ಲಿ ನಯವಾದ ಹಾರ್ಮೋನ್ ಬದಲಾವಣೆ ಮತ್ತು ಅಸಮತೋಲನದಿಂದ ತೂಕ ಹೆಚ್ಚಳದೊಂದಿಗೆ ಸಂಬಂಧ ಹೊಂದಿದೆ.

912

ಅನಿಯಮಿತ ಋತುಚಕ್ರ, ಮೊಡವೆ, ಕೂದಲು ತೆಳುವಾಗಿ, ಮುಖದ ಮೇಲೆ ಅತಿಯಾದ ಕೂದಲು, ಗಡ್ಡ ಅಥವಾ ಇತರ ಭಾಗಗಳಲ್ಲಿ ಸೇರಿ ಅನೇಕ ರೋಗಲಕ್ಷಣಗಳಿಗೆ ಇದು ಕಾರಣವಾಗಬಹುದು.

1012

ಅಂಡರ್ ಆಕ್ಟಿವ್ ಥೈರಾಯ್ಡ್ ಇರಬಹುದು: ಥೈರಾಯಿಡ್ ಕುತ್ತಿಗೆಯ ಮುಂಭಾಗದಲ್ಲಿರುವ ಒಂದು ಚಿಟ್ಟೆಯಾಕಾರದ ಗ್ರಂಥಿಯಾಗಿದೆ. ದೇಹವು ಶಕ್ತಿಯನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ನಿಯಂತ್ರಿಸಲು ನೆರವಾಗುವ ಹಾರ್ಮೋನುಗಳನ್ನು ಸ್ರವಿಸುವ  ಜವಾಬ್ದಾರಿಯಾಗಿದೆ. ಈ ಹಾರ್ಮೋನ್ ಉತ್ಪತ್ತಿ ಆಗದಿದ್ದರೆ, ಅದು ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ,  ಹುಬ್ಬುಗಳಿಂದ ಕೂದಲು ಗಳನ್ನು ಕಳೆದುಕೊಳ್ಳುತ್ತಿದ್ದರೆ,  ಥೈರಾಯ್ಡ್ ಮಟ್ಟವನ್ನು  ಪರಿಶೀಲಿಸಬೇಕು.

1112

ಆಟೋಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿದ್ದೀರಿ: ಕೆಲವು ಸಂದರ್ಭಗಳಲ್ಲಿ,  ದೇಹದ ಕೂದಲಿನಲ್ಲಿ ಉಂಟಾಗುವ ಬದಲಾವಣೆಗಳು ಆಟೋಇಮ್ಯೂನ್ ಪರಿಸ್ಥಿತಿಗಳ ಪರಿಣಾಮವಾಗಿರಬಹುದು. ಇಂತಹ ಸಂದರ್ಭಗಳಲ್ಲಿ  ಪ್ರತಿರಕ್ಷಣಾ ವ್ಯವಸ್ಥೆಯು  ಕೂದಲಿನ ಕಿರುಚೀಲಗಳ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಬಹುದು, ಇದು ತಲೆಬುರುಡೆ, ಹುಬ್ಬುಗಳು ಮತ್ತು ಐಲ್ಯಾಶ್ ಗಳಿಂದ ವೃತ್ತಾಕಾರದ ತೇಪೆಗಳಲ್ಲಿ ಕೂದಲು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.

1212

ಈ ಬದಲಾವಣೆಗಳು ಒಂದು  ರೋಗದ ಸಂಕೇತವಾಗಿರಬಹುದಾದರೂ, ಯಾವಾಗಲೂ ಏನೋ ತಪ್ಪಾಗಿದೆ ಎಂದು ಅರ್ಥವಲ್ಲ. ಕೆಲವೊಮ್ಮೆ ಇದು ಸಾಮಾನ್ಯ ಕೂದಲು ಉದುರುವಿಕೆ ಮತ್ತು ಮರುಬೆಳವಣಿಗೆಯ ಭಾಗವಾಗಿರುತ್ತದೆ. ಆದರೆ ಕೂದಲಿನಲ್ಲಿ ಹೊಸ ಬದಲಾವಣೆಗಳನ್ನು ಕಾಣುತ್ತಿದ್ದೀರಿ ಎಂದಾದಲ್ಲಿ, ವೈದ್ಯರನ್ನು ಭೇಟಿಯಾಗಿ

click me!

Recommended Stories