ಪಾತ್ರೆ ತೊಳೆದ ನಂತರ ಅಲರ್ಜಿ ಬರುತ್ತದೆಯೇ?
ನಿಮ್ಮ ಸ್ಪಾಂಜ್‌ನಲ್ಲಿ ಸ್ಟ್ಯಾಫಿಲೋಕೊಕಸ್ ಬ್ಯಾಕ್ಟೀರಿಯಾ ಇದ್ದರೆ, ಅದು ಚರ್ಮದ ಸೋಂಕನ್ನು ಉಂಟುಮಾಡಬಹುದು. ಇದರಿಂದ ಕೈಗಳಲ್ಲಿ ಅಲರ್ಜಿ ಕೂಡ ಬರಬಹುದು. ಮೊರಾಕ್ಸೆಲ್ಲಾ ಆಸ್ಲೋಯೆನ್ಸಿಸ್ ಎಂಬ ಬ್ಯಾಕ್ಟೀರಿಯಾ ದುರ್ವಾಸನೆಯನ್ನು ಉಂಟುಮಾಡುತ್ತದೆ. ಇದರಿಂದ ಚರ್ಮದ ಸೋಂಕು, ಸಂಧಿವಾತ ಕೂಡ ಬರಬಹುದು.
ಯಾವ ಬ್ಯಾಕ್ಟೀರಿಯಾಗಳು ರೋಗವನ್ನು ಉಂಟುಮಾಡುತ್ತವೆ?
ಸ್ಪಾಂಜ್‌ನಲ್ಲಿರುವ ಕ್ಯಾಂಪಿಲೋಬ್ಯಾಕ್ಟರ್ ಎಂಬ ಬ್ಯಾಕ್ಟೀರಿಯಾ ನಿಮಗೆ ಹೊಟ್ಟೆ ನೋವು, ಭೇದಿ, ಜ್ವರ ಮುಂತಾದವುಗಳನ್ನು ಉಂಟುಮಾಡಬಹುದು. ಈ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಕೋಳಿ ಮಾಂಸದಲ್ಲಿ ಕಂಡುಬರುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಎಂಟರೊಬ್ಯಾಕ್ಟರ್ ಕ್ಲೋಕೇ ಎಂಬ ಬ್ಯಾಕ್ಟೀರಿಯಾ ನ್ಯುಮೋನಿಯಾದಂತಹ ಕಾಯಿಲೆಯನ್ನು ಉಂಟುಮಾಡುತ್ತದೆ.
ಇ.ಕೋಲಿ ಎಂಬ ಬ್ಯಾಕ್ಟೀರಿಯಾ ತೀವ್ರವಾದ ಹೊಟ್ಟೆ ಸೆಳೆತ, ಭೇದಿ ಮುಂತಾದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಕೆಲವರಿಗೆ ಮೂತ್ರಪಿಂಡದ ಸಮಸ್ಯೆಯನ್ನು ಉಂಟುಮಾಡಬಹುದು. ಕೋಳಿ ಮೊಟ್ಟೆಯಲ್ಲಿ ಕಂಡುಬರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕಲುಷಿತ ಆಹಾರ, ನೀರಿನೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಇದು ಸ್ಪಾಂಜ್‌ನಲ್ಲಿ ಕಂಡುಬಂದರೆ ಭೇದಿ, ಜ್ವರ, ಸ್ನಾಯು ಸೆಳೆತ ಮುಂತಾದ ಸಮಸ್ಯೆಗಳು ಬರುತ್ತವೆ. ಕ್ಲೆಬ್ಸಿಲ್ಲಾ ಎಂಬ ಸೂಕ್ಷ್ಮಜೀವಿ ನ್ಯುಮೋನಿಯಾ, ಮೂತ್ರನಾಳದ ಸೋಂಕನ್ನು ಉಂಟುಮಾಡಬಹುದು.