ತನುಶ್ರೀ ಈಗ ಫಿಟ್ನೆಸ್ ಇನ್’ಫ್ಲುಯನ್ಸರ್ (fitness influencer). ಅವರು ಇನ್ಸ್ಟಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ . ಅಷ್ಟೇ ಅಲ್ಲ ಅವರು ಈಗ ಇಡೀ ಜಗತ್ತಿಗೆ ಫಿಟ್ನೆಸ್ ಪಾಠಗಳನ್ನು ಕಲಿಸುತ್ತಿದ್ದಾರೆ. ಒಂದು ಕಾಲದಲ್ಲಿ, ಆಕೆಯನ್ನು ನೋಡಿದ್ರೆ ಆಂಟಿ ಎಂದು ಕರೆಯುತ್ತಿದ್ದರು ಜನ. ತುಂಬಾ ದಪ್ಪಗಿದ್ದ, 85 ಕೆಜಿ ತೂಕವಿದ್ದ, XXL ಬಟ್ಟೆ ಧರಿಸುತ್ತಿದ್ದ ಈಕೆಯನ್ನು ಈವಾಗ ನೋಡಿದ್ರೆ, ಅವರೇನಾ ಇವರು ಎನ್ನುವಷ್ಟು ಬದಲಾಗಿದ್ದಾರೆ.
ತನುಶ್ರೀ 25 ನೇ ವಯಸ್ಸಿನಲ್ಲಿ ವಿವಾಹವಾದರು ಮತ್ತು ತಾಯಿ ಕೂಡ ಆದರು. ಇದರ ನಂತರ, ಅವರ ದೇಹದ ತೂಕ ಹೆಚ್ಚಾಗುತ್ತಲೇ (weight gain) ಹೋಯಿತು ಮತ್ತು ಆತ್ಮವಿಶ್ವಾಸ ಕಡಿಮೆಯಾಯಿತು. ಹೇಗಾದರೂ ತೂಕ ಇಳಿಕೆ ಮಾಡಬೇಕೆಂದು ಯೋಚಿಸಿದ ತನುಶ್ರೀ ಗೃಹೋಪಯೋಗಿ ವಸ್ತುಗಳನ್ನು ಬಳಸುವುದು ಮತ್ತು ದೇಸಿ ಆಹಾರವನ್ನು ತಿನ್ನುವ ಮೂಲಕ ಮನೆಯಲ್ಲಿಯೇ ತಮ್ಮ ಫಿಟ್ನೆಸ್ ಪ್ರಯಾಣವನ್ನು ಪ್ರಾರಂಭಿಸಿದರು. 6 ವರ್ಷಗಳ ಕಠಿಣ ಪರಿಶ್ರಮದ ನಂತರ, 85 ಕೆಜಿಯಿದ್ದ ತನುಶ್ರೀ ಇದೀಗ 48 ಕೆಜಿಗೆ ಇಳಿದಿದ್ದಾರೆ.
ತನುಶ್ರೀ ಅವರ ತೂಕ ಪರಿವರ್ತನೆಯ ಕಥೆ ಮತ್ತು ಅವರ ಆತ್ಮವಿಶ್ವಾಸವು ಬೊಜ್ಜಿಗೆ ಬಲಿಯಾದ ಮತ್ತು ಕೆಲವು ಕಾರಣಗಳಿಂದಾಗಿ ತೂಕ ಇಳಿಸಿಕೊಳ್ಳಲು ಪ್ರಾರಂಭಿಸಲು ಸಾಧ್ಯವಾಗದ ಪ್ರತಿಯೊಬ್ಬ ಮಹಿಳೆಗೆ ಒಂದು ಪಾಠ ಮತ್ತು ಸ್ಫೂರ್ತಿಯಾಗಿದೆ. ಅವರು ಈ ಸಾಧನೆಯನ್ನು ಹೇಗೆ ಮಾಡಿದ್ದಾರೆಂದು ತಿಳಿಯೋಣ.
25ನೇ ವಯಸ್ಸಿನಲ್ಲಿ 85 ಕೆಜಿ ತೂಕ ಹೊಂದಿದ್ದ ತನುಶ್ರೀ
25ನೇ ವಯಸ್ಸಿನಲ್ಲಿ 85 ಕೆಜಿ ತೂಕವಿದ್ದ ತನುಶ್ರೀ ದೇಹದ ಬಗ್ಗೆ ಅಸಮಾಧಾನ ಹೊಂದಿದ್ದರು. ಜನರು ಆಕೆಯ ತೂಕ ವಯಸ್ಸಿಗಿಂತ ಹೆಚ್ಚಾಗಿದೆ ಎಂದಿದ್ದರು, ಇದು ಆಕೆಯ ಆತ್ಮವಿಶ್ವಾಸವನ್ನು ಕಡಿಮೆ ಮಾಡಿತು. ಮದುವೆಯ ನಂತರ ಮತ್ತು ತಾಯಿಯಾದ ನಂತರ, ಹಾರ್ಮೋನುಗಳ ಬದಲಾವಣೆಗಳು (hormonal changes) ಮತ್ತು ಒತ್ತಡದಿಂದಾಗಿ ತನುಶ್ರೀ ತೂಕವನ್ನು ಹೆಚ್ಚಿಸಿಕೊಂಡಳು.
ತೂಕ ಇಳಿಸಿಕೊಳ್ಳಲು ಪ್ರಾರಂಭಿಸಿದ್ದು ಹೇಗೆ?
ತನುಶ್ರೀಗೆ ಇದೆಲ್ಲವನ್ನೂ ಸಹಿಸಲಾಗದ ಸಮಯ ಬಂದಿತು. ಅವರು ತಮ್ಮ ಫಿಟ್ನೆಸ್ ಪ್ರಯಾಣವನ್ನು (fitness journey)ಮನೆಯಲ್ಲಿಯೇ ಪ್ರಾರಂಭಿಸಿದರು. ದುಬಾರಿ ಜಿಮ್ ಅಥವಾ ಸೆಶನ್ ಗೆ ಹೋಗದೆ, ಅವರು ನೀರಿನ ಬಾಟಲಿಗಳಂತಹ ಗೃಹೋಪಯೋಗಿ ವಸ್ತುಗಳನ್ನು ತೂಕ ಎತ್ತಲು ಬಳಸಿದರು ಮತ್ತು ಮೂಲಭೂತ ವ್ಯಾಯಾಮಗಳನ್ನು ಪ್ರಾರಂಭಿಸಿದರು. ಪ್ರತಿದಿನ ಒಂದು ಗಂಟೆ ವ್ಯಾಯಾಯವನ್ನು ತಪ್ಪದೇ ಮಾಡುತ್ತಿದ್ದರು.
ಡಯಟ್ ಪ್ಲಾನ್
ಅವರ ಊಟವು ಪ್ರೋಟೀನ್ ಭರಿತ ದೇಸಿ ಪದಾರ್ಥಗಳಾದ ಚಿಲ್ಲಾ, ಸೋಯಾ, ಪನೀರ್, ಮೊಟ್ಟೆ, ಬೀನ್ಸ್ ಮತ್ತು ಬೇಳೆಕಾಳುಗಳನ್ನು ಒಳಗೊಂಡಿತ್ತು. ಗೃಹಿಣಿ ಮತ್ತು ತಾಯಿಯಾಗಿರುವುದರ ಜೊತೆಗೆ, ಆಕೆ ಪ್ರತಿದಿನ ಒಂದು ಗಂಟೆ ತನಗಾಗಿ ಮೀಸಲಿಟ್ಟಿದ್ದರು. ಕ್ರಮೇಣ, ಅವರು ಕಾರ್ಡಿಯೋ ಮತ್ತು ತೂಕ ತರಬೇತಿಯನ್ನು ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಂಡರು.
ತನುಶ್ರೀ ಇನ್ಸ್ಟಾಗ್ರಾಮ್ನಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ
ಅವರ ಕಥೆಗಳು ಸಾಮಾಜಿಕ ಮಾಧ್ಯಮದಲ್ಲಿ ಸ್ಫೂರ್ತಿಯ ಮೂಲವಾಯಿತು. ಅವರು ತಮ್ಮ ಸವಾಲುಗಳು, ಗರ್ಭಧಾರಣೆಯ ನಂತರ ಹಾರ್ಮೋನುಗಳ ಅಸಮತೋಲನ ಮತ್ತು ದೈನಂದಿನ ಜೀವನದ ಒತ್ತಡದ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ (Instagram Pages)ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಾಮಾಣಿಕ ಮಾತುಗಳು ಜನರಿಗೆ ಸ್ಫೂರ್ತಿ ನೀಡುತ್ತದೆ. ಯಾವುದೇ ವ್ಯಕ್ತಿ, ಯಾವುದೇ ವಯಸ್ಸಿನಲ್ಲಿ, ಅವರ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಸುಧಾರಿಸಬಹುದು ಎಂದು ಅವರು ನಂಬುತ್ತಾರೆ.
ಜಿಮ್-ಡಯಟ್ ನಲ್ಲಿ ಸಮಯ ವ್ಯರ್ಥ ಮಾಡಲಿಲ್ಲ
ಜಿಮ್ಗಳು ಅಥವಾ ದುಬಾರಿ ಫಿಟ್ನೆಸ್ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ತನುಶ್ರೀ ಸರಳ ವಿಧಾನವನ್ನು ಪ್ರಯತ್ನಿಸಿದರು. ಅವರು ಮನೆಯಲ್ಲಿ ತಮ್ಮ ಫಿಟ್ನೆಸ್ ಪ್ರಯಾಣವನ್ನು (fitness journey) ಕೇವಲ ಗೃಹೋಪಯೋಗಿ ವಸ್ತುಗಳೊಂದಿಗೆ ಪ್ರಾರಂಭಿಸಿದರು. ವ್ಯಾಯಾಮ ಅಥವಾ ಆಹಾರಕ್ರಮದಲ್ಲಿ ಹೆಚ್ಚಿನ ಅನುಭವವಿಲ್ಲದ ಕಾರಣ, ಅವರು ಸಣ್ಣದಾಗಿ ಪ್ರಾರಂಭಿಸಿದರು. ಇದೀಗ ಸ್ಲಿಮ್ ಆಗಿ, ಆಂಟಿ, ಡುಮ್ಮಿ ಎಂದು ಕರೆಯುತ್ತಿದ್ದವರೇ ಅಚ್ಚರಿಯಿಂದ ಹುಬ್ಬೇರಿಸುವಂತೆ ಮಾಡಿದ್ದಾರೆ.