ಕೊರೋನಾ ವೈರಸ್ ಪೀಡಿತರ ಸೇವೆಗೆ ಮದ್ವೆಯನ್ನೇ ಮುಂದೂಡಿದ ವೈದ್ಯೆ!

First Published | Apr 2, 2020, 11:34 AM IST

ಮದುವೆ ಜೀವನದಲ್ಲಿ ಪ್ರಮುಖ ಘಟ್ಟ. ಪ್ರತಿಯೊಬ್ಬರೂ ತಮ್ಮ ಮದುವೆಯ ಬಗ್ಗೆ ಹಲವು ಕನಸು ಕಂಡಿರುತ್ತಾರೆ. ಆದರಲ್ಲೂ ಹುಡುಗಿಯರು ಮದುವೆಗಾಗಿ ಸ್ಪಲ್ಪ ಹೆಚ್ಚಿನ ತಯಾರಿಯನ್ನೇ ಮಾಡಿಕೊಳ್ಳುವುದು ಸುಳ್ಳಲ್ಲ. ಆದರೆ ಈ ಡಾಕ್ಟರ್‌ ರೋಗಿಗಳಿಗಾಗಿ ತನ್ನ ಮದುವೆಯನ್ನೇ ಮುಂದೆ ಹಾಕಿರುವುದು ವರದಿ ಆಗಿದೆ. ಜೀವದ ಹಂಗು ತೊರೆದು ಹಗಲೂ ರಾತ್ರಿ ಎನ್ನದೇ ಕೊರೋನಾ ಸೋಂಕಿತರಗಾಗಿ ಸೇವೆಸಲ್ಲಿಸುತ್ತಾ ಮಾದರಿಯಾಗಿದ್ದಾರೆ ಈ ಡಾಕ್ಟರ್. ಮದುವೆ ಕಾಯುತ್ತದೆ. ಆದರೆ ನನ್ನ ರೋಗಿಗಳಲ್ಲ, ಎಂದು ಮದುವೆ ಪೋಸ್ಟ್‌ಫೋನ್‌ ಮಾಡಿಕೊಂಡು ಹೆಮ್ಮೆ ಮೂಡಿಸಿದ್ದಾರೆ ಕೇರಳದ ಈ ಡಾಕ್ಟರ್‌. 

ಈ ದಿನಗಳಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವ ಕೇರಳದ ಹೌಸ್‌ ಸರ್ಜನ್‌ 23 ವರ್ಷದ ಶಿಫಾ ಎ ಮೊಹಮ್ಮದ್.
undefined
ಅವರ ಮದುವೆಯ ದಿನ ಮಾರ್ಚ್ 29 ರಂದು ಮದುವೆ ಮಂಟಪದಲ್ಲಿರುವ ಬದಲು ಕಣ್ಣೂರಿನ ಪೆರಿಯಾರಮ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ಡಾ.ಶಿಫಾ.
undefined

Latest Videos


ಮದುವೆ ಕಾಯಬಹುದು. ಆದರೆ ನರಳುತ್ತಿರುವ ರೋಗಿಗಳಲ್ಲ ಎಂದು ಭಾವೀ ಪತಿ ಮತ್ತು ಮನೆಯವರನ್ನು ಮದುವೆ ಫೋಸ್ಟ್‌ಪೋನ್‌ ಮಾಡಲು ಒಪ್ಪಿಸಿದ ಡಾಕ್ಟರ್‌.
undefined
'ಮದುವೆಯ ದಿನ ಪ್ರತಿ ಹೆಣ್ಣುಮಕ್ಕಳಿಗೆ ಅತ್ಯಂತ ಪ್ರಮುಖವಾದ ದಿನವಾಗಿರುತ್ತದೆ, ಆದರೆ ನನ್ನ ಮಗಳು ಸಾಮಾಜಿಕ ಮತ್ತು ವೃತ್ತಿಪರ ಕರ್ತವ್ಯಕ್ಕಾಗಿ ವೈಯಕ್ತಿಕ ಅಗತ್ಯಗಳನ್ನು ಬದಿಗಿರಿಸುತ್ತಿದ್ದಾಳೆ,' ಎಂದ ಶಿಫಾ ಅವರ ತಂದೆ ಎನ್‌ಸಿಪಿ ನಾಯಕ ಮುಕ್ಕಮ್ ಮುಹಮ್ಮದ್.
undefined
ಅವಳ ಭಾವೀ ಪತಿ ಅನಸ್ ಮೊಹಮ್ಮದ್‌ಗೆ ನಾವು ಇದನ್ನು ಹೇಳಿದಾಗ, ಅವರೂ ಕೂಡ ಅದಕ್ಕೆ ಒಪ್ಪಿದರು. ನಾನು ಸಮಾಜ ಸೇವಕ ಮತ್ತು ನನ್ನ ಹೆಂಡತಿ ಶಿಕ್ಷಕಿ. ನನ್ನ ಮಗಳ ಸಾಮಾಜಿಕ ಕಾಳಜಿ ಇನ್ನೂ ಹೆಚ್ಚಿನದು ಎಂದು ಅಭಿಪ್ರಾಯ ಪಟ್ಟಿರುವ ತಂದೆ ಮೊಹಮ್ಮದ್.
undefined
ಪ್ರಸ್ತುತ ಕೋಜಿಕೊಡಿಯಲ್ಲಿ ಪೋಸ್ಟಿಂಗ್‌ನಲ್ಲಿರುವ ಶಿಫಾ ಅವರ ಅಣ್ಣ ಕೂಡ ವೈದ್ಯರು. ಇದು ಸುಲಭವಲ್ಲ, ಆದರೆ ನಾನು ಮಹಾನ್‌ ಕೆಲಸ ಏನನ್ನೂ ಮಾಡಲಿಲ್ಲ, ನನ್ನ ಕರ್ತವ್ಯವನ್ನು ಮಾಡಿದ್ದೇನೆ ಅಷ್ಟೇ. ನನ್ನಂತೇ ಅನೇಕರು ತಮ್ಮ ಮದುವೆಯನ್ನು ಮುಂದೆ ಹಾಕಿದ್ದಾರೆ. ನಾನು ಅವರಲ್ಲಿ ಒಬ್ಬ. ನನ್ನ ಮದುವೆ ದಿನ, ಮದುವೆಯ ಬಟ್ಟೆಯ ಬದಲು ವಿಶೇಷ ಪ್ರೊಟೆಕ್ಷನ್ ಸೂಟ್ ಧರಿಸಿ ರೋಗಿಗಳನ್ನು ನೋಡಿಕೊಂಡೆ ಎಂಬುದು ನಿಜ. ಆದರೆ ನಾನು ಅದನ್ನು ಇಷ್ಟಪಟ್ಟೆ - ತನ್ನ ನಿರ್ಧಾರದ ಬಗ್ಗೆ, ಶಿಫಾ ಹೇಳಿಕೆ.
undefined
ಕೊರೋನಾ ವಿರುದ್ಧ ಹೋರಾಡುವಾಗ, ದೇಶಕ್ಕಾಗಿ ಪ್ರೀತಿ ಕಾಯುತ್ತದೆ ಎಂಬುದನ್ನು ಸಾಬೀತುಪಡಿಸಿದ್ದರು ಚೀನಾದ ಹೋಜಿಯಾಂಗ್‌ನ ನರ್ಸ್
undefined
ಚೆನ್ (24) ಮತ್ತು ಹುವಾಂಗ್ ಫೆಬ್ರವರಿ 4 ರಂದು ವಿವಾಹವಾಗಬೇಕಿತ್ತು. ಆದರೆ ಆ ಸಮಯದಲ್ಲಿ, ಚೀನಾದಲ್ಲಿ ಕೊರೋನಾ ವೈರಸ್‌ನಿಂದ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಇತರ ದಾದಿಯರಂತೆ ಚೆನ್ ತನ್ನ ಜೀವವನ್ನು ಪಣಕ್ಕಿಟ್ಟು ಜನರನ್ನು ಕರೋನಾದಿಂದ ರಕ್ಷಿಸುತ್ತಿದ್ದರು. ಅದಕ್ಕಾಗಿಯೇ ಇಬ್ಬರೂ ತಮ್ಮ ಮದುವೆಯನ್ನು ಮುಂದೂಡಲು ನಿರ್ಧರಿಸಿ ನಂತರ ಮಾರ್ಚ್‌ 20 ರಂದು ಸರಳ ವಿವಾಹವಾಗಿ ಮಾದರಿಯಾಗಿದ್ದಾರೆ ಚೀನಾ ಜೋಡಿ.
undefined
click me!