ವಿಪರೀತ ಸೆಕೆಯಾದಾಗ ಈವಾಗ ಫ್ಯಾನ್ ಗಾಳಿಯೂ ಸಾಕಾಗೋದಿಲ್ಲ. ಹಾಗಾಗಿ ಜನರು ಎಸಿಯಲ್ಲಿ ಕುಳಿತುಕೊಳ್ಳಲು ಇಷ್ಟಪಡ್ತಾರೆ, ಆದರೆ ಎಸಿಯಲ್ಲಿ ಹೆಚ್ಚು ಸಮಯ ಇರುವುದು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಡಿಹೈಡ್ರೇಶನ್(Dehydration) ಸಮಸ್ಯೆ
ಎಸಿಯಲ್ಲಿ ದೀರ್ಘಕಾಲ ಉಳಿಯುವುದರಿಂದ, ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತೆ, ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಆದ್ದರಿಂದ, ಎಸಿಯಲ್ಲಿ ಕುಳಿತಾಗಲೂ ನಿರಂತರವಾಗಿ ನೀರು ಕುಡಿಯುವುದು ಮುಖ್ಯ.
27
ಉಸಿರಾಟದ(Breath) ತೊಂದರೆ ಹೆಚ್ಚಿಸುತ್ತೆ
ಎಸಿಯನ್ನು ಆಗಾಗ್ಗೆ ಬಳಸೋದರಿಂದ ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ಇದು ಆಸ್ತಮಾ ಅಥವಾ ಅಲರ್ಜಿಯನ್ನು ಹೆಚ್ಚಿಸುತ್ತೆ ಯಾಕಂದ್ರೆ ಎಸಿಯ ಶುಚಿತ್ವದ ಕೊರತೆಯಿಂದಾಗಿ, ಅದರಲ್ಲಿರುವ ರೋಗಾಣುಗಳು ಉಸಿರಾಟದ ಮೂಲಕ ನಮ್ಮ ಶ್ವಾಸಕೋಶ ತಲುಪಲು ಪ್ರಾರಂಭಿಸುತ್ತವೆ.
37
ತಲೆನೋವಿನ(Head ache) ಸಮಸ್ಯೆ
ಎಸಿ ಕೋಣೆಯ ವಾತಾವರಣವನ್ನು ತಂಪಾಗಿಸುತ್ತೆ, ಆದರೆ ಹೊರಗಿನ ವಾತಾವರಣವು ಬೆಚ್ಚಗಿರುತ್ತೆ, ಇದರಿಂದಾಗಿ ಒಳಗೆ ಮತ್ತು ಹೊರಗೆ ಹೋದಾಗ, ವಾತಾವರಣ ಬದಲಾವಣೆಯಾಗಿ ತಲೆನೋವಿನ ಸಮಸ್ಯೆ ಕಾಡಬಹುದು ಮತ್ತು ನೀವು ಮೈಗ್ರೇನ್ ನಂತಹ ರೋಗಗಳಿಗೆ ಬಲಿಯಾಗಬಹುದು.
47
ಸೋಂಕು ಹೆಚ್ಚಿಸುತ್ತೆ
ಎಸಿಯಲ್ಲಿ ದೀರ್ಘಕಾಲ ಉಳಿಯುವುದು ಮೂಗಿನೊಳಗಿನ ಲೋಳೆಯನ್ನು ಒಣಗಿಸುತ್ತೆ, ಇದು ಸೋಂಕಿನ ಸಮಸ್ಯೆಗಳಿಗೆ ಕಾರಣವಾಗಬಹುದು. ವಾಸ್ತವವಾಗಿ, ಮೂಗಿನ ಲೋಳೆ ಒಣಗುವುದರಿಂದ, ಕೊಳಕು ಕೀಟಾಣು-ವೈರಸ್ಗಳು(Virus) ಮೂಗನ್ನು ಪ್ರವೇಶಿಸುತ್ತವೆ, ಇದು ಕಿರಿಕಿರಿ ಉಂಟುಮಾಡುತ್ತೆ.
57
ಡ್ರೈ ಸ್ಕಿನ್(Dry skin) ಸಮಸ್ಯೆ
ಎಸಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಚರ್ಮದ ತೇವಾಂಶವನ್ನು ತೆಗೆದುಹಾಕುತ್ತೆ, ಇದು ಚರ್ಮ ಮತ್ತು ಕೂದಲು ಎರಡನ್ನೂ ಡ್ರೈ ಮಾಡುತ್ತೆ. ಈ ಕಾರಣದಿಂದಾಗಿ, ಚರ್ಮದ ಮೇಲಿನ ಸುಕ್ಕುಗಳ ಸಮಸ್ಯೆ ವಯಸ್ಸಿಗೆ ಮುಂಚಿತವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತೆ ಮತ್ತು ಕೂದಲು ನಿರ್ಜೀವವಾಗಿ ಕಾಣುತ್ತೆ.
67
ಕಣ್ಣಿನ ಸಮಸ್ಯೆಗಳು (Eye Problems)
ಎಸಿ ಗಾಳಿಯು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಕಣ್ಣುಗಳು ಒಣಗುತ್ತವೆ, ಇದು ಕಿರಿಕಿರಿ, ತುರಿಕೆ ಮತ್ತು ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ಇಡೀ ದಿನ ಎಸಿಯಲ್ಲಿ ಕುಳಿತುಕೊಳ್ಳೋದನ್ನು ತಪ್ಪಿಸೋದು ಉತ್ತಮ.
77
ಮೂಳೆಗಳಲ್ಲಿ ನೋವು (Bone pain)
ಎಸಿಗೆ ನಿರಂತರವಾಗಿ ಒಡ್ಡಿಕೊಳ್ಳುವುದು ಮೂಳೆಗಳನ್ನು ದುರ್ಬಲಗೊಳಿಸುತ್ತೆ, ಇದು ಮೂಳೆ ಸಮಸ್ಯೆಗಳಿಗೆ ಮತ್ತಷ್ಟು ಕಾರಣವಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಎಸಿಯನ್ನು ಅವಾಯ್ಡ್ ಮಾಡಿ.