Feet Burning Sensation Diabetes: ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಪಾದದ ಉರಿಯು, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿ ನರಗಳಿಗೆ ಹಾನಿಯಾಗುವುದರ ಸಂಕೇತವಾಗಿದೆ. ಪರಿಹಾರ ಕ್ರಮಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಮಧುಮೇಹಿಗಳಲ್ಲಿ ಪಾದದ ಉರಿ ಹೆಚ್ಚಾಗಿರುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳವಾದ್ರೆ ಪಾದದ ಉರಿಯೂ ಏರಿಕೆಯಾಗುತ್ತದೆ. ಈ ಸಮಸ್ಯೆಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಂಡರೂ ತಾತ್ಕಲಿಕ ರಿಲೀಫ್ ನೀಡಿದ್ರೂ ಮತ್ತೆ ಇದು ಆರಂಭವಾಗುತ್ತದೆ. ಬಹುತೇಕ ಮಧುಮೇಹಿಗಳು ಈ ಸಮಸ್ಯೆಯಿಂದ ಇಂದು ಬಳಲುತ್ತಿದ್ದಾರೆ. ಈ ಸಮಸ್ಯೆಯಾಗಲು ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ.
25
ರಕ್ತದಲ್ಲಿ ಸಕ್ಕರೆ ಪ್ರಮಾಣ
ರಕ್ತದಲ್ಲಿ ಸಕ್ಕರೆ ಪ್ರಮಾಣ ದೀರ್ಘಕಾಲದವರೆಗೆ ಇದ್ರೆ ಪಾದದ ನರಗಳಿಗೆ ನಿಧಾನವಾಗಿ ಹಾನಿಯಾಗುತ್ತದೆ. ನರಗಳಿಗೆ ರಕ್ತ ಪೂರೈಕೆ ಕಡಿಮೆಯಾಗುತ್ತಿದ್ದಂತೆ ಪಾದದಲ್ಲಿ ಉರಿ, ಜುಮ್ಮೆನಿಸುವಿಕೆ, ಚುಚ್ಚಿದಂತೆ ಮತ್ತು ಮರಗಟ್ಟಿದಂತಾಗುತ್ತದೆ. ಈ ಸಮಸ್ಯೆ ಕಡಿಮೆಯಾಗಲು ಏನು ಮಾಡಬೇಕು ಎಂದು ನೋಡೋಣ ಬನ್ನಿ.
35
ಪಾದದ ಉರಿ ಕಡಿಮೆಯಾಗಲು ಏನು ಮಾಡಬೇಕು?
1.ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರನದಲ್ಲಿಡಲು ಪ್ರಯತ್ನಿಸಿ. ವೈದ್ಯರು ಸೂಚಿಸಿರುವ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಿ. ಏನು ಮತ್ತು ಯಾವಾಗ ಸೇವಿಸುತ್ತಿದ್ದೇವೆ ಎಂಬುದರ ಬಗ್ಗೆ ಮುಂಜಾಗ್ರತೆ ಇರಲಿ.
2.ವೈದ್ಯರು ನೀಡಿರುವ ಮಾತ್ರೆ/ಇನ್ಸುಲಿನ್ ತಪ್ಪದೇ ತೆಗೆದುಕೊಳ್ಳಿ.
3.ನಿಯಮಿಯವಾಗಿ HbA1cಯನ್ನು ನಿಯಮಿತವಾಗಿ ಪರೀಕ್ಷೆ ಮಾಡಿಕೊಳ್ಳಿ. ಇದರ ಜೊತೆಯಲ್ಲಿ ಮಧುಮೇಹಕ್ಕೆ ಸಂಬಂಧಿಸಿದ ಇತರೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ವೈದ್ಯರ ಸಲಹೆಯಂತೆ ಪಾದದ ನರಗಳ ಪರೀಕ್ಷೆ ಮಾಡಿಸಿಕೊಳ್ಳೋದನ್ನು ಮರೆಯಬೇಡಿ.
4.ಇದರ ಜೊತೆಯಲ್ಲಿ ವಿಟಮಿನ್ ಬಿ12 ಕೊರತೆ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ
55
ಗಾಯಗಳಾಗದಂತೆ ಎಚ್ಚರಿಕೆ
5.ಪಾದಗಳಲ್ಲಿ ಗಾಯಗಳಾಗದಂತೆ ಎಚ್ಚರಿಕೆ ಇರಲಿ. ಪ್ರತಿದಿನವೂ ಗಾಯಗಳಾಗಿದೆಯಾ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಿ. ಪಾದದ ಉರಿಯನ್ನು ಸಾಮಾನ್ಯ ರೋಗದ ಲಕ್ಷಣ ಎಂದು ಪರಿಗಣಿಸಬೇಡಿ. ಇದು ಮಧುಮೇಹದ ಲಕ್ಷಣವಾಗಿದ್ರೂ, ಕಾಲನಂತರ ನರಗಳಿಗೆ ಹಾನಿಯುಂಟು ಮಾಡುತ್ತದೆ. ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಂಡ್ರೆ ನರಗಳಿಗೆ ಹಾನಿಯನ್ನುಂಟು ಮಾಡೋದನ್ನು ತಪ್ಪಿಸಬಹುದು.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.