Weight Loss Tips: ಶೀಘ್ರವಾಗಿ ತೂಕ ಇಳಿಸಿಕೊಳ್ಳಬೇಕೆ? ಹಾಗಿದ್ರೆ ಈ ಜಪಾನೀಸ್ ಟೆಕ್ನಿಕ್ ಟ್ರೈ ಮಾಡಿ ನೋಡಿ

Published : Jun 07, 2025, 09:11 PM IST

ಜಪಾನ್‌ನಲ್ಲಿ ಒಂದು ವಿಶಿಷ್ಟವಾದ ನಡಿಗೆ ತಂತ್ರವನ್ನು ಬಳಸಲಾಗುತ್ತದೆ, ಇದು ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರ ಸಹಾಯದಿಂದ, ಹೆಚ್ಚು ನಡೆಯದೆ ಹಲವಾರು ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಳ್ಳಬಹುದು.

PREV
15

ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಇಂದು ಅನೇಕ ಜನರು ಈ ಸಮಸ್ಯೆಯಿಂದಾ ಬಳಲುತ್ತಿದ್ದಾರೆ. ಆದರೆ ಜಪಾನ್‌ನ ಹೆಚ್ಚಿನ ಜನಸಂಖ್ಯೆಯು ಬೊಜ್ಜಿನ ಸಮಸ್ಯೆಯಿಂದ ದೂರವಿದೆ. ಅವರ ಆರೋಗ್ಯಕರ ಜೀವನಶೈಲಿ (healthy lifestyle) ಮತ್ತು ಕೆಲವು ಸರಳ ತಂತ್ರಗಳು ಇದಕ್ಕೆ ಕಾರಣವಾಗಿವೆ. ಪ್ರತಿದಿನ 10,000 ಹೆಜ್ಜೆಗಳು ನಡೆಯುವ ಬದಲು, ಜಪಾನಿನ ಜನರು ವಾಕಿಂಗ್ ತಂತ್ರವನ್ನು ಅಳವಡಿಸಿಕೊಳ್ಳುತ್ತಾರೆ, ಅದರ ಸಹಾಯದಿಂದ ಅವರು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಾರೆ.

25

ಜಪಾನೀಸ್ ವಾಕಿಂಗ್ ಸ್ಟೈಲ್

ಜಪಾನಿನ ಜನರ ವಾಕಿಂಗ್ ತಂತ್ರವು (Japanese Walking Technique) ಬಹಳ ಚರ್ಚೆಯಲ್ಲಿದೆ. ಇದರ ಸಹಾಯದಿಂದ, ನೀವು 10,000 ಹೆಜ್ಜೆಗಳು ನಡೆಯದೆ ಹಲವಾರು ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಳ್ಳಬಹುದು. ಇದನ್ನು ಇಂಟರ್ವರ್ಲ್ ವಾಕಿಂಗ್ ಟ್ರೈನಿಂಗ್ (Interval walking training) ಎಂದೂ ಕರೆಯುತ್ತಾರೆ. ಈ ವಿಧಾನವನ್ನು ಜಪಾನ್‌ನಲ್ಲಿ ಅಭಿವೃದ್ಧಿಪಡಿಸಲಾಯಿತು, ಇದನ್ನು ಬಳಸಿಕೊಂಡು ಜನರು ಉತ್ತಮ ಫಲಿತಾಂಶಗಳನ್ನು ಪಡೆದರು.

35

ನಡೆಯುವ ವಿಧಾನ ಹೇಗಿರುತ್ತೆ?

ಈ ಜಪಾನೀಸ್ ಟೆಕ್ನಿಕ್ ನಲ್ಲಿ, (Japanese Walking Technique) ಪ್ರತಿದಿನ 30 ನಿಮಿಷಗಳ ಕಾಲ ನಡೆಯಬೇಕಾಗುತ್ತದೆ. ಆದರೆ ಒಂದೇ ವೇಗದಲ್ಲಿ ನಿರಂತರವಾಗಿ ನಡೆಯುವ ಬದಲು, ಕೆಲವೊಮ್ಮೆ ನಿಧಾನವಾಗಿ ಮತ್ತು ಕೆಲವೊಮ್ಮೆ ವೇಗವಾಗಿ ನಡೆಯುವುದನ್ನು ಅಭ್ಯಾಸ ಮಾಡಬೇಕಾಗುತ್ತದೆ. ಉದಾಹರಣೆಗೆ, 3 ನಿಮಿಷಗಳ ಕಾಲ ನಿಧಾನವಾಗಿ ನಡೆಯಬೇಕು ಮತ್ತು 3 ನಿಮಿಷಗಳ ಕಾಲ ವೇಗವಾಗಿರಬೇಕು. ಈ ಪ್ರಕ್ರಿಯೆಯನ್ನು 30 ನಿಮಿಷಗಳ ಕಾಲ ಪುನರಾವರ್ತಿಸಬೇಕು.

45

ವೈದ್ಯರ ಸಲಹೆ

ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್‌ನಲ್ಲಿ ಅಧ್ಯಯನ ಮಾಡಿದ ಕ್ಯಾಲಿಫೋರ್ನಿಯಾ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ಈ ತಂತ್ರದ ಬಗ್ಗೆ ಮಾತನಾಡಿ ಇದನ್ನು ತೂಕ ಇಳಿಸಿಕೊಳ್ಳಲು ಬಹಳ ಪರಿಣಾಮಕಾರಿ ಅಭ್ಯಾಸ ಎಂದಿದ್ದಾರೆ. ಈ ತಂತ್ರವು ನಿಮ್ಮ ತೂಕ ಇಳಿಸುವ (weight loss) ಪ್ರಯಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತೆ.

55

ನಡಿಗೆಯ ಪ್ರಯೋಜನಗಳು

ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ನಡೆಯುವುದರಿಂದ ನಿಮ್ಮ ದೇಹಕ್ಕೆ ಅನೇಕ ಪ್ರಯೋಜನಗಳು ದೊರೆಯುತ್ತವೆ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ. ಇದಲ್ಲದೆ, ನಡಿಗೆಯು ನಿಮ್ಮ ರಕ್ತದೊತ್ತಡ (blood pressure) ಮತ್ತು ಹೃದಯಕ್ಕೂ ಸಹ ತುಂಬಾ ಪ್ರಯೋಜನಕಾರಿಯಾಗಿದೆ.

Read more Photos on
click me!

Recommended Stories