ಈ ಜಪಾನೀಸ್ ಕ್ರಮ ಅಳವಡಿಸೋ ಮೂಲಕ ಸೋಮಾರಿತನ ದೂರ ಮಾಡಿ

First Published May 23, 2023, 6:38 PM IST

ಜಪಾನ್ ನ ಜನರು ಸೋಮಾರಿತನವನ್ನು ನಿವಾರಿಸಲು ಮತ್ತು ಕೆಲಸವನ್ನು ಪೂರ್ಣಗೊಳಿಸಲು ಪರಿಣಾಮಕಾರಿ ತಂತ್ರಗಳ ಪಟ್ಟಿಯನ್ನು ಅನುಸರಿಸ್ತಾರೆ. ಈ ತಂತ್ರವು ಅವರನ್ನು ಅವರ ಜೀವನದುದ್ದಕ್ಕೂ ಸಕ್ರಿಯವಾಗಿರಿಸುತ್ತದೆ. ಈ ವಿಶೇಷ ತಂತ್ರಗಳ ಬಗ್ಗೆ ನಾವು ಕೂಡ ತಿಳಿದುಕೊಳ್ಳೋಣ.

ಜಪಾನ್ ಜನರು ತಮ್ಮ ಸಕ್ರಿಯ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇವರು ಫಿಟ್ ಆಗಿರಲು ಹಲವಾರು ಅಂಶಗಳು ಕಾರಣವಾಗಿವೆ. ಇವುಗಳಲ್ಲಿ ವಾಕಿಂಗ್ ಮತ್ತು ಸೈಕ್ಲಿಂಗ್, ಸಾಂಪ್ರದಾಯಿಕ ಅಭ್ಯಾಸಗಳು, ಸಾಂಸ್ಕೃತಿಕ ನಿಯಮಗಳು ಇತ್ಯಾದಿಗಳು ಸೇರಿವೆ. ನೀವು ಸೋಮಾರಿತನವನ್ನು ತೆಗೆದುಹಾಕಲು ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಬಯಸಿದರೆ, ನೀವು ಈ ಜಪಾನೀಸ್ ತಂತ್ರಗಳನ್ನು ಅನುಸರಿಸಬಹುದು.

ಇಕಿಗೈ (Ikigai: Find Purpose)
ನಿಮ್ಮ ಭಾವನೆಗಳನ್ನು, ಆಸಕ್ತಿಗಳು ಮತ್ತು ದೀರ್ಘಕಾಲೀನ ಗುರಿಗಳನ್ನು ಗುರುತಿಸಿ. ನಿಮ್ಮ ಆ ಗುರಿಗಳ ಉದ್ದೇಶ ಏನು ಅನ್ನೋದನ್ನು ತಿಳಿಯಿರಿ ಮತ್ತು ಅವುಗಳನ್ನು ನಿಮ್ಮ ಮೌಲ್ಯಗಳೊಂದಿಗೆ ಹೊಂದಿಸೋದ್ರಿಂದ ಸೋಮಾರಿತನವನ್ನು ದೂರ ಮಾಡಬಹುದು.

ಕೈಝೆನ್ (Kaizen)
ಈ ತಂತ್ರವು ನಿಮ್ಮನ್ನು ಸುಧಾರಿಸಲು ಮತ್ತು ಸೋಮಾರಿತನವನ್ನು ದೂರ ಮಾಡಲು ಒತ್ತು ನೀಡುತ್ತದೆ. ಕೆಲಸವನ್ನು ಮಾಡಲು ಇದನ್ನು ಉತ್ತಮ ಜಪಾನೀಸ್ ತಂತ್ರವೆಂದು ಪರಿಗಣಿಸಲಾಗಿದೆ. ಸೋಮಾರಿತನವನ್ನು ನಿವಾರಿಸುವ ನಿಟ್ಟಿನಲ್ಲಿ ಸಣ್ಣ, ನಿರ್ವಹಿಸಬಹುದಾದ ಕ್ರಮಗಳನ್ನು ತೆಗೆದುಕೊಳ್ಳಲು ಇದು ಪ್ರೋತ್ಸಾಹಿಸುತ್ತದೆ. ಸಣ್ಣ ಸುಲಭ ಕಾರ್ಯಗಳೊಂದಿಗೆ ಪ್ರಾರಂಭಿಸಿ, ಬಳಿಕ ಕಷ್ಟದ ಕೆಲಸಗಳನ್ನು ದೀರ್ಘಾವಧಿವರೆಗೆ ಮಾಡುತ್ತಾ ಬನ್ನಿ. ಇದರಿಂದ ಕಾರ್ಯಕ್ಷಮತೆ ಹೆಚ್ಚುತ್ತೆ.

ಪೊಮೊಡೊರೊ ತಂತ್ರ (Pomodoro Technique))
ನಿಮ್ಮ ಕೆಲಸವನ್ನು "ಪೊಮೊಡೊರೊಸ್" ಎಂದು ಕರೆಯಲಾಗುವ 25 ನಿಮಿಷಗಳ ಮಧ್ಯಂತರಗಳಾಗಿ ವಿಭಜಿಸಿ. ಅಂದರೆ 25 ನಿಮಿಷದ ಕೆಲಸದ ಬಳಿಕ ಸಣ್ಣ ವಿಶ್ರಾಂತಿ ತೆಗೆದುಕೊಳ್ಳೋದು.. ಈ ರಚನಾತ್ಮಕ ವಿಧಾನವು ಗಮನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೆಲಸವನ್ನು ಮುಂದಕ್ಕೆ ಹಾಕೋದನ್ನು ತಡೆಯುತ್ತೆ..

ಕನ್ಬನ್ ಸಿಸ್ಟಮ್ (Kanban Method)
ನಿಮ್ಮ ಕ್ರಿಯೆಗಳು ಮತ್ತು ಪ್ರಗತಿಯನ್ನು ಟ್ರ್ಯಾಕ್ ಮಾಡಲು ವಿಶ್ಯುವಲ್ ಬೋರ್ಡ್ ಅಥವಾ ಚಾರ್ಟ್ ರಚಿಸಿ. ನಿಮ್ಮ ಕೆಲಸವನ್ನು ಸಣ್ಣ ಭಾಗಗಳಾಗಿ ವಿಭಜಿಸಿ, ನಿಮ್ಮ ಸ್ವಂತ ಪ್ರಗತಿಯನ್ನು ನೀವು ನೋಡಿದಾಗ, ಅದು ಪ್ರೇರಣೆಯನ್ನು ಹೆಚ್ಚಿಸುತ್ತದೆ ಮತ್ತು ಸೋಮಾರಿತನವನ್ನು ಕಡಿಮೆ ಮಾಡುತ್ತದೆ.

ಸಿಯೆರ್ರಿ (ಅವ್ಯವಸ್ಥೆ)
ನಿಮ್ಮ ಸುತ್ತಲಿನ ಸ್ಥಳ ಮತ್ತು ಡಿಜಿಟಲ್ ಸ್ಥಳಗಳನ್ನು ಸ್ವಚ್ಚಗೊಳಿಸುವುದು ಗೊಂದಲಗಳನ್ನು ತೆಗೆದುಹಾಕಲು ಮತ್ತು ಹೆಚ್ಚು ಸಂಘಟಿತ ವಾತಾವರಣವನ್ನು ರಚಿಸಲು ಸಹಾಯ ಮಾಡುತ್ತದೆ, ಇದು ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಸೋಮಾರಿತನವನ್ನು ಕಡಿಮೆ ಮಾಡುತ್ತದೆ.

ಕೈಕಾಕು (Kaikaku (Radical Change)
ಅನೇಕ ಬಾರಿ, ಅಗತ್ಯ ಬದಲಾವಣೆಗಳನ್ನು ಮಾಡುವುದು ಅಥವಾ ಹೊಸ ವಿಧಾನವನ್ನು ಪ್ರಯತ್ನಿಸುವುದು ಸೋಮಾರಿತನವನ್ನು ದೂರ ಮಾಡುತ್ತೆ.ನಿಮಗಾಗಿ ಯಾವ ರೀತಿಯ ಟೆಕ್ನಿಕ್ ಕಾರ್ಯನಿರ್ವಹಿಸುತ್ತದೆ ಅನ್ನೋದನ್ನು ತಿಳಿದು, ಅದರ ಪ್ರಕಾರ ಕೆಲಸ ಮಾಡಿ. 

click me!