#JackFruitDay ತ್ವಚೆಗೂ ಮದ್ದು, ಲೈಂಗಿಕ ಸಮಸ್ಯೆಗೂ ರಾಮಬಾಣ!
First Published | Jul 4, 2020, 4:42 PM ISTಹಲಸಿನ ಹಣ್ಣು ತಿನ್ನೋ ಮಜಾನೇ ಬೇರೆ. ಪಕ್ಕದಲ್ಲಿ ಸ್ವಲ್ಪ ಜೇನುತುಪ್ಪ ಇದ್ದರಂತೂ ಮನುಷ್ಯ ಕರಡಿ ಆಗಿಬಿಡುತ್ತಾನೆ. ಒಂದೇ ಒಂದು ಸೊಳೆ ಅಂತ ಹೇಳ್ಕೊಂಡು ಇಡೀ ಅರ್ಧ ಹಣ್ಣನ್ನೇ ತಿಂದು ಮುಗಿಸಿರುತ್ತೇವೆ. ಅದರಲ್ಲಿಯೂ ಮಲೆನಾಡಲ್ಲಂತೂ ಈ ಹಲಿಸನ ಸೀಸನ್‌ನಲ್ಲಿ ಹಣ್ಣು ತಿನ್ನೋದು, ಅದರ ವಿಧ ವಿಧ ಭಕ್ಷ್ಯ ಮಾಡೋದು ಒಂದು ಸಂಸ್ಕೃತಿ. 'ಹಸಿದ ಹೊಟ್ಟೆಗೆ ಹಲಸು, ಉಂಡ ಹೊಟ್ಟೆಗೆ ಮಾವು' ಎಂಬ ಗಾದೆಯೇ ಇದೆ. ಹಸಿದಾಗ ಹಲಸು ತಿಂದ್ರೆ ಆಗೋ ಲಾಭವೂ ಅಷ್ಟಿಷ್ಟಲ್ಲ. ಈ ಹಳದಿ ಸುವಾಸನೆಯುಕ್ತ ಹಣ್ಣಿಗೂ ದಿನವೊಂದಿದೆ. ಈ ಫಲದಿಂದ ಆಗೋ ಆರೋಗ್ಯ ಲಾಭಗಳೇನು?