10 ನಿಮಿಷ ಸೂರ್ಯ ನಮಸ್ಕಾರದಿಂದ ಕೊರೋನಾ ಕಾಲದ ಟೆನ್ಷನ್‌ ಕಡಿಮೆ!

First Published Jun 21, 2020, 12:23 PM IST

ಕೆಲಸ ಜಾಸ್ತಿ, ಆದಾಯ ಕಡಿಮೆ ಅನ್ನುವಂತಾಗಿರುವ ದಿನಗಳಿವು. ಎಲ್ಲಿ ನೋಡಿದರೂ ಬಾಡಿದ ಮುಖಗಳೇ ಕಾಣಿಸುವ ಹೊತ್ತು. ಅವರಿವರೆಂಬ ಭೇದವಿಲ್ಲದೆ ಪ್ರತಿಯೊಬ್ಬರೂ ದಣಿದಂತೆ ಕಾಣಿಸುತ್ತಿದ್ದಾರೆ. ಇಂಥಾ ಹೊತ್ತಲ್ಲಿ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಬೇಕಾದ್ದು ಎಲ್ಲರೂ ಮಾಡಲೇಬೇಕಾದ ಕೆಲಸ. ಅದಕ್ಕಾಗಿ ಹೆಚ್ಚು ಸಮಯ ಬೇಕಿಲ್ಲ, ದಿನಕ್ಕೆ ಒಂದು ಹತ್ತು ನಿಮಿಷ ಸೂರ್ಯ ನಮಸ್ಕಾರ ಮಾಡಿ. ಅದರಿಂದ ದೇಹ ಮತ್ತು ಮನಸ್ಸಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ.ಸೂರ್ಯ ನಮಸ್ಕಾರ ಮಾಡಿದರೆ 417 ಕ್ಯಾಲರಿ ಬರ್ನ್‌ ಆಗುತ್ತದೆ ಅನ್ನುತ್ತಾರೆ ಪರಿಣತರು. ಈ ಲೆಕ್ಕಾಚಾರ ನೋಡಿದರೆ ಹತ್ತು ನಿಮಿಷದ ಸೂರ್ಯ ನಮಸ್ಕಾರ 139 ಕ್ಯಾಲರಿ ಬರ್ನ್‌ ಮಾಡುತ್ತದೆ.

ಪ್ರಣಮಾಸನ : ಸೂರ್ಯನಿಗೆ ನಮಸ್ಕಾರ ಮಾಡುವ ಭಂಗಿ. ನೇರವಾಗಿ ನಿಂತುಕೊಳ್ಳಬೇಕು. ನಿಮ್ಮ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಇದು ಸಹಕಾರಿ.
undefined
ಹಸ್ತಉತ್ಥಾನಾಸನ: ಕೈಮುಗಿದ ಭಂಗಿಯಲ್ಲಿ ನಿಧಾನಕ್ಕೆ ಉಸಿರು ಎಳೆದುಕೊಳ್ಳುತ್ತಾ ಹಿಂದಕ್ಕೆ ಬಾಗಬೇಕು. ತೋಳು ಕಿವಿಗಳಿಗೆ ಅಂಟಿಕೊಂಡಿರಬೇಕು. ಈ ಆಸನ ಕೆಳಹೊಟ್ಟೆದೃಢಗೊಳಿಸುತ್ತದೆ ಮತ್ತು ದೇಹದ ಮೇಲ್ಭಾಗಕ್ಕೆ ಶಕ್ತಿಯ ಹರಿವು ಉಂಟಾಗುತ್ತದೆ.
undefined
ಪಾದ ಹಸ್ತಾಸನ: ನಿಧಾನಕ್ಕೆ ಹೊರಕ್ಕೆ ಉಸಿರು ಬಿಡುತ್ತಾ ಮುಂದಕ್ಕೆ ಬಾಗಿ ನಿಮ್ಮ ಹಸ್ತವನ್ನು ನೆಲಕ್ಕೆ ತಾಗಿಸಬೇಕು. ಕೊಂಚ ಮಂಡಿ ಬಾಗಿದರೂ ಪರವಾಗಿಲ್ಲ. ನೇರವಾಗಿದ್ದಷ್ಟೂಒಳ್ಳೆಯದು. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು.
undefined
ಅಶ್ವ ಸಂಚಲನಾಸನ: ಉಸಿರನ್ನು ಒಳಗೆಳೆದುಕೊಳ್ಳುತ್ತಾ ಎಡ ಕಾಲನ್ನು ಹಿಂದಕ್ಕೆ ಇಡಬೇಕು. ಬಲಗಾಲನ್ನು ನೇರವಾಗಿಟ್ಟುಕೊಂಡು ತಲೆ ಮೇಲೆತ್ತಬೇಕು.
undefined
ದಂಡಾಸನ: ಬಲಗಾಲನ್ನೂ ಹಿಂದಕ್ಕೆ ಇಡಬೇಕು. ಉಸಿರನ್ನು ಎಳೆದುಕೊಳ್ಳುತ್ತಿರಬೇಕು. ಶರೀರ ನೇರವಾಗಿರಬೇಕು. ಇದರಿಂದ ತೋಳುಗಳು, ಬೆನ್ನಿನ ಮಾಂಸಖಂಡಗಳು ಬಲಗೊಳ್ಳುತ್ತವೆ.
undefined
ಅಷ್ಟಾಂಗ ನಮಸ್ಕಾರ: ಉಸಿರು ಹೊರಗೆ ಬಿಡುತ್ತಾ ಮಂಡಿಯನ್ನು ನೆಲಕ್ಕೆ ತಾಗಿಸಿ. ಪೃಷ್ಟಭಾಗ ಮೇಲೆ ಇರುವಂತೆ ಎರಡೂ ಕೈಗಳು ನೆಲಕ್ಕೆ ಊರಿ ಎದೆಭಾಗ ಮತ್ತು ಗಲ್ಲವನ್ನು ನೆಲಕ್ಕೆ ತಾಗಿಸಿ. ಇದರಿಂದ ಎದೆಭಾಗ, ತೋಳುಗಳು ಮತ್ತು ಕಾಲುಗಳು ಬಲಗೊಳ್ಳುತ್ತವೆ.
undefined
ಭುಜಂಗಾಸನ: ನಿಧಾನವಾಗಿ ಉಸಿರು ಎಳೆದುಕೊಳ್ಳುತ್ತಾ ಪೃಷ್ಟಭಾಗವನ್ನು ನೆಲಕ್ಕೆ ತಂದು ಕೈಯನ್ನು ನೆಲಕ್ಕೆ ಊರಿ ಎದೆ ಮತ್ತು ತಲೆಯನ್ನು ಮೇಲಕ್ಕೆ ಎತ್ತಿ. ಸಾಧ್ಯವಾದಷ್ಟುಹಿಂದಕ್ಕೆ ಬಾಗಿ.
undefined
ಪಾದ ಹಸ್ತಾಸನ: ಉಸಿರು ಹೊರಹಾಕುತ್ತಾ ತಲೆಯನ್ನು ಮಂಡಿಗೆ ತಾಗಿ ಹಸ್ತವನ್ನು ನೆಲಕ್ಕೆ ತಾಗಿಸಿ ನಿಲ್ಲಿ.
undefined
ಹಸ್ತ ಉತ್ಥಾನಾಸನ: ಉಸಿರು ಎಳೆದುಕೊಳ್ಳುತ್ತಾ ಕೈ ಮುಗಿದ ಭಂಗಿಯಲ್ಲಿ ಹಿಂದಕ್ಕೆ ಬಾಗಬೇಕು.
undefined
ಪ್ರಣಾಮಾಸನ: ಉಸಿರು ಬಿಡುತ್ತಾ ನಮಸ್ಕಾರ ಮಾಡುವ ಭಂಗಿಗೆ ವಾಪಸ್ಸು ಬನ್ನಿ.
undefined
click me!