ಮೋಸ್ಟ್‌ ಸೆಕ್ಸಿ ಗರ್ಲ್‌ ಇಶಾ ಗುಪ್ತಾ ಫಿಟ್‌ನೆಸ್‌ ಪಾಠ ಹೇಗಿದೆ ನೋಡಿ!

First Published | Jun 25, 2020, 10:01 AM IST

ಮೋಸ್ಟ್‌ ಸೆಕ್ಸಿ ಗರ್ಲ್‌ ಅಂತ ಕರೆಸಿಕೊಳ್ಳೋ ನಿಸ್ಸಂಕೋಚದ ಹುಡುಗಿ ಇಶಾ ಗುಪ್ತಾ ಲಾಕ್‌ಡೌನ್‌ ಟೈಮ್‌ನಲ್ಲಿ ಹೊಸ ಬಗೆಯ ಸ್ಟ್ರೆಚ್‌ಗಳು, ಯೋಗ ಪ್ರಾಕ್ಟೀಸ್‌ ಮಾಡಿದ್ದಾರೆ. ಆಕೆಯ ಫಿಟ್‌ನೆಸ್‌ ಪಾಠ ಹೀಗಿದೆ.

ಕೈಕಾಲು ಆಡಿವಷ್ಟಾದರೂ ವಿಶಾಲವಾಗಿರುವ ಜಾಗದಲ್ಲಿ ಎರಡೂ ಕಾಲು ಜೋಡಿಸಿ ನಿಲ್ಲಿ.
ನಿಧಾನಕ್ಕೆ ಕಾಲುಗಳ ನಡುವಿನ ಅಂತರ ಹೆಚ್ಚಿಸುತ್ತಾ ಹೋಗಿ. ಒಂದಿಷ್ಟುಅಗಲಕ್ಕೆ ಕಾಲು ಸ್ಪ್ರೆಡ್‌ ಮಾಡಿದ ಬಳಿಕ ಮುಂದಕ್ಕೆ ಬಾಗಿ.
Tap to resize

ಈಗ ನಿಮ್ಮ ಎರಡೂ ಕೈಗಳನ್ನೂ ಕತ್ತರಿಯಾಕಾರದಲ್ಲಿ ನೆಲಕ್ಕೆ ಊರಿ.
ಕೈಗಳು ಕತ್ತರಿಯಾಕಾರದಲ್ಲಿ ಇರುವಾಗಲೇ ಬಲ ಅಂಗೈಯನ್ನು ನಿಧಾನಕ್ಕೆ ಬಲಭಾಗಕ್ಕೆ ತಿರುಗಿಸಿ, ಎಡ ಅಂಗೈ ಎಡಭಾಗಕ್ಕೆ. ಎರಡೂ ಅಂಗೈಗಳೂ ಪರಸ್ಪರ ಮಾತನಾಡುವಂಥಾ ಭಂಗಿ.
ಕೆಲವು ಸೆಕೆಂಡ್‌ಗಳಷ್ಟುಹೊತ್ತು ಈ ಭಂಗಿಯಲ್ಲಿರಿ. ಐದಾರು ಸಲ ಈ ಎಕ್ಸರ್‌ಸೈಸ್‌ ಮಾಡಿದ್ರೆ ಮೈ ಚುರುಕಾಗುತ್ತೆ.
ನೆಲದಲ್ಲಿ ಕೂತು ಎರಡೂ ಕಾಲುಗಳನ್ನು ಸಾಧ್ಯವಾದಷ್ಟುಅಗಲಕ್ಕೆ ಸ್ಟೆ್ರಚ್‌ ಮಾಡೋದನ್ನು ಮಾಡಬಹುದು.
ದಿನದಲ್ಲಿ ಅರ್ಧ ಗಂಟೆಯನ್ನಾದರೂ ಯೋಗಾಸನ, ಪ್ರಾಣಾಯಾಮಕ್ಕೆ ಮೀಸಲಿಡಿ.
ಬಿಸಿಬಿಸಿ ನೀರು, ನಾರಿನಂಶ ಹೇರಳವಾಗಿರುವ ತರಕಾರಿ, ಹಣ್ಣು, ಮಿಲೆಟ್ಸ್‌ ಇದರ ಸರಿಯಾದ ಉಪಯೋಗ ತಿಳಿದಿದ್ದರೆ ಜಿಮ್‌ ಇಲ್ಲದೇ ಲೈಫ್‌ಲಾಂಗ್‌ ಫಿಟ್‌ ಆಗಿರಬಹುದು.

Latest Videos

click me!