ಇಟಲಿಯ ಈ ಹಳ್ಳಿಯನ್ನು ಕೊರೋನಾದಿಂದ ರಕ್ಷಿಸಿದ್ದು ಅಲ್ಲಿನ ಜಾದೂ ಬಾವಿಯಂತೆ!

First Published Apr 3, 2020, 8:01 PM IST

ಕೊರೋನಾ ವೈರಸ್‌ನಿಂದ ಅತೀ ಹೆಚ್ಚು ಹಾನಿಗೊಳಗಾದ ದೇಶಗಳಲ್ಲಿ  ಮೊದಲ ಸ್ಥಾನದಲ್ಲಿದೆ ಇಟಲಿ. ಇದುವರೆಗೆ 13 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟರೆ,  1 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ದೇಶದಲ್ಲಿ ಎಲ್ಲೆಡೆ ಭಯದ ವಾತಾವರಣವಿದ್ದೂ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ. ರೋಗಿಗಳ ಸೇವೆಯಲ್ಲಿ ತೊಡಗಿರುವ ಜನರೂ ಸಾಯುತ್ತಿದ್ದಾರೆ. ಆದರೆ ಅದೇ ಇಟಲಿಯಲ್ಲಿ ಇನ್ನೂ ಕೊರೋನಾ ವೈರಸ್‌ ತಲುಪದ ಹಳ್ಳಿಯೊಂದಿದೆ ಎಂದರೆ ಆಶ್ಚರ್ಯ ಖಂಡಿತ. ಇಟಲಿಯ ಆ ಹಳ್ಳಿಯ ಕಿರು ಪರಿಚಯ ಇಲ್ಲಿ.

ಇಟಲಿಯ ಪೂರ್ವ ಭಾಗದಲ್ಲಿರುವ ಟುರಿನ್ ನಗರದ ಪೀಡ್‌ಮಾಂಟ್ ವ್ಯಾಪ್ತಿಯ ಮೊಂಟಾಲ್ಡೊ ಟೊರಿನೀಸ್ ಹೆಸರಿನ ಹಳ್ಳಿ ಕೊರೋನಾ ವೈರಸ್‌ ಮುಕ್ತವಾಗಿದೆ. ಇಲ್ಲಿನ ಕ್ಲೀನ್‌ ಗಾಳಿ ಮತ್ತು ನೀರೇ ಇದಕ್ಕೆ ಕಾರಣ ಎಂದು ಇಲ್ಲಿನ ಜನರು ನಂಬುತ್ತಾರೆ.
undefined
ಇಲ್ಲಿನ ನೀರು ಮಾಂತ್ರಿಕವಾಗಿದೆ ಎಂದು ಗ್ರಾಮದ ಕೆಲವರು ಹೇಳುತ್ತಾರೆ. ಆದ್ದರಿಂದ, ಮೊಂಟಾಲ್ಡೊ ಟೊರಿನೀಸ್‌ನ ಯಾವುದೇ ಸದಸ್ಯರಿಗೆ ಇದುವರೆಗೂ ಸೋಂಕು ತಗುಲಿಲ್ಲವಂತೆ.
undefined
ಆಶ್ಚರ್ಯಕರ ಸಂಗತಿಯೆಂದರೆ, 3600ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ಟುರಿನ್ ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿದೆ ಈ ಹಳ್ಳಿ, ಇಲ್ಲಿನ ಜನರು ಕೂಡ ಹಳ್ಳಿಯಿಂದ ಪಟ್ಟಣಕ್ಕೆ ಹೋಗಿ ಬರುತ್ತಿದ್ದರೂ ಆರೋಗ್ಯವಾಗಿದ್ದಾರೆ.
undefined
ಪೂರ್ಣ ಇಟಲಿಯೇ ರೋಗ ಪೀಡಿತವಾದರೂ, ಈ ಹಳ್ಳಿ ಸೇಫ್ ಆಗಿರುವುದು ನಿಜಕ್ಕೂ ಆಶ್ಚರ್ಯ.
undefined
ನೆಪೋಲಿಯನ್ ಸೈನ್ಯವನ್ನು ಇಲ್ಲಿ ತಂಗಿದ್ದಾಗ ಹಳ್ಳಿ ಬಾವಿಗಳಿಂದ ನೀರನ್ನು ಉಪಯೋಗಿಸುತ್ತಿದ್ದ ಕಾರಣ ಸೈನಿಕರ ನ್ಯುಮೋನಿಯಾ ಗುಣವಾಗಿತ್ತು ಎಂದು ಪೀಡ್‌ಮಾಂಟ್ ಮೇಯರ್ ಸೆರ್ಗೆಯ್ ಜಿಯೋಟಿ ಹೇಳಿದ್ದರು. ಬಹುಶಃ ಈ ಬಾವಿಯಿಂದಾಗಿ, ಇಲ್ಲಿನ ಜನರು ಇನ್ನೂ ಕೊರೋನಾದಿಂದ ಸುರಕ್ಷಿತವಾಗಿದ್ದಾರೆ ಎಂಬ ನಂಬಿಕೆ ಜನರದ್ದು.
undefined
ಎಲ್ಲೆಡೆ ಸ್ವಚ್ಛತೆ ಇರುವ ಈ ಹಳ್ಳಿಯಲ್ಲಿ ಒಟ್ಟು 720 ಜನರು ತುಂಬಾ ಸಾಮಾನ್ಯ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಿರುವ ಕಾರಣದಿಂದ ಜನರು ಸೋಂಕಿನಿಂದ ಬದುಕುಳಿದಿದ್ದಾರೆ ಎನ್ನಲಾಗುತ್ತಿದೆ.
undefined
ಇಟಲಿಯಲ್ಲಿ ಕೊರೋನಾ ಎಫೆಕ್ಟ್‌ ಅತಿ ಗಂಭೀರವಾಗಿದ್ದು ಸೇವೆಯಲ್ಲಿ ತೊಡಗಿರುವ ಜನರೂ ಕೊನೆಯುಸಿರೆಳೆಯುತ್ತಿದ್ದಾರೆ.
undefined
ಕೊರೋನಾದಿಂದ ಸತ್ತವರ ಸಂಖ್ಯೆ ಇಟಲಿಯಲ್ಲೇ ಹೆಚ್ಚು.
undefined
ಶವ ಪೆಟ್ಟಿಗೆಗಳೀಗ ಇಟಲಿಯ ಕಾಮನ್‌ ದೃಶ್ಯ.
undefined
ಇಟಲಿಯಲ್ಲಿ ಸೋಂಕಿತರ ಹೆಣ ಸಾಗಿಸುವ ಆರ್ಮಿ ಟ್ರಕ್‌ಗಳ ಪೋಟೋಗಳು ವೈರಲ್‌ ಆಗಿತ್ತು.
undefined
click me!