ಮೀನು -ಹಾಲು ಜೊತೆಯಾಗಿ ಸೇವಿಸೋದು ನಿಜವಾಗ್ಲೂ ಅಪಾಯಕಾರಿಯೇ?

First Published Jul 22, 2022, 6:57 PM IST

ತಿನ್ನಲು ಅದೆಷ್ಟೋ ವೆರೈಟಿಯ ಆಹಾರಗಳಿವೆ, ನಾವೆಲ್ಲರೂ ಅದನ್ನು ಇಷ್ಟಪಟ್ಟು ತಿನ್ನುತ್ತೇವೆ. ಇನ್ನು ನಾವು ತಿನ್ನೋ ಆಹಾರದ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿರೋದನ್ನು ಕೇಳಿದ್ದೇವೆ. ಕೆಲವೊಮ್ಮೆ ಅದು ನಿಜವೇ ಅಥವಾ ಸುಳ್ಳೆ ಎಂಬ ಗೊಂದಲದಲ್ಲೇ ಉಳಿಯುತ್ತೇವೆ. ಹೆಚ್ಚಿನ ಜನರು ಸತ್ಯವನ್ನು ಅರ್ಥಮಾಡಿಕೊಳ್ಳದೆ ಆಹಾರದ ಕುರಿತಾದ ಸತ್ಯ ಮಿತ್ಯಗಳನ್ನು ಅರ್ಥ ಮಾಡಿಕೊಳ್ಳದೇ ಅದನ್ನು ಸ್ವೀಕರಿಸುತ್ತಾರೆ. ಹಾಗಾದರೆ ಮೀನು ಮತ್ತು ಹಾಲನ್ನು ಒಟ್ಟಿಗೆ ತೆಗೆದುಕೊಳ್ಳಬಾರದು ಎಂಬ ಸಲಹೆಯ ಹಿಂದಿನ ಸತ್ಯವೇನು ತಿಳಿಯೋಣ.

ನಾವು ಆಹಾರವನ್ನು ಎಷ್ಟೇ ಆರೋಗ್ಯಕರವಾಗಿಟ್ಟರೂ, ಎಷ್ಟೇ ಆರೋಗ್ಯಕರ ಆಹಾರ ಸೇವಿಸಿದರೂ, ಕೆಲವು ಆಹಾರಗಳನ್ನು ಒಟ್ಟಿಗೆ ತಿನ್ನುವುದು ಆರೋಗ್ಯವನ್ನು ಹಾನಿಗೊಳಿಸುತ್ತದೆ. ಮೊಸರು, ಹಾಲು ಅಥವಾ ಮಾವಿನ ಹಣ್ಣನ್ನು ಕೆಲವು ವಸ್ತುಗಳೊಂದಿಗೆ ತಿನ್ನಬಾರದು ಎಂದು ನೀವು ಅನೇಕ ಬಾರಿ ಕೇಳಿರಬಹುದು. ಮೀನು ಮತ್ತು ಹಾಲನ್ನು (milk and fish) ಸಹ ಒಟ್ಟಿಗೆ ಸೇವಿಸಬಾರದು ಎನ್ನುತ್ತಾರೆ, ಅದರ ಬಗ್ಗೆ ನಾವು ಇಂದು ಮಾತನಾಡಲಿದ್ದೇವೆ. 

ಮೀನು ಮತ್ತು ಹಾಲನ್ನು ಒಟ್ಟಿಗೆ ತಿನ್ನಲು ಯಾರೂ ನಿಮಗೆ ಸಲಹೆ ನೀಡುವುದಿಲ್ಲ. ಈ ಎರಡು ವಸ್ತುಗಳನ್ನು ಒಟ್ಟಿಗೆ ತಿನ್ನುವುದು ಚರ್ಮದ ಸಮಸ್ಯೆಗಳಿಗೆ (skin problem) ಕಾರಣವಾಗಬಹುದು ಎಂಬುದು ಶತಮಾನಗಳ ಹಿಂದಿನ ನಂಬಿಕೆಯಾಗಿದೆ. ಹಾಗಾದರೆ ಈ ಕಾಂಬಿನೇಶನ್ ನಿಜವಾಗಿಯೂ ಹಾನಿಯನ್ನುಂಟುಮಾಡುತ್ತದೆಯೇ ಎಂದು ಕಂಡುಹಿಡಿಯೋಣವೇ?

ಆರೋಗ್ಯ ತಜ್ಞರು ಏನು ಹೇಳುತ್ತಾರೆ?
ಡಾ ಸಿದ್ಧಾಂತ್ ಭಾರ್ಗವ ಇನ್ಸ್ಟಾಗ್ರಾಮ್ನಲ್ಲಿ ರೀಲ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದರು. ವೈಜ್ಞಾನಿಕವಾಗಿ, ಮೀನು ತಿನ್ನುವಾಗ ಹಾಲು ಕುಡಿಯುವುದರಿಂದ ದೇಹ ಮತ್ತು ಚರ್ಮಕ್ಕೆ ಹಾನಿಕಾರಕ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಹೇಳಿದರು. ಆದಾಗ್ಯೂ, ಈ ಎರಡನ್ನೂ ಒಟ್ಟಿಗೆ ತಿನ್ನುವುದು ಇವುಗಳಲ್ಲಿ ಹಾಲು ಅಥವಾ ಮೀನಿನ ಅಲರ್ಜಿ (fish allergy) ಹೊಂದಿರುವವರಿಗೆ ಮಾತ್ರ ಹಾನಿಯುಂಟು ಮಾಡುತ್ತದೆ ಎಂದು ಕೆಲವು ತಜ್ಞರು ನಂಬುತ್ತಾರೆ.

ಆಯುರ್ವೇದವು ಏನು ಹೇಳುತ್ತದೆ?
ಆಯುರ್ವೇದದ ಪ್ರಕಾರ, ತಿನ್ನುವ ಈ ಎರಡು ವಸ್ತುಗಳು ದೇಹದ ಮೇಲೆ ವಿಭಿನ್ನ ಪರಿಣಾಮ ಬೀರುತ್ತವೆ, ಆದ್ದರಿಂದ ಅವುಗಳನ್ನು ಒಟ್ಟಿಗೆ ತಿನ್ನಬಾರದು. ಅಂದರೆ ಹಾಲಿನಲ್ಲಿರುವ ಪೋಷಕ ತತ್ವಗಳು ಮತ್ತು ಮೀನಿನಲ್ಲಿರುವ ಪೋಷಕ ತತ್ವಗಳು ವಿಭಿನ್ನವಾಗಿರುತ್ತವೆ. ಆದುದರಿಂದ ಅವುಗಳನ್ನು ಒಟ್ಟಿಗೆ ಸೇವಿಸಿದಾಗ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. 

ಇನ್ನು ಹಾಲಿನ ಗುಣ ತಂಪಾಗಿರುತ್ತದೆ ಮತ್ತು ಮೀನಿನ ಗುಣ ಬಿಸಿಯಾಗಿರುತ್ತದೆ ಮತ್ತು ಎರಡನ್ನೂ ಒಟ್ಟಿಗೆ ತಿನ್ನುವುದು ದೇಹದಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತದೆ, ಇದು ದೇಹದಲ್ಲಿ ರಾಸಾಯನಿಕ ಬದಲಾವಣೆಗಳಿಗೆ ಕಾರಣವಾಗಬಹುದು. ಇದರಿಂದ ಆರೋಗ್ಯ ಸಮಸ್ಯೆಗಳು (health problem) ಉಂಟಾಗುತ್ತವೆ.

ಮೀನು ಮತ್ತು ಹಾಲಿನಲ್ಲಿರುವ ಪೋಷಕಾಂಶಗಳು
ಹಾಲು ಮತ್ತು ಮೀನುಗಳು ಪ್ರತ್ಯೇಕವಾಗಿ ನೋಡಿದರೆ, ಎರಡೂ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತವೆ, ಆದ್ದರಿಂದ ಅನೇಕ ಸ್ಥಳಗಳಲ್ಲಿ ಈ ಎರಡನ್ನೂ ಒಟ್ಟಿಗೆ ಸೇವಿಸಲಾಗುತ್ತದೆ. ಅನೇಕ ಜನರು ಅಡುಗೆ ಮಾಡುವಾಗ ಮೀನುಗಳಲ್ಲಿ ಮೊಸರನ್ನು ಸಹ ಹಾಕುತ್ತಾರೆ. 

ಮೀನು ಮತ್ತು ಹಾಲನ್ನು ಪ್ರೋಟೀನ್ ನ ಉತ್ತಮ ಮೂಲಗಳಾಗಿವೆ ಎಂದು ಕೆಲವರು ನಂಬುತ್ತಾರೆ, ಆದರೆ ಅವುಗಳನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಎರಡು ವಿಭಿನ್ನ ಜೀರ್ಣರಸಗಳ ಅಗತ್ಯವಿದೆ, ಆದ್ದರಿಂದ ಒಟ್ಟಿಗೆ ತಿನ್ನುವುದು ನಿಮ್ಮ ಜೀರ್ಣಕ್ರಿಯೆಯನ್ನು (digestion) ಹಾಳುಮಾಡುತ್ತದೆ. ಆದ್ದರಿಂದ ತಿನ್ನೋ ಮುನ್ನ ಯೋಚ್ನೆ ಮಾಡೋದು ಮುಖ್ಯ.

ವೈಜ್ಞಾನಿಕ ದೃಷ್ಟಿಕೋನದಿಂದ, ಈ ಕಾಂಬಿನೇಶನ್ ಕೆಟ್ಟದ್ದೇನೂ ಅಲ್ಲ. ಆದಾಗ್ಯೂ, ನೀವು ಆಯುರ್ವೇದವನ್ನು ಕೇಳಿದರೆ, ಈ ಸಂಯೋಜನೆಯು ಖಂಡಿತವಾಗಿಯೂ ತೊಂದರೆಯನ್ನು ಉಂಟುಮಾಡಬಹುದು. ಆದಾಗ್ಯೂ, ಅನೇಕ ಜನರು ಈ ಕಾಂಬಿನೇಶನ್ ನ್ನು (food combination) ಯಾವುದೇ ತೊಂದ್ರೆ ಇಲ್ಲದೇನೆ ನಿರಂತರವಾಗಿ ಬಳಸುತ್ತಿದ್ದಾರೆ. 

ಹಲವಾರು ಜನರು ಮೀನು ಮತ್ತು ಹಾಲನ್ನು ಯಾವುದೇ ಸಮಸ್ಯೆ ಇಲ್ಲದೇನೆ ಬಳಸುತ್ತಾರೆ ನಿಜಾ, ಆದರೆ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಜನರು ಮತ್ತು ಎರಡರಲ್ಲಿ ಯಾವುದೇ ಒಂದಕ್ಕೂ ಅಲರ್ಜಿ ಹೊಂದಿರುವ ಜನರು ಮೀನು ಮತ್ತು ಹಾಲಿನ ಕಾಂಬಿನೇಶನ್ ನಿಂದ ದೂರವಿರಬೇಕು. ಇಲ್ಲಾಂದ್ರೆ ಸಮಸ್ಯೆ ಖಚಿತ. 

click me!