Health risks of chicken skin: ಮಾಂಸಹಾರಿಗಳಿಗೆ ಚಿಕನ್ ಅಂದ್ರೆ ಪ್ರಾಣ. ಅದರಲ್ಲೂ ಸ್ಕಿನ್ ಲೆಸ್ ಚಿಕನ್ ಇಷ್ಟಪಡುವವರೇ ಹೆಚ್ಚು. ಆದರೆ ಚಿಕನ್ ಸ್ಕಿನ್ ತಿನ್ನುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂಬ ಅರಿವು ಇಲ್ಲ. ಆದರೆ ಚಿಕನ್ ಸ್ಕಿನ್ ಸೇವನೆಯಿಂದ ಕೆಲವು ಕಾಯಿಲೆ ಬರುವ ಸಾಧ್ಯತೆ ಹೆಚ್ಚು.
ಮಾಂಸಹಾರಿಗಳು ಹೆಚ್ಚಾಗಿ ಚಿಕನ್ ಖಾದ್ಯಗಳನ್ನು ತಿನ್ನುತ್ತಾರೆ. ಹಲವರಿಗೆ ಇಷ್ಟವಾಗುವ ಆಹಾರಗಳೆಲ್ಲಾ ಚಿಕನ್‌ನಿಂದಲೇ ತಯಾರಾಗುತ್ತವೆ. ಅದರಲ್ಲೂ ಗ್ರಿಲ್ಡ್ ಚಿಕನ್ ಅಂದರೆ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಗ್ರಿಲ್ಡ್ ಚಿಕನ್‌ನಲ್ಲಿ ಮೇಲಿನ ಚರ್ಮವನ್ನು ತೆಗೆಯದೆ ಬೇಯಿಸಲಾಗುತ್ತದೆ. ಹಾಗೆಯೇ, ಮನೆಯಲ್ಲೂ ಅನೇಕರು ಚರ್ಮ ಸಹಿತ ಚಿಕನ್ ಅಡುಗೆ ಮಾಡುತ್ತಾರೆ. ಹೀಗೆ ಚಿಕನ್ ಸ್ಕಿನ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಅಪಾಯಕಾರಿಯೇ ಎಂಬ ಅನುಮಾನ ಹಲವರಲ್ಲಿದೆ. ತಜ್ಞರ ಪ್ರಕಾರ, ಚಿಕನ್ ಸ್ಕಿನ್ ತಿನ್ನದೇ ಇರುವುದೇ ಉತ್ತಮ. ಏಕೆಂದರೆ ಇದರಲ್ಲಿ ಕೊಬ್ಬಿನಾಂಶ ವಿಪರೀತವಾಗಿದ್ದು, ಇದು ಸ್ಯಾಚುರೇಟೆಡ್ ಫ್ಯಾಟ್ ಆಗಿದೆ. ಚಿಕನ್ ಸ್ಕಿನ್ ಹೆಚ್ಚು ತಿಂದರೆ ಈ ಕೊಬ್ಬು ದೇಹಕ್ಕೆ ಹಾನಿಕಾರಕವಾಗುತ್ತದೆ. ಎರಡು-ಮೂರು ತಿಂಗಳಿಗೊಮ್ಮೆ ತಿಂದರೆ ದೊಡ್ಡ ಸಮಸ್ಯೆಯಾಗದು, ಆದರೆ ಪದೇ ಪದೇ ತಿನ್ನುವ ಅಭ್ಯಾಸವಿದ್ದರೆ ತಕ್ಷಣ ಬಿಡುವುದು ಒಳ್ಳೆಯದು.
24
ಈ ಸಮಸ್ಯೆ ಇರುವವರು ತಿನ್ಲೇಬಾರ್ದು
ಚಿಕನ್ ಸ್ಕಿನ್ ತಿನ್ನುವುದರಿಂದ ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಹೆಚ್ಚು. ಇದರಲ್ಲಿರುವ ಅಧಿಕ ಕೊಬ್ಬು ರಕ್ತದಲ್ಲಿ ಸೇರಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜೊತೆಗೆ, ರಕ್ತದೊತ್ತಡವೂ (ಬಿಪಿ) ಹೆಚ್ಚಾಗುತ್ತದೆ. ಈಗಾಗಲೇ ಹೃದಯ ಸಮಸ್ಯೆ ಅಥವಾ ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವವರು ಚಿಕನ್ ಸ್ಕಿನ್ ತಿನ್ನಲೇಬಾರದು.
34
ತಿನ್ನದಿದ್ದರೇನೇ ಬೆಸ್ಟ್
ಚಿಕನ್ ಸ್ಕಿನ್‌ನಲ್ಲಿ ಕ್ಯಾಲೋರಿಗಳು ಹೆಚ್ಚಾಗಿರುತ್ತವೆ. ಇದರಿಂದಾಗಿ ಬೇಗನೆ ತೂಕ ಹೆಚ್ಚಾಗುತ್ತದೆ. ಇನ್ನು ಫಾಸ್ಟ್ ಫುಡ್ ಸೆಂಟರ್‌ಗಳಲ್ಲಿ ಸಿಗುವ ಫ್ರೈಡ್ ಚಿಕನ್‌ನಲ್ಲಿರುವ ಸ್ಕಿನ್, ಎಣ್ಣೆಯನ್ನು ಹೆಚ್ಚು ಹೀರಿಕೊಳ್ಳುತ್ತದೆ. ಆಗ ಅದನ್ನು ತಿಂದಾಗ, ದುಪ್ಪಟ್ಟು ಕ್ಯಾಲೋರಿಗಳು ದೇಹ ಸೇರುತ್ತವೆ. ಇದು ಬೊಜ್ಜಿಗೆ ಕಾರಣವಾಗುತ್ತದೆ. ಅಧಿಕ ತೂಕದಿಂದ ಮಧುಮೇಹ, ಥೈರಾಯ್ಡ್, ಕೀಲುನೋವಿನಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಸಾಧ್ಯವಾದಷ್ಟು ಚಿಕನ್ ಸ್ಕಿನ್ ತಿನ್ನದಿರುವುದೇ ಉತ್ತಮ.
ಹಾಗಂತ ಚಿಕನ್ ಸ್ಕಿನ್ ಸಂಪೂರ್ಣವಾಗಿ ನಿಷೇಧಿತ ಆಹಾರವೇನಲ್ಲ. ಆಗೊಮ್ಮೆ ಈಗೊಮ್ಮೆ ಗ್ರಿಲ್ ಅಥವಾ ಬೇಕ್ ಮಾಡಿದ ಚಿಕನ್ ಸ್ಕಿನ್ ತಿಂದರೆ ಪರವಾಗಿಲ್ಲ. ಆದರೆ ಪ್ರತಿವಾರ ತಿನ್ನುವ ಅಭ್ಯಾಸವಿದ್ದರೆ ಅದನ್ನು ಬಿಟ್ಟುಬಿಡಿ. ಎರಡು-ಮೂರು ತಿಂಗಳಿಗೊಮ್ಮೆ ತಿಂದರೆ ದೊಡ್ಡ ಸಮಸ್ಯೆಯಾಗದು. ಆದರೆ, ಮಕ್ಕಳು, ವೃದ್ಧರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಚಿಕನ್ ಸ್ಕಿನ್ ಕೊಡುವುದು ಅಷ್ಟೊಂದು ಒಳ್ಳೆಯದಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.