ಟೊಮೆಟೊ ಅನೇಕ ಆರೋಗ್ಯ ಪ್ರಯೋಜನಗಳನ್ನು, ಜೊತೆಗೆ ಅನೇಕ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ, ಟೊಮೆಟೊ ತಿನ್ನೋದ್ರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು ಅನ್ನೋ ಭಯ ಹೆಚ್ಚಿನ ಜನರಲ್ಲಿದೆ. ನಿಜವಾಗಿಯೂ ಟೋಮ್ಯಾಟೋ ತಿನ್ನೋದ್ರಿಂದ ಕಿಡ್ನಿ ಸ್ಟೋನ್ Kidney stone) ಆಗುತ್ತಾ?
211
ಟೊಮೆಟೊ (tomato) ಭಾರತೀಯ ಅಡುಗೆಮನೆಗಳಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತೆ ಟೋಮ್ಯಾಟೋ ಇಲ್ಲದೆ ಅಡುಗೆ ಅಪೂರ್ಣವಾಗಿದೆ. ಟೋಮ್ಯಾಟೋ ಅಡುಗೆಗೆ ರುಚಿ ನೀಡೋದಲ್ಲದೆ, ಬಣ್ಣವನ್ನು ಸಹ ನೀಡುತ್ತೆ. ನಾವೆಲ್ಲಾ ಟೊಮೆಟೊವನ್ನು ತರಕಾರಿಯಾಗಿ ಬಳಸುತ್ತೇವೆ, ಆದ್ರೆ ನಿಜವಾಗಿ ಅದು, ಹಣ್ಣಿನ ಕುಟುಂಬಕ್ಕೆ ಸೇರುತ್ತೆ ಗೊತ್ತ. ಟೊಮೆಟೊ ತಿನ್ನುವುದರಿಂದ ನೀವು ಸಾಕಷ್ಟು ಪ್ರಯೋಜನಗಳನ್ನು ಕೇಳಿರಬಹುದು, ಆದರೆ ಇದರಿಂದ ಎಫೆಕ್ಟ್ ಸಹ ಇದೆ. ಆ ಬಗ್ಗೆ ತಿಳಿಯೋಣ.
311
ಟೊಮೆಟೊದ ಪ್ರಯೋಜನಗಳು ಯಾವುವು? (Benefits of tomato)
ಟೊಮೆಟೊ ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್, ಫೈಬರ್ ಮತ್ತು ಪ್ರೋಟೀನ್ ನಿಂದ ಸಮೃದ್ಧವಾಗಿದೆ. ಈ ಕೆಂಪು ಸಿಟ್ರಿಕ್ ಹಣ್ಣು ಕಣ್ಣಿನ ದೃಷ್ಟಿಗೆ ಪ್ರಯೋಜನಕಾರಿ, ಮಧುಮೇಹದ (Diabetic) ಸಮಸ್ಯೆ ಸಹ ಕಡಿಮೆ ಮಾಡುತ್ತದೆ, ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನ ಇದ್ರೂ, ಯಾವ ರೀತಿ ಅಪಾಯ ಉಂಟಾಗುತ್ತೆ ನೋಡೋಣ.
411
ಟೊಮೆಟೊಗಳ ಬಗ್ಗೆ ಸಾಮಾನ್ಯ ನಂಬಿಕೆಯೆಂದರೆ ಅದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಮೂತ್ರಪಿಂಡದ ಕಲ್ಲುಗಳಲ್ಲಿ ಅನೇಕ ವಿಧಗಳಿವೆ ಮತ್ತು ಅವುಗಳಲ್ಲಿ ಅತ್ಯಂತ ಸಾಮಾನ್ಯವಾದುದು ಕ್ಯಾಲ್ಸಿಯಂ ಕಲ್ಲುಗಳು (calcium stones). ನಮ್ಮ ಕಿಡ್ನಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಆಕ್ಸಲೇಟ್ ಶೇಖರಣೆಯಿಂದಾಗಿ ಈ ಕಲ್ಲುಗಳು ರೂಪುಗೊಳ್ಳುತ್ತವೆ. ಆಕ್ಸಲೇಟ್ ನೈಸರ್ಗಿಕವಾಗಿ ಕಂಡುಬರುವ ವಸ್ತುವಾಗಿದ್ದು, ವಿವಿಧ ತರಕಾರಿಗಳು ಮತ್ತು ಹಣ್ಣುಗಳಲ್ಲಿ ಕಂಡುಬರುತ್ತದೆ.
511
ನಮ್ಮ ಯಕೃತ್ತು ದಿನಕ್ಕೆ ಒಂದು ನಿರ್ದಿಷ್ಟ ಪ್ರಮಾಣದ ಕ್ಯಾಲ್ಸಿಯಂ ಅನ್ನು ಉತ್ಪಾದಿಸುತ್ತದೆ. ನಮ್ಮ ಮೂಳೆಗಳು ಮತ್ತು ಸ್ನಾಯುಗಳು ರಕ್ತದಿಂದ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುತ್ತವೆ, ಆದರೆ ರಕ್ತದಲ್ಲಿ ಈ ಪೋಷಕಾಂಶದ ಪ್ರಮಾಣವು ಹೆಚ್ಚಾದಾಗ, ಅದು ಮೂತ್ರದೊಂದಿಗೆ ವಿಸರ್ಜಿಸಲು ಮೂತ್ರಪಿಂಡಗಳಿಗೆ ಹೋಗುತ್ತದೆ.
611
ಅನೇಕ ಬಾರಿ ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ಕ್ಯಾಲ್ಸಿಯಂ ಅನ್ನು ತೆಗೆದುಹಾಕಲು ಸಾಧ್ಯವಾಗೋದಿಲ್ಲ, ಇದು ಕ್ರಮೇಣ ಸಂಗ್ರಹವಾಗುತ್ತದೆ ಮತ್ತು ಕಲ್ಲುಗಳ ರೂಪವನ್ನು ತೆಗೆದುಕೊಳ್ಳುತ್ತದೆ. ಟೊಮೆಟೊಗಳು (tomato) ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಅನ್ನು ಹೊಂದಿರುವುದರಿಂದ, ಟೊಮೆಟೊಗಳು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು ಎನ್ನಲಾಗುತ್ತದೆ.
711
ಸತ್ಯ ಏನು?
ನೀವು ಆಹಾರದಲ್ಲಿ ಟೊಮೆಟೊವನ್ನು ಸೇರಿಸಲು ಬಯಸಿದರೆ, ಆದರೆ ಅದರಿಂದ ಕಿಡ್ನಿ ಸ್ಟೋನ್ ಆಗುತ್ತೆ ಎಂದು ಹೆದರಿ ಅದನ್ನ ತಿನ್ನದೇ ಇರಬಾರದು. ಟೊಮೆಟೊಗಳು ಆಕ್ಸಲೇಟ್ ಅನ್ನು ಹೊಂದಿರುತ್ತವೆ, ಆದರೆ ಅದರ ಪ್ರಮಾಣವು ತುಂಬಾ ಕಡಿಮೆ ಮತ್ತು ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುವುದಿಲ್ಲ. 100 ಗ್ರಾಂ ಟೊಮೆಟೊದಲ್ಲಿ ಕೇವಲ 5 ಗ್ರಾಂ ಆಕ್ಸಲೇಟ್ ಇರುತ್ತೆ. ಟೊಮೆಟೊ ತುಂಬಾ ಹಾನಿಕಾರಕವಾಗಿದ್ದರೆ, ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಜನರಿಗೆ ಅದನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಲಹೆ ನೀಡಲಾಗುತ್ತಿತ್ತು.
811
ನೀವು ಆರೋಗ್ಯವಾಗಿದ್ದರೆ ಮತ್ತು ಯಾವುದೇ ಮೂತ್ರಪಿಂಡದ ಸಮಸ್ಯೆ (kidney problem) ಹೊಂದಿಲ್ಲದಿದ್ದರೆ, ಟೊಮೆಟೊ ತಿನ್ನಲು ಭಯ ಬೇಡ. ಆದರೆ, ನೀವು ಮೂತ್ರಪಿಂಡ ಸಂಬಂಧಿತ ಸಮಸ್ಯೆ ಹೊಂದಿದ್ರೆ ನೀವು ಆಕ್ಸಲೇಟ್ ಸೇವನೆಯನ್ನು ಮಿತಿಗೊಳಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಪಾಲಕ್, ಬೀನ್ಸ್, ಬೀಟ್ರೂಟ್ ಸಹ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಹೊಂದಿರುತ್ತವೆ. ಆದ್ದರಿಂದ ತಿನ್ನುವ ಮೊದಲು ಈ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ.
911
ಟೊಮೆಟೊದ ಮುಖ್ಯ ಉತ್ಕರ್ಷಣ ನಿರೋಧಕವನ್ನು ಲೈಕೋಪೀನ್ ಎಂದು ಕರೆಯಲಾಗುತ್ತದೆ. ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಇದು ಅವಶ್ಯಕ. ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ, ಮಾಲಿನ್ಯ, ಸೋಂಕುಗಳು ಮತ್ತು ಮೂತ್ರಪಿಂಡಗಳಲ್ಲಿ ಉರಿಯೂತ ಇವೆಲವುಗಳಿಂದ ಆಕ್ಸಿಡೇಟಿವ್ ಒತ್ತಡ ಉಂಟಾಗುತ್ತೆ. ಇವು ಕಿಡ್ನಿ ಮೇಲೆ ಪರಿಣಾಮ ಬೀರುತ್ತೆ.
1011
ತಜ್ಞರ ಪ್ರಕಾರ, ಟೊಮೆಟೊ ಮೂತ್ರಪಿಂಡಗಳಿಗೆ ಹಾನಿಕಾರಕವಲ್ಲ, ಅದರ ಪೌಷ್ಠಿಕಾಂಶದ ಮೌಲ್ಯವು ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆದರೂ, ಟೊಮೆಟೊ ಕೆಲವು ಸಂದರ್ಭಗಳಲ್ಲಿ ಹಾನಿಕಾರಕವಾಗಬಹುದು.
1111
ಟೊಮ್ಯಾಟೊವನ್ನು ಯಾರು ತಿನ್ನಬಾರದು?
ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಜನರು ತಿನ್ನಬಾರದು.
ಕೀಲು ನೋವಿನಿಂದ ಬಳಲುತ್ತಿರುವ ಜನರು ಟೊಮೆಟೊದಿಂದ ದೂರವಿರಬೇಕು.
ಅತಿಸಾರದಲ್ಲಿ ಟೊಮೆಟೊ ತಿನ್ನಬಾರದು.
ಒಬ್ಬ ವ್ಯಕ್ತಿಯು ಅಲರ್ಜಿಯನ್ನು (tomato allergy) ಹೊಂದಿದ್ದರೆ, ಅವನು ಟೊಮೆಟೊಗಳಿಂದ ದೂರವಿರಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.