ಈರುಳ್ಳಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತುಂಬಾ ಇಷ್ಟ ಪಡುವ ಒಂದು ತರಕಾರಿ. ಆದರೆ, ಸಾತ್ವಿಕ ಆಹಾರ ಅನುಸರಿಸುವ ಕೆಲವರು ಮಾತ್ರ ಈರುಳ್ಳಿಯನ್ನು ಸೇವಿಸೋದಿಲ್ಲ. ಆದರೆ ಮಾಂಸಾಹಾರಿ (Non-veg) ಜನರಲ್ಲಿ ಈರುಳ್ಳಿಗೆ ವಿಶೇಷ ಬೇಡಿಕೆಯಿದೆ. ಹೆಚ್ಚಿನ ಹೋಟೆಲ್‌ಗಳಲ್ಲಿ ಈರುಳ್ಳಿಯನ್ನು ಸಲಾಡ್ ಗಳಾಗಿಯೂ ಸಹ ಬಡಿಸಲಾಗುತ್ತೆ, ಆದರೆ ಅದರ ಸ್ಟ್ರಾಂಗ್ ವಾಸನೆಯಿಂದಾಗಿ, ಅನೇಕ ಜನರು ಕಚ್ಚಾ ಈರುಳ್ಳಿಯನ್ನು ತಿನ್ನಲು ಇಷ್ಟಪಡೋದಿಲ್ಲ.
ಈರುಳ್ಳಿಯನ್ನು(Onion) ನಾವು ವಿವಿಧ ರೀತಿಯ ಭಕ್ಷ್ಯ, ವ್ಯಂಜನಗಳಲ್ಲಿ ಬಳಸುತ್ತೇವೆ. ಇದು ಅಡುಗೆಗೆ ವಿಶೇಷ ರುಚಿ ನೀಡುತ್ತೆ, ಅಲ್ಲದೇ ಈರುಳ್ಳಿಯಿಂದ ಮಾಡಿದ ತಿನಿಸುಗಳಂತೂ ತುಂಬಾ ಟೇಸ್ಟಿಯಾಗಿರುತ್ತೆ, ಯುಎಸ್‌ಡಿಎ ಪ್ರಕಾರ, ಕಚ್ಚಾ ಈರುಳ್ಳಿಯಲ್ಲಿ ಫೈಬರ್ (Fibre), ಪ್ರೋಟೀನ್, ಕ್ಯಾಲೋರಿ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಇರುತ್ತೆ. ಇದರೊಂದಿಗೆ, ಕಚ್ಚಾ ಈರುಳ್ಳಿಯಲ್ಲಿ ಅನೇಕ ಔಷಧೀಯ ಗುಣಗಳೂ ಇವೆ. ಇದು ಉತ್ಕರ್ಷಣ ನಿರೋಧಕ, ಅಟ್ಸೆಪ್ಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಮತ್ತು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ.
27
ಈರುಳ್ಳಿ ಮಧುಮೇಹಕ್ಕೆ(diabetes) ಪ್ರಯೋಜನಕಾರಿ
ಎನ್ಸಿಬಿಐನಲ್ಲಿ ಪ್ರಕಟವಾದ ವರದಿ ಪ್ರಕಾರ, ಈರುಳ್ಳಿ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ, ಈರುಳ್ಳಿ ತಿನ್ನುವುದು ದೇಹದಲ್ಲಿ ಹೆಚ್ಚಿದ ಸಕ್ಕರೆಯ ಹೆಚ್ಚುವರಿ ಪ್ರಮಾಣವನ್ನು ನಿಯಂತ್ರಿಸುತ್ತೆ. ನಿಮಗೆ ಶುಗರ್ ಸಮಸ್ಯೆ ಇದ್ದರೆ ನೀವೂ ಸಹ ಈರುಳ್ಳಿಯನ್ನು ಹಸಿಯಾಗಿ ನಿಯಮಿತವಾಗಿ ಸೇವನೆ ಮಾಡೋದು ಉತ್ತಮ.
37
ಈರುಳ್ಳಿ ಕ್ಯಾನ್ಸರ್ ನಿಂದ(Cancer) ರಕ್ಷಿಸುತ್ತೆ
ಒಂದು ರಿಸರ್ಚ್ ಪ್ರಕಾರ, ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಮತ್ತು ಆಂಥೋಸಯಾನಿನ್ ಸಮೃದ್ಧವಾಗಿದೆ, ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತೆ. ಈ ಕಾರಣದಿಂದಾಗಿ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯಲು ಅನುಮತಿಸೋದಿಲ್ಲ. ಈರುಳ್ಳಿಯನ್ನು ತಿನ್ನೋದರಿಂದ ಸ್ತನ ಮತ್ತು ಹೊಟ್ಟೆಯ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತೆ ಎಂದು ತಜ್ಞರು ಹೇಳುತ್ತಾರೆ.
47
ಈರುಳ್ಳಿ ಹೃದಯಕ್ಕೆ(Heart) ಆರೋಗ್ಯಕರ
ಈರುಳ್ಳಿ ತಿನ್ನೋದರಿಂದ ಹೃದಯದ ಆರೋಗ್ಯ ಸುಧಾರಿಸುತ್ತೆ. ಈರುಳ್ಳಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿವೆ, ಇದು ಹೃದಯವನ್ನು ಆರೋಗ್ಯಕರವಾಗಿಡುವ ಕೆಲಸ ಮಾಡುತ್ತೆ. ಇದಲ್ಲದೆ, ಇದು ದೇಹದಲ್ಲಿನ ಬ್ಯಾಡ್ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತೆ, ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತೆ.
ಈರುಳ್ಳಿ ತಿನ್ನೋದರಿಂದ ಮೂಳೆಗಳು ಬಲವಾಗಿರುತ್ತವೆ ಎಂದು ತಜ್ಞರು ಹೇಳುತ್ತಾರೆ. ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಉಂಟಾಗುವ ಆಸ್ಟಿಯೊಪೊರೋಸಿಸ್ ರೋಗದ ಸಾಧ್ಯತೆ ಕಡಿಮೆ ಮಾಡಲು ಕಚ್ಚಾ ಈರುಳ್ಳಿಯನ್ನು ಹೆಚ್ಚು ಸೇವಿಸಿ. ಇದರೊಂದಿಗೆ ದೇಹದ ಎಲುಬುಗಳು ಸ್ಟ್ರಾಂಗ್ ಆಗುತ್ತವೆ.
ಆಗಾಗ್ಗೆ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೊಂದುತ್ತಿದ್ದರೆ, ಈರುಳ್ಳಿ ಅದನ್ನು ತಡೆಯಲು ನಿಮಗೆ ಸಹಾಯ ಮಾಡುತ್ತೆ. ಈರುಳ್ಳಿ ಮೂತ್ರಪಿಂಡಗಳಿಂದ ಕಲ್ಲುಗಳನ್ನು ತೆಗೆದುಹಾಕೋದು ಮಾತ್ರವಲ್ಲದೆ ಇಡೀ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತೆ. ಹಾಗಾಗಿ ಆಹಾರದಲ್ಲಿ ಕಚ್ಚಾ ಈರುಳ್ಳಿ ಸಲಾಡ್ ಅಥವಾ ಬೇರೆ ಯಾವುದಾದ್ರೂ ರೂಪದಲ್ಲಿ ಸೇವಿಸಿ ಇದರ ಪ್ರಯೋಜನ ಪಡಿಯಿರಿ.
77
ಈರುಳ್ಳಿ ಲೈಂಗಿಕ ಸಾಮರ್ಥ್ಯವನ್ನು(Sex) ಸಹ ಸುಧಾರಿಸುತ್ತೆ
ಈರುಳ್ಳಿಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ, ಅವುಗಳಲ್ಲಿ ಒಂದು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ಗುಣ ಸಹ ಇದೆ. ಈರುಳ್ಳಿಯ ಸೇವನೆಯು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತೆ, ಆದ್ದರಿಂದ ಫರ್ಟಿಲಿಟಿ ರೇಟ್ ಸುಧಾರಿಸುತ್ತೆ. ಹಾಗಾಗಿ ಕಚ್ಚಾ ಈರುಳ್ಳಿ ಸೇವಿಸಿ, ಹ್ಯಾಪಿ ಸೆಕ್ಸ್ ಲೈಫ್ ನಿಮ್ಮದಾಗಿಸಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.