ಫಟಾಫಟ್ ತೂಕ ಇಳಿಸಲು ಔಷಧಿ ಸೇವಿಸೋರಿಗೆ ಎಚ್ಚರಿಕೆ ನೀಡಿದ ICMR

Published : May 19, 2024, 05:15 PM IST

ತೂಕ ಇಳಿಸಲು ಜನರು ಏನೇನೋ ಮಾಡ್ತಾರೆ. ನೀವು ಕೂಡ ವೇಗವಾಗಿ ತೂಕ ಇಳಿಸೋದಕ್ಕೆ  ಔಷಧಿಗಳನ್ನು ಸೇವಿಸುತ್ತಿದ್ದರೆ, ಅಂತದ್ದನ್ನು ಮಾಡಲೇಬೇಡಿ ಎಂದು ಐಸಿಎಂಆರ್ ಸೂಚಿಸಿದೆ. 

PREV
110
ಫಟಾಫಟ್ ತೂಕ ಇಳಿಸಲು ಔಷಧಿ ಸೇವಿಸೋರಿಗೆ ಎಚ್ಚರಿಕೆ ನೀಡಿದ ICMR

ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯೇ (lifestyle) ಸರಿಯಾಗಿಲ್ಲ. ಇದೇ ಕಾರಣದಿಂದಾಗಿ ಜನರಲ್ಲಿ ಬೊಜ್ಜು ಕೂಡ ಹೆಚ್ಚುತ್ತಲೇ ಇದೆ. ಈ ಬೊಜ್ಜು ಇಳಿಸೋಕೆ ಏನೇನೋ ಡಯಟ್ ಗಳನ್ನು ಮಾಡೋದು, ಔಷದಿಗಳನ್ನು ಸೇವಿಸೋದು ಸಾಮಾನ್ಯವಾಗಿದೆ. ಆದರೆ ಶೀಘ್ರವಾಗಿ ತೂಕ ಇಳಿಸೋಕೆ ಏನೇನೋ ಔಷಧಿ ಸೇವಿಸೋದು ಸರೀನಾ? ಖಂಡಿತಾ ಅಲ್ಲ. 

210

ಐಸಿಎಂಆರ್ (ICMR) ಇತ್ತೀಚೆಗೆ ತೂಕ ಇಳಿಕೆ ಮಾಡುವ ವಿಧಾನಗಳ ಬಗ್ಗೆ ಮಾರ್ಗಸೂಚಿ (Guidlines) ಬಿಡುಗಡೆ ಮಾಡಿದೆ.  ಈ ಮಾರ್ಗಸೂಚಿಗಳಲ್ಲಿ ತೂಕ ಇಳಿಸುವ ಆಕಾಂಕ್ಷಿಗಳಿಗೆ ಸಮತೋಲಿತ ಆಹಾರವನ್ನು ಶಿಫಾರಸು ಮಾಡಿದೆ ಮತ್ತು ವೇಗವಾಗಿ ತೂಕ ಕಳೆದುಕೊಳ್ಳಬೇಡಿ ಅಥವಾ ಬೊಜ್ಜು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳಬೇಡಿ ಎಂದು ಖಡಕ್ ಆಗಿ ಸೂಚಿಸಿದೆ.

310

ಆರೋಗ್ಯಕರ ತೂಕ (healthy weight) ಮತ್ತು ಸೊಂಟದ ಸುತ್ತಳತೆಯನ್ನು ಕಾಪಾಡಿಕೊಳ್ಳಲು ತಾಜಾ ತರಕಾರಿಗಳು, ಧಾನ್ಯಗಳು, ಬೇಳೆಕಾಳುಗಳು ಮತ್ತು ಬೀನ್ಸ್ ಸೇರಿಸಲು ಐಸಿಎಂಆರ್ ಸೂಚಿಸುತ್ತದೆ. ಇವುಗಳನ್ನು ಸೇವಿಸೋದರಿಂದ ನಿಧಾನವಾಗಿ ತೂಕ ಇಳಿಕೆ ಮಾಡಬಹುದು. 

410

ಕಿಬ್ಬೊಟ್ಟೆಯ ಬೊಜ್ಜು, ಅಧಿಕ ತೂಕ ಮತ್ತು ಒಟ್ಟಾರೆ ಸ್ಥೂಲಕಾಯತೆಯನ್ನು (obesity) ತಡೆಗಟ್ಟಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಎಂದು ಸಹ ಐಸಿಎಂಆರ್ ತಿಳಿಸಿದೆ. ಇನ್ನು ಲೈಫ್ ಸ್ಟೈಲ್ ಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟಲು ಒಟ್ಟಾರೆ ಬೊಜ್ಜು ಮತ್ತು ಕಿಬ್ಬೊಟ್ಟೆಯ ಬೊಜ್ಜನ್ನು ಕಡಿಮೆ ಮಾಡುವಾ ವಿಧಾನಗಳ ಬಗ್ಗೆ ಸಹ ತಿಳಿಸಿದೆ. 
 

510

ಏಷ್ಯನ್ ಕಟ್-ಆಫ್ ಪ್ರಕಾರ 23 ರಿಂದ 27.5 ಕೆಜಿವರೆಗಿನ ಬಿಎಂಐ ಅನ್ನು ಅಧಿಕ ತೂಕ ಎಂದು ಪರಿಗಣಿಸಲಾಗುವುದು. ನಗರ ಪ್ರದೇಶದ ಶೇ.30ರಷ್ಟು ಹಾಗೂ ಗ್ರಾಮೀಣ ಪ್ರದೇಶದ ಶೇ.16ರಷ್ಟು ವಯಸ್ಕರು ಅಧಿಕ ತೂಕ ಹೊಂದಿದ್ದಾರೆ. ಅಧಿಕ ತೂಕ ಸಮಸ್ಯೆ ಕಡಿಮೆ ಮಾಡಲು ನೀವು ಸ್ಟೆಪ್ ಬೈ ಸ್ಟೆಪ್ ತೂಕ ಇಳಿಸುವ ವಿಧಾನ ಟ್ರೈ ಮಾಡಬೇಕು.
 

610

ತೂಕ ಇಳಿಕೆ ಕ್ರಮೇಣವಾಗಿ ಆಗಬೇಕು. ತೂಕ ಇಳಿಸುವ ಆಹಾರವು ದಿನಕ್ಕೆ 1000 ಕಿಲೋ ಕ್ಯಾಲೊರಿಗಳಿಗಿಂತ ಕಡಿಮೆ ಇರಬಾರದು ಮತ್ತು ಆ ಆಹಾರವು ಎಲ್ಲಾ ಪೋಷಕಾಂಶಗಳನ್ನು ಒದಗಿಸಬೇಕು. ವಾರಕ್ಕೆ ಅರ್ಧ ಕಿಲೋಗ್ರಾಂ ದೇಹದ ತೂಕವನ್ನು ಕಡಿಮೆ ಮಾಡುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. ತ್ವರಿತ ತೂಕ ನಷ್ಟ ಮತ್ತು ಆಂಟಿ ಒಬೆಸಿಟಿ ಔಷಧಿಗಳ ಬಳಕೆಯನ್ನು ತಪ್ಪಿಸಬೇಕು" ಎಂದು ಐಸಿಎಂಆರ್ ಮಾರ್ಗಸೂಚಿಗಳು ತಿಳಿಸಿವೆ.

710

ಆರೋಗ್ಯಕರ ತೂಕ ಮತ್ತು ಸೊಂಟದ ಸುತ್ತಳತೆಯನ್ನು ಕಾಪಾಡಿಕೊಳ್ಳಲು ತಾಜಾ ತರಕಾರಿಗಳು (fresh vegetables), ಧಾನ್ಯಗಳು, ಬೇಳೆಕಾಳುಗಳು ಮತ್ತು ಬೀನ್ಸ್ ಅನ್ನು ಸೇರಿಸಲು ಐಸಿಎಂಆರ್ ಸೂಚಿಸಿದೆ. ಸಕ್ಕರೆ, ಸಂಸ್ಕರಿಸಿದ ಉತ್ಪನ್ನಗಳು ಮತ್ತು ಫ್ರುಟ್ ಜ್ಯೂಸ್ ಕೂಡ ಇದರಲ್ಲಿ ಸೇರಿವೆ. ನಿಯಮಿತ ದೈಹಿಕ ಚಟುವಟಿಕೆ ಮತ್ತು ಯೋಗವು ತೂಕ ಇಳಿಸಿಕೊಳ್ಳಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ.

810

ತೂಕ ಇಳಿಸೋದಕ್ಕೆ ಆರೋಗ್ಯಕರ ಸಲಹೆಗಳು ಇಲ್ಲಿವೆ 
ಸಾಕಷ್ಟು ತರಕಾರಿಗಳೊಂದಿಗೆ ಸಮತೋಲಿತ ಆಹಾರ ಸೇವಿಸಿ: ಹೆಚ್ಚಿನ ಫೈಬರ್ ಮತ್ತು ಪೋಷಕಾಂಶಗಳನ್ನು ಹೊಂದಿರುವ ಊಟವು ಹೆಚ್ಚು ಆಹಾರ ಸೇವಿಸುವ ಬಯಕೆಯನ್ನು ನಿಗ್ರಹಿಸುತ್ತದೆ ಮತ್ತು ಹೆಚ್ಚುವರಿ ಕ್ಯಾಲೊರಿಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ.

ತರಕಾರಿಗಳನ್ನು ಸೇವಿಸಿ: ಕಡಿಮೆ ಕ್ಯಾಲೊರಿಗಳು ಮತ್ತು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅಧಿಕವಾಗಿರುವುದರಿಂದ, ಅವು ತೂಕವನ್ನು ಪರಿಣಾಮಕಾರಿಯಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಎಷ್ಟು ತಿನ್ನುತ್ತೀರಿ ಎನ್ನುವುದರ ಬಗ್ಗೆ ಇರಲಿ ಗಮನ. ಹೆಚ್ಚು ತಿನ್ನಬೇಡಿ. 

910

ನಿಮ್ಮ ಸ್ನಾಕ್ಸ್ ಹೀಗಿರಲಿ : ಬೆರಳೆಣಿಕೆಯಷ್ಟು ಬೀಜಗಳು, ಸಾದಾ ಮೊಸರು, ಮಸಾಲೆಯೊಂದಿಗೆ ಕತ್ತರಿಸಿದ ತರಕಾರಿಗಳಂತಹ ಪೋಷಕಾಂಶ-ದಟ್ಟವಾದ ಆಹಾರಗಳನ್ನು ಆರಿಸಿ.

ತೆಳು ಮಾಂಸ (thin meat) ಸೇವಿಸಿ: ಮಾಂಸದ ಕೊಬ್ಬಿನ ಕಡಿತಕ್ಕೆ ಹೋಲಿಸಿದರೆ ಚರ್ಮವಿಲ್ಲದ ಕೋಳಿ, ಮಾಂಸ ಮತ್ತು ಮೀನಿನ ತೆಳ್ಳಗಿನ ಕಡಿತಗಳು ಕ್ಯಾಲೊರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಕಡಿಮೆ ಇರುವುದು ಆರೋಗ್ಯಕರವಾಗಿದೆ.

ಆರೋಗ್ಯಕರ ಅಡುಗೆ ಮಾಡಿ ಸೇವಿಸಿ: ಫ್ರೈ ಮಾಡೋದಕ್ಕೆ ಹೋಲಿಸಿದರೆ ಗ್ರಿಲಿಂಗ್, ಬೇಕಿಂಗ್, ಸ್ಟೀಮಿಂಗ್ ಅಥವಾ ಶಾಲೋ ಫ್ರೈ ಮಾಡಲು ಕಡಿಮೆ ಎಣ್ಣೆ ಬೇಕಾಗುತ್ತದೆ. ಇದು ನಿಮ್ಮ ಊಟದ ಶಕ್ತಿ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.

1010

ಸಕ್ಕರೆಯುಕ್ತ ಡ್ರಿಂಕ್ಸ್ ಕಡಿಮೆ ಸೇವಿಸಿ : ಸೋಡಾ ಮತ್ತು ಹಣ್ಣಿನ ಜ್ಯೂಸ್ ನಂತಹ ಸಕ್ಕರೆ ಪಾನೀಯಗಳನ್ನು ಕಡಿಮೆ ಸೇವಿಸಿ. ಇದರ ಬದಲಾಗಿ ನೀರು, ಗಿಡಮೂಲಿಕೆ ಚಹಾ ಅಥವಾ ಶುಗರ್ ಲೆಸ್ ಡ್ರಿಂಕ್ಸ್ ಸೇವಿಸೋದು ಉತ್ತಮ.

ಆಹಾರ ಲೇಬಲ್ ಗಳನ್ನು (Food lable) ಓದಿ: ಕ್ಯಾಲೊರಿಗಳು, ಸ್ಯಾಚುರೇಟೆಡ್ ಕೊಬ್ಬುಗಳು, ಹೆಚ್ಚುವರಿ ಸಕ್ಕರೆ ಮತ್ತು ಸೋಡಿಯಂ ಬಗ್ಗೆ ಮಾಹಿತಿಗಾಗಿ ಆಹಾರ ಲೇಬಲ್ ಗಳನ್ನು ಪರಿಶೀಲಿಸಿ. ಆರೋಗ್ಯಕರ ಪದಾರ್ಥಗಳನ್ನು ಹೊಂದಿರುವ ಆಹಾರವನ್ನು ಮಾತ್ರ ಆರಿಸಿ.

Read more Photos on
click me!

Recommended Stories