ಕೋವಿಶೀಲ್ಡ್ ಲಸಿಕೆ ದೂಷಿಸಬೇಡಿ, ಕಂಡುಹಿಡಿದವರಿಗೊಂದು ಥ್ಯಾಂಕ್ಸ್ ಹೇಳಿ: ಡಾ. ಸಿ ಎನ್ ಮಂಜುನಾಥ್

First Published | May 16, 2024, 11:44 AM IST

ಕೋವಿಶೀಲ್ಡ್‌ನಿಂದ ಹೃದಯಾಘಾತ ಆಗುತ್ತಾ?
ಹೃದಯಾಘಾತ ಪ್ರಕರಣಗಳು ಹೆಚ್ಚಿರೋದೇಕೆ?
ಹೃದಯ ಸಮಸ್ಯೆಗಳಿಂದ ದೂರವಿರಲು ಮಾಡಬೇಕಾದ್ದೇನು?

ಆಸ್ಟ್ರಾಜೆನೆಕಾ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಸಾಧ್ಯತೆ ಕುರಿತು ಅದರ ಉತ್ಪಾದಕ ಕಂಪನಿಯಾದ ಆಸ್ಟ್ರಾಜೆನೆಕಾ ಹೇಳಿಕೆ ನೀಡಿ ಉತ್ಪಾದನೆ ಹಾಗೂ ಮಾರಾಟ ಸ್ಥಗಿತ ಮಾಡಿದೆ. ಇದರ ಬಳಿಕ ಭಾರತದ ಪಾಲುದಾರ ಕಂಪನಿಯಾದ ‘ಕೋವಿಶೀಲ್ಡ್’ ಲಸಿಕೆ ಪಡೆದವರು ಭಯಭೀತರಾಗಿದ್ದರು.

 ಇದರಿಂದಲೇ ಯುವ ಸಮುದಾಯದಲ್ಲಿ ಹೃದಯ ಸಮಸ್ಯೆಗಳು ಹೆಚ್ಚಿವೆ, ಸಡನ್ ಆಗಿ ಕುಸಿದು ಬೀಳುವ ಪ್ರಕರಣ ಹೆಚ್ಚಿವೆ ಎಂದು ಜನರು ಅನುಮಾನ ಪಡಲಾರಂಭಿಸಿದರು. 

Latest Videos


ಆದರೆ, ಕೋವಿಶೀಲ್ಡ್ ಲಸಿಕೆ ಕಂಡುಹಿಡಿದವರಿಗೆ, ತಯಾರಿಸಿದವರಿಗೆ, ಕೊಡಲು ನಿರ್ಧರಿಸಿದವರಿಗೆ ನೀವು ನಿಜವಾಗಿ ಥ್ಯಾಂಕ್ಸ್ ಹೇಳಬೇಕು ಎಂದು ಅಚ್ಚರಿ ಮೂಡಿಸಿದ್ದಾರೆ ಖ್ಯಾತ ಹೃದಯ ತಜ್ಞ ಡಾ. ಸಿಎನ್ ಮಂಜುನಾಥ್. 

ಹೌದು, ವೈದ್ಯರು ಹೀಗೇಕೆ ಹೇಳಿದರು ಎಂದು ಅಚ್ಚರಿಯಾಯೇತೇ? ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವೈದ್ಯರು ಈ ಮಾತನ್ನು ಹೇಳಿದ್ದಾರೆ. ಹಾಗಿದ್ದರೆ ಅವರೇನಂದರು ನೋಡೋಣ ಬನ್ನಿ..

ಕೋವಿಶೀಲ್ಡ್ ಲಸಿಕೆ ಭಾರತದಲ್ಲಿ 80 ಕೋಟಿ ಜನರು 3 ಡೋಸ್ ತೆಗೆದುಕೊಂಡಿದ್ದಾರೆ. ಇದರಿಂದ ಲಕ್ಷಾಂತರ ಜನರ ಜೀವ ಉಳಿದಿದೆ. ಲಕ್ಷಾಂತರ ರೋಗಿಗಳು ಐಸಿಯುಗೆ ಹೋಗುವುದು ತಪ್ಪಿದೆ. ಆದ್ದರಿಂದ ಈ ಲಸಿಕೆ ತಯಾರಿಸಿದವರು, ಕಂಡು ಹಿಡಿದವರು, ಇದನ್ನು ಕೊಡಲು ನಿರ್ಧರಿಸಿದವರನ್ನು ಅಭಿನಂದಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

ಅದೊಂದು ಉತ್ತಮ ಲಸಿಕೆ
ಲಸಿಕೆ ತೆಗೆದುಕೊಂಡ ಪ್ರತಿ 10 ಲಕ್ಷ ಜನರಲ್ಲಿ 6-7 ಜನರಿಗೆ ರಕ್ತ ಹೆಪ್ಪುಗಟ್ಟವಂಥ ಸಮಸ್ಯೆ ಆಗಬಹುದು. ಅಕಸ್ಮಾತ್ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ರೆ ಹೃದಯ, ಮೆದುಳು ಸಮಸ್ಯೆ ಆಗಬಹುದು. ಆದರೆ, ಇವೆಲ್ಲವೂ ಆಗುವುದೇ ಹೌದಾದರೆ ಲಸಿಕೆ ತೆಗೆದುಕೊಂಡ 3 ತಿಂಗಳೊಳಗೆ ಆಗಬೇಕು. 

ಈಗ 3-4 ವರ್ಷ ವಾಗಿದೆ. ಯಾವಾಗ ರಿಸ್ಕ್‌ಗಿಂತ ಹೆಚ್ಚು ಲಾಭ ಇರುತ್ತೋ ಅದನ್ನು ಉತ್ತಮ ವ್ಯಾಕ್ಸಿನೇಶನ್ ಎನ್ನುತ್ತೇವೆ ಎಂದು ಮಂಜುನಾಥ್ ಹೇಳಿದ್ದಾರೆ.

ಅಮೆರಿಕದಲ್ಲಾಯಿತು ಅಧ್ವಾನ
ಅಮೆರಿಕದಲ್ಲಿ ಕೇವಲ ಶೇ.45ರಷ್ಟು ಜನ ಲಸಿಕೆ ತೆಗೆದುಕೊಂಡ್ರು. ಹೀಗಾಗಿ ಅಲ್ಲಿ ಕೋವಿಡ್‌ನ 6, 7ನೇ ಅಲೆಗಳು ಕೂಡಾ ಬಂದವು, ಸಾಕಷ್ಟು ಸಾವಾಯಿತು. ಆದರೆ ಭಾರತದಲ್ಲಿ 3ನೇ ಅಲೆಗೇ ನಿಂತಿತು. ಇದಕ್ಕೆ ಲಸಿಕೆಯೇ ಕಾರಣ. ಕೋವಿಶೀಲ್ಡ್ ನಿಂದ ಸಮಸ್ಯೆಯಾದ್ರೆ 0.002 ಶೇ.ದಷ್ಟು ಜನರಿಗೆ ಮಾತ್ರ ಎಂದು ವೈದ್ಯರು ತಿಳಿಸಿಕೊಟ್ಟಿದ್ದಾರೆ.

ಮುಂಚೆಯೂ ಇತ್ತು ಯುವಸಮುದಾಯದಲ್ಲಿ ಹೃದಯಾಘಾತ
2014- 2019 ನಡುವೆ ಜಯದೇವ ಆಸ್ಪತ್ರೆ ನಡೆಸಿದ ಅಧ್ಯಯನದಲ್ಲಿ, ಕೋವಿಡ್‌ಗೂ ಮುನ್ನದ ಈ ಸಮಯದಲ್ಲಿ 5500 ಯುವ(18-45 ವರ್ಷ) ಹೃದಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಕೋವಿಡ್ ಬಳಿಕ ಇದು ಜಾಸ್ತಿ ಆಗಿದೆ ಅನ್ನೋದು ಸರಿಯಲ್ಲ. ಜಾಸ್ತಿ ಆಗ್ತಿರೋದಕ್ಕೆ ಜೀವನಶೈಲಿ ಕಾರಣ ಎಂದಿದ್ದಾರೆ ಮಂಜುನಾಥ್. 

ಹೃದಯಾಘಾತ ಹೆಚ್ಚಿದ್ದರೆ ಅದಕ್ಕೆ ಕಾರಣ ಇವು..
ಭಾರತದಲ್ಲಿ ಶೇ.30 ಹೃದಯಾಘಾತದಿಂದ ಸಾವು ಸಂಭವಿಸುತ್ತವೆ. ಈಗ ಮಾಧ್ಯಮಗಳು ಹೃದಯಾಘಾತದ ಬಗ್ಗೆ ಹೇಳುತ್ತಿರುವುದರಿಂದ ಜನರಿಗೆ ಜಾಸ್ತಿ ಆಗಿದೆ ಅನ್ನೋ ಇಂಪ್ರೆಶನ್ ಇದೆ. ಹೃದಯಾಘಾತಕ್ಕೆ ಇಂದಿನ ಯುವಕರ ಕೆಟ್ಟ ಆಹಾರ ಅಭ್ಯಾಸಗಳು, ಡಯಾಬಿಟೀಸ್, ಡ್ರಗ್ಸ್, ಮದ್ಯ, ಸಿಗರೇಟ್ ಇತ್ಯಾದಿ ಕಾರಣ- ಇಂದಿನ ತಲೆಮಾರಿನಲ್ಲಿ ಈ ಅಭ್ಯಾಸಗಳು ಸರಿಯಿಲ್ಲ. ಒತ್ತಡ ಜಾಸ್ತಿ. ಈಗ ಸಣ್ಣ ಸಮಯದಲ್ಲಿ ಜಾಸ್ತಿ ಸಾಧನೆ ಮಾಡಲು ಬಯಸುತ್ತಾರೆ. ಕನಸು, ಗುರಿ ಹೆಚ್ಚು. ಹಾಗಾಗಿ, ಹೃದಯಾಘಾತ ಹೆಚ್ಚಾಗಿದೆ ಎನ್ನುತ್ತಾರೆ ಡಾಕ್ಟರ್. 

exercise

ಔಷಧ ಅಲ್ಲದ ಔಷಧಿ ಬಳಸಿ
ಜನರು ತಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗಿನ ಔಷಧ ಅಲ್ಲದ ಔಷಧಿಗಳನ್ನು ಬಳಸಬೇಕು. ಇವು ಸಂಪೂರ್ಣ ಫ್ರೀಯಾಗಿದ್ದು, ಅಡ್ಡ ಪರಿಣಾಮವನ್ನೂ ಹೊಂದಿರೋಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವೇನೆಂದು ನೋಡೋಣ. 
 

ಸೂರ್ಯನ ಬೆಳಕಲ್ಲಿ ವಾಕಿಂಗ್
ಉತ್ತಮ ಡಯಟ್
ವಿಶ್ರಾಂತಿ
ಅಪರೂಪಕ್ಕೆ ಉಪವಾಸ
ನಗುವುದು
ಗೆಳೆತನ
ಕುಟುಂಬದೊಡನೆ ಊಟ
ಇನ್ನೊಬ್ಬರ ಬಗ್ಗೆ ಒಳ್ಳೆ ಮಾತಾಡುವುದು
ಕೃತಜ್ಞತೆ
ಯೋಗ
ಧ್ಯಾನ
ಉತ್ತಮ ಹಣ್ಣು ತರಕಾರಿಗಳ ಸೇವನೆ

click me!