ಹೃದಯ ಗಟ್ಟಿ ಇರ್ಬೇಕು ಅಂದ್ರೆ ಇಂಥ ಆಹಾರ ತಪ್ಪದೇ ಅವೈಡ್ ಮಾಡಿ, ಏನು ತಿನ್ನಬಾರದು?

Published : May 17, 2024, 01:24 PM IST

ನಾವು ತಿನ್ನೋ ಆಹಾರ ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ತುಂಬಾ ಹೆಚ್ಚಿದೆ. ಹಾಗಾಗಿ ನಾವು ಏನೇ ತಿಂದರೂ ಅದು ಹೃದಯಕ್ಕೆ ಉತ್ತಮವೇ? ಇಲ್ಲವೇ? ಎನ್ನುವ ಬಗ್ಗೆ ತಿಳಿದಿರೋದು ಮುಖ್ಯ.   

PREV
18
ಹೃದಯ ಗಟ್ಟಿ ಇರ್ಬೇಕು ಅಂದ್ರೆ ಇಂಥ ಆಹಾರ ತಪ್ಪದೇ ಅವೈಡ್ ಮಾಡಿ, ಏನು ತಿನ್ನಬಾರದು?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದ (heart related problem) ಬಳಲುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನಮ್ಮ ಜೀವನ ಶೈಲಿಯೇ ಇರಬಹುದು. ಅದಕ್ಕೂ ಮುಖ್ಯ ನಾವು ತಿನ್ನುವ ಆಹಾರದಿಂದಾಗಿ ಹೃದಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗಿದ್ರೆ ನಾವು ಯಾವ ಆಹಾರ ಅವಾಯ್ಡ್ ಮಾಡಬಹುದು ನೋಡೋಣ. 

28

ಪ್ರತಿನಿತ್ಯ ಆಹಾರ, ಅಡುಗೆಗೆ ಉಪ್ಪು, ಸಕ್ಕರೆ (sugar) ಬೇಕೇ ಬೇಕು, ಆದರೆ ಯಾವುದು ಅತಿಯಾಗಬಾರದು. ಅತಿಯಾಗಿ ಸಕ್ಕರೆ ಅಥವಾ ಉಪ್ಪು ಸೇವಿಸೋದರಿಂದ ಹೃದಯ ಸಮಸ್ಯೆ ಬರುವ ಸಾಧ್ಯತೆ ಇದೆ. 

38

ನೀವು ಮಾಂಸಾಹಾರ ಪ್ರಿಯರಾಗಿದ್ರೆ, ದಯವಿಟ್ಟು ಕಡಿಮೆ ಮಾಂಸಾಹಾರ (meat ) ಸೇವಿಸಿ. ಹೆಚ್ಚು ಮಾಂಸಾಹಾರ ಸೇವನೆಯಿಂದ ಫ್ಯಾಟ್, ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಇದೆ. 

48

ಸೋಡದಂತಹ ಪಾನೀಯ ಸೇವನೆ ಮಾಡೋದನ್ನು ಅವಾಯ್ಡ್ ಮಾಡಿ, ಇದನ್ನು ಸೇವಿಸೋದರಿಂದ ಹೃದಯ ಸಮಸ್ಯೆ, ಬೊಜ್ಜು, ಡಯಾಬಿಟೀಸ್ (Diabetes) ನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. 

58

ನೀವು ಚಿಕನ್ (chicken) ಪ್ರಿಯರಾಗಿದ್ರೆ, ಚಿಕನ್ ಡೀಪ್ ಫ್ರೈ (Chiken Deep Fry) ಮಾಡಿ ಸೇವಿಸೋದಕ್ಕಿಂತ ಅದನ್ನು ರೋಸ್ಟ್ ಮಾಡಿ ಸೇವಿಸೋದು ಉತ್ತಮ. ಯಾಕಂದ್ರೆ ಡೀಪ್ ಫ್ರೈ ಮಾಡೊದರಿಂದ ಹೆಚ್ಚಿನ ಹೃದಯ ಸಮಸ್ಯೆ ಕಾಡುತ್ತೆ. 

68

ದೇಹದಲ್ಲಿ ಹೆಚ್ಚಿನ ಪ್ರಮಾಣದ ಕೆಟ್ಟ ಕೊಲೆಸ್ಟ್ರಾಲ್ ಸೇರಿಕೊಳ್ಳದಂತೆ ತಡೆಯಲು ನೀವು ಬೆಣ್ಣೆಯನ್ನು (butter) ಅತಿಯಾಗಿ ಸೇವಿಸೋದನ್ನು ಅವಾಯ್ಡ್ ಮಾಡಿ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದಲ್ಲ. 

78

ಇನ್ನು ಫ್ರೆಂಚ್ ಫ್ರೈಗಳಲ್ಲಿ (French Fry) ಹೆಚ್ಚಿನ ಮಟ್ಟದ ಕೊಬ್ಬು ಇರುತ್ತದೆ, ಜೊತೆಗೆ ಇದರಲ್ಲಿ ಉಪ್ಪಿನ ಅಂಶವು ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ ಇದನ್ನು ಸೇವಿಸೋದರಿಂದ ಬೊಜ್ಜು ಹೆಚ್ಚುವ ಸಾಧ್ಯತೆ ಇದೆ. 

88

ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಹೆಚ್ಚಿನ ಕೊಬ್ಬು ಇರುವಂತಹ ಫ್ಲೇವರ್ಡ್ ಯೋಗರ್ಟ್ ತಿನ್ನೋದನ್ನು ಬಿಡಿ, ಬದಲಾಗಿ ಪ್ಲೈನ್ ಆಗಿರುವ ಮೊಸರು ಅಥವಾ ಯೋಗರ್ಟ್ ಸೇವಿಸಿ. 
 

Read more Photos on
click me!

Recommended Stories