ಗುಂಡು ಗುಂಡಾಗಿರೋ ಮಕ್ಕಳನ್ನು ಎಲ್ಲರೂ ಇಷ್ಟಪಡುತ್ತಾರೆ ಮತ್ತು ಅವರನ್ನು ನೋಡುವವರು ಅವರ ಕೆನ್ನೆಗಳನ್ನು ಹಿಡಿಯಲು ಪ್ರಾರಂಭಿಸುತ್ತಾರೆ ಅಥವಾ ತುಂಬಾನೆ ಮುದ್ದು ಮಾಡುತ್ತಾರೆ. ಗುಂಡು ಗುಂಡಾಗಿರೋ ಮಕ್ಕಳು (chubby babies) ತುಂಬಾ ಮುದ್ದಾಗಿ ಕಾಣುತ್ತಾರೆ, ಆದರೆ ಈ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತೆ.
ಮಕ್ಕಳ ತಜ್ಞರು ಹೇಳುವಂತೆ ದೇಹದ ಕೆಲವು ಭಾಗಗಳಾದ ತೊಡೆಗಳು ಇತ್ಯಾದಿಗಳಲ್ಲಿ ಕೊಬ್ಬನ್ನು ಹೊಂದಿರುವ ಮಕ್ಕಳನ್ನು ಅನಾರೋಗ್ಯಕರ ಎಂದು ಕರೆಯಲಾಗುತ್ತದೆ ಮತ್ತು ಅದು ಮಕ್ಕಳ ಕೊಬ್ಬಾಗಿ (fat in baby) ಬದಲಾಗಬಹುದು ಎನ್ನುತ್ತಾರೆ. ಹಾಗಿದ್ರೆ ಮಕ್ಕಳು ಹೆಚ್ಚು ದಪ್ಪವಾಗದಂತೆ ತಡೆಯೋದು ಹೇಗೆ?
ಸ್ತನ್ಯಪಾನ ಮಾಡಿ (Breast Feeding): ಮಗುವಿಗೆ ಸಾಧ್ಯವಾದಷ್ಟು ಹಾಲುಣಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಇದರೊಂದಿಗೆ, ಮಗುವಿಗೆ ಅಗತ್ಯವಿರುವ ಎಲ್ಲಾ ಪೌಷ್ಠಿಕಾಂಶವನ್ನು ಪಡೆಯುತ್ತದೆ. ಸ್ತನ್ಯಪಾನವು ತಾಯಿ ಮತ್ತು ಮಗು ಇಬ್ಬರಿಗೂ ಬಹಳ ಮುಖ್ಯ. ಎದೆಹಾಲು ಪಡೆಯುವ ಮಕ್ಕಳ ರೋಗನಿರೋಧಕ ಶಕ್ತಿಯು (immunity power) ಉಳಿದ ಮಕ್ಕಳಿಗಿಂತ ಬಲವಾಗಿರುತ್ತದೆ. ಇದು ಮಗುವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.
ಮತ್ತೆ ಮತ್ತೆ ಆಹಾರ ನೀಡಬೇಡಿ: ಮಗು ಅಳುತ್ತಿರುವಾಗ ಅಥವಾ ಕಿರಿಕಿರಿಗೊಂಡಾಗಲೆಲ್ಲಾ, ಅವರಿಗೆ ಆಹಾರ ನೀಡಬೇಡಿ. ಮಗುವಿನ ಅಳುವಿಕೆಗೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಿ. ಬಹುಶಃ ನಿಮ್ಮ ಮಗುವಿನ ಡೈಪರ್ ಒದ್ದೆಯಾಗುತ್ತಿರುವುದರಿಂದ (wet diaper) ಅದು ಅಳುತ್ತಿರಬಹುದು. ಹಾಗಾಗಿ ಕಾರಣ ತಿಳಿದು ಅದನ್ನು ಪರಿಹರಿಸಿ. ಇದೆಲ್ಲದರ ನಂತರ ಮಗುವಿಗೆ ಹಸಿವಾಗಿದೆ ಎಂದು ನಿಮಗೆ ಅನಿಸಿದರೆ, ಆಹಾರ ನೀಡಬಹುದು.
ಅತಿಯಾಗಿ ಆಹಾರ ನೀಡಬೇಡಿ: ಮಗುವಿಗೆ ಅತಿಯಾಗಿ ಹಾಲುಣಿಸುವುದನ್ನು ನೀವು ತಪ್ಪಿಸಬೇಕು. ಮಗು ಹೊಟ್ಟೆ ತುಂಬಿದ ಚಿಹ್ನೆಗಳನ್ನು ತೋರಿಸಿದಾಗ, ಅವುಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರಿಗೆ ಹಾಲುಣಿಸುವುದನ್ನು ನಿಲ್ಲಿಸಬೇಕು. ಹೊಟ್ಟೆ ತುಂಬಿದ ನಂತರ, ಮಗುವಿಗೆ ಹೆಚ್ಚು ಹಾಲು ಅಥವಾ ಯಾವುದೇ ಆಹಾರ ನೀಡುವ ಅವಶ್ಯಕತೆ ಇಲ್ಲ.
ಇದನ್ನು ಸಹ ನೆನಪಿನಲ್ಲಿಡಿ: ಮಗುವಿನ ಘನ ಆಹಾರದಲ್ಲಿ ಆರೋಗ್ಯಕರ ಆಹಾರ ಸೇರಿಸಿ. ಇದು ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಧಾನ್ಯಗಳು ಮತ್ತು ಒಣ ಹಣ್ಣುಗಳನ್ನು ಒಳಗೊಂಡಿದೆ. ದ್ವಿದಳ ಧಾನ್ಯಗಳು ಪ್ರೋಟೀನ್, ಕಬ್ಬಿಣ, ಜೀವಸತ್ವಗಳು, ಖನಿಜಗಳು ಮತ್ತು ಜೈವಿಕ ಸಕ್ರಿಯ ವಸ್ತುಗಳನ್ನು ಹೊಂದಿದ್ದರೆ, ಧಾನ್ಯಗಳು ಫೈಬರ್, ವಿಟಮಿನ್ ಬಿ, ಸತು, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಅನ್ನು ಹೊಂದಿರುತ್ತವೆ. ಫೈಬರ್ ಸಹಾಯದಿಂದ, ಮಗುವಿನ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸತು ಮತ್ತು ಮೆಗ್ನೀಸಿಯಮ್ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯಗಳಿಗೆ ಸಹಾಯ ಮಾಡುತ್ತದೆ.
ಆಟವಾಡಲು ಸಮಯ ನೀಡಿ: ಮಕ್ಕಳು ದೈಹಿಕವಾಗಿ ಸಕ್ರಿಯವಾಗಿರುವುದು (physically active) ಬಹಳ ಮುಖ್ಯ. ಮಗುವಿನ ದೈನಂದಿನ ದಿನಚರಿಯಲ್ಲಿ ವ್ಯಾಯಾಮ ಮತ್ತು ಆಟದ ಸಮಯವನ್ನು ಹೊಂದಿರುವುದು ಮುಖ್ಯ. ನಿಮ್ಮ ಮಗು ಅವರಾಗಿಯೇ ಕುಳಿತುಕೊಳ್ಳಲು ಕಲಿತಾಗ, ಅವರಿಗೆ ಕುಟುಂಬದೊಂದಿಗೆ ಆಹಾರವನ್ನು ನೀಡಿ. ಇದು ಮಗುವಿನಲ್ಲಿ ಉತ್ತಮ ಆಹಾರ ಪದ್ಧತಿಗೆ ಕಾರಣವಾಗುತ್ತದೆ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಮಗುವಿಗೆ ಬೊಜ್ಜಿನ ಸಮಸ್ಯೆ ಕಾಡೋದಿಲ್ಲ.