ಕೆಲವರ ಶೂಸ್ ಸ್ಮೆಲ್ ಸಹಿಸೋಕೇ ಆಗೋಲ್ಲ, ಅದಕ್ಕಿಲ್ಲಿದೆ ಮದ್ದು

First Published Dec 1, 2020, 1:08 PM IST

ಕೆಲವರಿಗೆ ವಿಪರೀತ ಬೆವರುವ ಸಮಸ್ಯೆ ಇರುತ್ತದೆ. ಅದೆಷ್ಟು ಬೆವರುತ್ತದೆ ಎಂದರೆ ಕಾಲಿನ ಅಡಿ ಕೂಡ ಬೆವರಿ ಮತ್ತೆ ವಾಸನೆ ಬರಲು ಆರಂಭವಾಗುತ್ತದೆ. ಇಂತಹ ಸಮಸ್ಯೆ ನಿಮಗೂ ಸಹ ಉಂಟಾಗಿ ನೀವು ತೀವ್ರ ಮುಜುಗರಕ್ಕೆ ಒಳಗಾಗಿದ್ದೀರಾ? ಹಾಗಿದ್ರೆ ನೀವು ಟ್ರೈ ಮಾಡಲೇಬೇಕಾದ ಕೆಲವೊಂದಿಷ್ಟು ಟ್ರಿಕ್ಸ್ ಗಳು ಇಲ್ಲಿವೆ. ಇವುಗಳನ್ನು ನೀವು ಪ್ರತಿದಿನ ಪಾಲಿಸುವುದರಿಂದ ಬೆವರಿನ ಮತ್ತು ಪಾದದ ವಾಸನೆ ಸಮಸ್ಯೆ ನಿವಾರಣೆಯಾಗಿ ಸಮಸ್ಯೆ ದೂರವಾಗುತ್ತದೆ. 

ಬೆವರು ವಾಸನೆ ಸಮಸ್ಯೆ ನಿವಾರಣೆಗೆ ನೀವು ಏನೆಲ್ಲಾ ಮಾಡಬೇಕು ನೋಡಿ...ಪ್ರತಿ ನಿತ್ಯ ಕೈ ಮತ್ತು ಕಾಲುಗಳನ್ನು ಸಾಬೂನು ಹಚ್ಚಿ ಬಿಸಿ ನೀರಿನಿಂದ ತೊಳೆಯಬೇಕು. ನಂತರ ಒಣಗಿದ ಬಟ್ಟೆಯಿಂದ ಚೆನ್ನಾಗಿ ಡ್ರೈ ಮಾಡಿ.
undefined
ಸಾಕ್ಸ್ ಧರಿಸುವವರು ದಿನ ನಿತ್ಯವೂ ತೊಳೆದ ಸಾಕ್ಸ್ ಗಳನ್ನೇ ಉಪಯೋಗಿಸಬೇಕು. ಬೆವರಿನಿಂದ ಉಂಟಾಗುವ ಕೊಳೆ ಚರ್ಮಕ್ಕೆ ಅಂಟಿಕೊಳ್ಳುವುದರಿಂದ ಕೊಳೆಯಾದ ಸಾಕ್ಸ್ ಹಾಕಿಕೊಳ್ಳಬಾರದು. ಇದರಿಂದ ಅಲರ್ಜಿ ಉಂಟಾಗುತ್ತದೆ.
undefined
ಬೆಚ್ಚಗಿನ ನೀರಿನಲ್ಲಿ ವಿನೆಗರ್ ಬೆರೆಸಿ ಅದರಲ್ಲಿ ಸುಮಾರು 15ರಿಂದ 30 ನಿಮಿಷಗಳ ಕಾಲ ಕೈಗಳು ಮತ್ತು ಪಾದಗಳನ್ನಿರಿಸಿ. ಇದು ಬ್ಯಾಕ್ಟೀರಿಯಾವನ್ನು ಕೊಂದು ಕಾಲಿನ ವಾಸನೆ ನಿವಾರಿಸುತ್ತದೆ.
undefined
ಸ್ನಾನಕ್ಕೆ ಮೊದಲು ಕೈ ಮತ್ತು ಕಾಲುಗಳಿಗೆ ಅಲೀವ್ ಅಥವಾ ತೆಂಗಿನಣ್ಣೆ ಹಚ್ಚಿಕೊಂಡು ಮಸಾಜ್ ಮಾಡಬೇಕು. ಬಳಿಕ ಒಣ ಟವಲ್ ತೆಗೆದುಕೊಂಡು ಕಾಲು ಮತ್ತು ಕೈಗಳನ್ನು ಉಜ್ಜಿಕೊಳ್ಳಬೇಕು.
undefined
ಬೆಚ್ಚಗಿನ ನೀರಿನಲ್ಲಿ ಬೇಕಿಂಗ್ ಸೋಡಾ ಕರಗಿಸಿ,15-20 ನಿಮಿಷಗಳ ಕಾಲ ಪಾದಗಳನ್ನು ಮುಳುಗಿಸಿ. ಇದಕ್ಕೆ ಬೆವರನ್ನು ಕಡಿಮೆ ಮಾಡಿ ವಾಸನೆ ನಿವಾರಣೆ ಮಾಡುವ ಶಕ್ತಿ ಇದೆ.
undefined
ಪೌಡರನ್ನು ಚರ್ಮಕ್ಕೆ ಮಾತ್ರವಲ್ಲ ಅಂಗೈ, ಕಾಲಿನ ಕೆಳಭಾಗಕ್ಕೂ ಹಚ್ಚಿಕೊಳ್ಳಬೇಕು. ಇದು ಬೆವರುವುದನ್ನು ತಡೆಯಲು ನೆರವಾಗುತ್ತದೆ.
undefined
ಅರ್ಧ ಬಕೆಟ್ ಉಗುರು ಬಿಸಿ ನೀರಿಗೆ ಸ್ವಲ್ಪ ವಿನೇಗರ್ ಮತ್ತು ಎಪ್ಸಂ ಉಪ್ಪನ್ನು ಸೇರಿಸಿ ಕೈ ಮತ್ತು ಕಾಲುಗಳನ್ನು ಅದರಲ್ಲಿಡಬೇಕು. ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಬೇಬಿ ಆಯಿಲ್ ಹಚ್ಚಿಕೊಳ್ಳಬೇಕು. ಈ ರೀತಿ ಆಗಾಗ ಮಾಡುತ್ತಿರುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
undefined
ಬ್ಲಾಕ್ ಟೀ ಬ್ಯಾಗ್‌ಗಳನ್ನು ಬಿಸಿನೀರಿನಲ್ಲಿ ಮುಳುಗಿಸಿ ಬಳಿಕ ಅವನ್ನು ಹೊರತೆಗೆದು ತಣ್ಣಗಾದ ಬಳಿಕ ಪಾದಗಳ ಮೇಲಿರಿಸಿಕೊಳ್ಳಿ.ಇದರಿಂದ ಬೆವರುವ ಸಮಸ್ಯೆ ಕಡಿಮೆಯಾಗುತ್ತದೆ.
undefined
ಇಡೀ ಪಾದವನ್ನು ಆವರಿಸುವ ಪಾದರಕ್ಷೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ನಡು ನಡುವೆ ಚಪ್ಪಲಿಯನ್ನು ಬಿಟ್ಟು ಬರಿಗಾಲಿನಲ್ಲಿ ಅಡ್ಡಾಡಿ.
undefined
ಒಂದು ವೇಳೆ ಕೆಟ್ಟ ವಾಸನೆ ಬಂದರೆ ಕಾಲನ್ನು ತೊಳೆದುಕೊಂಡು ಬಟ್ಟೆಯಿಂದ ಉಜ್ಜಿಕೊಳ್ಳಬೇಕು. ಈ ವಿಧಾನಗಳನ್ನು ಅನುಸರಿಸಿದ ಬಳಿಕವೂ ಸಮಸ್ಯೆ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
undefined
ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಮಸಾಲೆ ಹೆಚ್ಚಿರುವ ಆಹಾರವನ್ನು ತ್ಯಜಿಸಬೇಕು.
undefined
ಪ್ರತಿ ದಿನ 20 ನಿಮಿಷಗಳ ಕಾಲ ನಿಮ್ಮ ಕೈಗಳು ಮತ್ತು ಕಾಲುಗಳನ್ನು ತಣ್ಣೀರಿನಲ್ಲಿ ಮುಳುಗಿಸಿ. ಇದು ಬಹುಮಟ್ಟಿಗೆ ಸಮಸ್ಯೆಯನ್ನು ಬಗೆಹರಿಸುತ್ತದೆ.
undefined
ಹತ್ತಿಯಿಂದ ಪನ್ನೀರನ್ನು ನಿಮ್ಮ ಅಂಗೈಗಳು ಮತ್ತು ಪಾದಗಳಿಗೆ ಲೇಪಿಸಿಕೊಳ್ಳಿ. ಅದು ನಿಮ್ಮ ಚರ್ಮಕ್ಕೆ ತಂಪಿನ ಅನುಭವವನ್ನೂ ನೀಡುತ್ತದೆ
undefined
click me!