ರಾತ್ರಿಯಲ್ಲಿ ಎಲ್ಲಾ ದೈನಂದಿನ ದಿನಚರಿಗಳನ್ನು (daily routine) ಮುಗಿಸಿದ ನಂತರ, ವಾಶ್ ರೂಮ್ ಹೋಗಿ ಬಂದು, ನೀರು ಕುಡಿದು, ದೀಪಗಳನ್ನು ಆಫ್ ಮಾಡಿ ನಿಮ್ಮ ಬೆಡ್ ರೂಮ್ ಸೇರ್ತೀರಿ, ಆದರೆ ಅಲ್ಲಿ ಮಲಗುವ ಬದಲು, ಮೊಬೈಲ್ನೊಂದಿಗೆ ಸಮಯ ಕಳೆಯಲು ಪ್ರಾರಂಭಿಸುತ್ತೀರಿ. ಒಂದು ಸಾಮಾಜಿಕ ಮಾಧ್ಯಮ (social media) ವೇದಿಕೆಯಿಂದ ಇನ್ನೊಂದಕ್ಕೆ ಬದಲಾಯಿಸುವುದು ಮತ್ತು ನಂತರ ಕಾಮೆಂಟ್ ಮಾಡೋದು, ರೀಲ್ಸ್ ನೋಡೋದು, ವಿಡಿಯೋ ನೋಡೋದು. ಇದು ಮುಂದುವರೆಯುತ್ತಲೇ ಇರುತ್ತೆ. ಇದು ನಿಮ್ಮೊಬ್ಬರದೇ ಅಲ್ಲ, ಸುಮಾರು 80 ಶೇಕಡಾದಷ್ಟು ಜನರು ಮಾಡೋದು ಇದನ್ನೆ.