ಮಹಿಳೆಯೊಬ್ಬರು ಕೇವಲ ಎರಡು ನಿಮಿಷದಲ್ಲಿ ಹೇಗೆ ತಲೆನೋವು ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಹೇಳಿದ್ದಾರೆ. ಮಹಿಳೆಯ ಈ ವಿಡಿಯೋ ವೈರಲ್ ಆಗ್ತಿದೆ.
27
ತಲೆನೋವು ಕಡಿಮೆ ಮಾಡಿಕೊಳ್ಳಲು ವಿವಿಧ ಔಷಧಿಯನ್ನು ಬಳಕೆ ಮಾಡುತ್ತಾರೆ. ಜಂಡು ಬಾಮ್ ರೀತಿಯ ಹಲವು ವಸ್ತುಗಳು ಸಹ ಮಾರುಕಟ್ಟೆಯಲ್ಲಿ ಸಿಗುತ್ತವೆ. ಜನರು ತಮ್ಮ ನಂಬಿಕೆಗೆ ಅರ್ಹವಾದ ಬಾಮ್ ಬಳಕೆ ಮಾಡುತ್ತಾರೆ. ಒಂದಿಷ್ಟು ಜನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.
37
ತಲೆನೋವು ಕಡಿಮೆ ಮಾಡಿಕೊಳ್ಳಲು ಮಹಿಳೆ ಹೇಳಿರುವ ಪರಿಹಾರ ತುಂಬಾ ಸಿಂಪಲ್ ಅಗಿದ್ದು, ಎಲ್ಲರೂ ಮನೆಯಲ್ಲಿಯೇ ಪ್ರಯತ್ನಿಸಬಹುದು. ಇದಕ್ಕೆ ಯಾವುದೇ ಔಷಧಿ, ಜೆಲ್ ಬಳಸಲ್ಲ. ಮಹಿಳೆ ಹೇಳುವ ರೀತಿ ಮಾಡಿದ್ರೆ ಎರಡೇ ನಿಮಿಷದಲ್ಲಿ ತಲೆನೋವು ಕಡಿಮೆ ಆಗುತ್ತಂತೆ.
47
ಮಹಿಳೆ ಪ್ರಕಾರ ತಲೆನೋವು ಕಡಿಮೆ ಮಾಡಲು ಎರಡು ಐಸ್ ಕ್ಯುಬ್‌ಗಳು ಬೇಕಾಗುತ್ತವೆ. ಈ ಎರಡು ಕ್ಯುಬ್‌ಗಳು ತ್ವರಿತಗತಿಯಲ್ಲಿ ತಲೆನೋವು ಕಡಿಮೆ ಆಗುತ್ತದೆ. ಸದ್ಯ ಮಹಿಳೆ ಹೇಳಿದ ಈ ಪರಿಹಾರ ಸೋಶಿಲಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
57
ಏನದು ಪರಿಹಾರ?
ಎರಡು ಐಸ್ ಕ್ಯುಬ್‌ಗಳನ್ನು ತಟ್ಟೆಯಲ್ಲಿರಿಸಿಕೊಳ್ಳಿ. ಈ ಎರಡು ಐಸ್ ಕ್ಯುಬ್ ಮೇಲೆ ನಿಮ್ಮ ಹೆಬ್ಬರಳನ್ನು ಇರಿಸಿ ಮಸಾಜ್ ರೀತಿ ಮಾಡಬೇಕು. ಇದೇ ರೀತಿ ಎರಡು ನಿಮಿಷ ಮಾಡುವರಿಂದ ತಲೆನೋವು ಕಡಿಮೆಯಾಗುತ್ತೆ ಎಂದು ಮಹಿಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
67
ನೀವು ತಲೆನೋವಿನಿಂದ ಬಳಲುತ್ತಿದ್ದರೆ ಇದನ್ನು ಟ್ರೈ ಮಾಡಬಹುದು. ಯಾವುದೇ ಔಷಧಿ ಇಲ್ಲದ ಕಾರಣ ಸೈಡ್ ಎಫೆಕ್ಟ್ ಇರುವುದಿಲ್ಲ. ಈ ರೀತಿ ಮಾಡುವದರಿಂದ ನನ್ನ ತಲೆನೋವು ಕಡಿಮೆಯಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
77
ಹೆಬ್ಬರಳಿನ ನರಗಳು ನೇರವಾಗಿ ತಲೆ ಭಾಗಕ್ಕೆ ಕನೆಕ್ಟ್ ಆಗಿರುತ್ತದೆ. ಐಸ್ ಮೇಲೆ ಹೆಬ್ಬರಳು ಇರಿಸಿ ಮಸಾಜ್ ಮಾಡಿದ್ರೆ ತಲೆನೋವು ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದು ಓರ್ವ ನೆಟ್ಟಿಗ ಕಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.