ಅಲೋವೆರಾ ಆರೋಗ್ಯಕ್ಕೆ ಒಳ್ಳೇದು ನಿಜ…ಆದ್ರೆ ತೊಂದ್ರೆನೂ ಇದೆ

First Published Jul 7, 2022, 5:17 PM IST

ಅಲೋವೆರಾ (aloe vera) ಎಷ್ಟೊಂದು ಪ್ರಯೋಜನಗಳನ್ನು ಹೊಂದಿದೆ ಅನ್ನೋದು ನಿಮಗೂ ಗೊತ್ತು. ಇದರ ರಸದಿಂದ ಹಿಡಿದು ಜೆಲ್ ವರೆಗೆ, ಇದು ನಮ್ಮ ಆರೋಗ್ಯ (Health) ಮತ್ತು ಸೌಂದರ್ಯ (Beauty) ಹೆಚ್ಚಿಸುವಲ್ಲಿ ಸಹಾಯ ಮಾಡುತ್ತೆ. ಆದಾಗ್ಯೂ, ಅಲೋವೆರಾವನ್ನು ಸರಿಯಾಗಿ ಸೇವಿಸದಿರೋದ್ರಿಂದ ಕೆಲವು ಗಂಭೀರ ಸಮಸ್ಯೆಗಳು ಉಂಟಾಗುತ್ತವೆ.  ಅವುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾನೆ ಮುಖ್ಯ.

ಅಲೋವೆರಾ ಅಥವಾ ಅದರ ರಸದ ಪ್ರಯೋಜನಗಳ ಬಗ್ಗೆ ನೀವು ಈಗಾಗಲೆ ತಿಳಿದಿರಬಹುದು. ಈ ಕಾರಣದಿಂದಾಗಿ, ಜನರು ಅದನ್ನು ತಮ್ಮ ಆಹಾರದಲ್ಲಿ ಇದನ್ನು ಸೇರಿಸಲು ಸಹ ಹಿಂದೆ ಮುಂದೆ ನೋಡೋದಿಲ್ಲ. ಔಷಧೀಯ ಗುಣಗಳನ್ನು ಹೊಂದಿರುವ ಅಲೋವೆರಾ ಬಳಕೆ ಹೆಚ್ಚಾಗಿದೆ. ಅಲೋವೆರಾ ಸೇವನೆಯು ಕೆಲವು ಸಂದರ್ಭಗಳಲ್ಲಿ ಹಾನಿಕಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಇಲ್ಲಾಂದ್ರೆ ಮುಂದೆ ಓದಿ… 

ಯಾವುದನ್ನಾದರೂ ಬಳಸುವ ಮೊದಲು, ಅದರ ಅನುಕೂಲಗಳು ಅಥವಾ ಅನಾನುಕೂಲಗಳನ್ನು ತಿಳಿದುಕೊಳ್ಳುವುದು ತುಂಬಾನೆ ಮುಖ್ಯ, ಇದರಿಂದ ಅದನ್ನು ಸೀಮಿತ ಪ್ರಮಾಣದಲ್ಲಿ ಬಳಸಬಹುದು. ಲ್ಯಾಟೆಕ್ಸ್ (latex) ಅಲೋವೆರಾದಲ್ಲಿ ಕಂಡುಬರುತ್ತದೆ ಮತ್ತು ಇದನ್ನು ರಸದಲ್ಲಿ ಅಥವಾ ಯಾವುದೇ ರೂಪದಲ್ಲಿ ಸೇವಿಸಿದ್ರೆ, ಹೊಟ್ಟೆಯಲ್ಲಿ ನೋವು ಮತ್ತು ಅಲರ್ಜಿಗಳಂತಹ ಸಮಸ್ಯೆ ಉಂಟಾಗುತ್ತೆ. ಅಲೋವೆರಾ ಯಾವಾಗ ಹಾನಿಕಾರಕ ಎಂದು ತಿಳಿಯೋಣ.

ಅಲೋವೆರಾದಿಂದ ಉಂಟಾಗುವ ಹಾನಿ
ಮಯೋಕ್ಲಿನಿಕ್ ಪ್ರಕಾರ, ಅಲೋವೆರಾದ ಅತಿಯಾದ ಸೇವನೆಯು ಹಾನಿಕಾರಕವಾಗಿದೆ. ಕೆಲವು ದಿನಗಳವರೆಗೆ 1 ಗ್ರಾಂ ಗಿಂತ ಹೆಚ್ಚು ಬಳಸಿದರೆ, ಮೂತ್ರಪಿಂಡ ವೈಫಲ್ಯ (kidney failure) ಉಂಟಾಗಬಹುದು.

ಅಲೋವೆರಾ ಲ್ಯಾಟೆಕ್ಸ್ ನ ಅತಿಯಾದ ಸೇವನೆಯು ಕ್ಯಾನ್ಸರ್ ಗೆ (cancer) ಕಾರಣವಾಗಬಹುದು. ಇದಲ್ಲದೆ, ಅತಿಸಾರ, ಹೊಟ್ಟೆ ನೋವಿನಂತಹ ಸಮಸ್ಯೆ ಸಹ ಉಂಟಾಗಬಹುದು. ಅಲೋವೆರಾ ಅಲರ್ಜಿ ಹೊಂದಿರುವವರು ಸಹ ಇದನ್ನು ಸೇವಿಸುವುದನ್ನು ತಪ್ಪಿಸಬೇಕು.

ಅನೇಕ ಜನರು ಚರ್ಮದ ಅಲರ್ಜಿಗಳು, ಕಣ್ಣುಗಳು ಕೆಂಪಾಗುವುದು (red eye) ಮತ್ತು ದದ್ದುಗಳು, ಚರ್ಮದ ಮೇಲೆ ಕಿರಿಕಿರಿಯಂತಹ ರೋಗಲಕ್ಷಣಗಳನ್ನು ಎದುರಿಸಬಹುದು. ಆದುದರಿಂದ ಇದನ್ನು ಬಳಕೆ ಮಾಡುವ ಮುನ್ನ ಎಚ್ಚರಿಕೆ ವಹಿಸೋದು ಮುಖ್ಯ.

ಇದನ್ನು ಅತಿಯಾಗಿ ಸೇವಿಸೋದ್ರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ  (blood sugar level) ಕಡಿಮೆಯಾಗುತ್ತೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೀರಿದರೆ, ಅದು ಆರೋಗ್ಯಕ್ಕೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಆದುದರಿಂದ ಎಚ್ಚರಿಕೆಯಿಂದ ಬಳಸಿ.

ಅಲೋವೆರಾದಲ್ಲಿರುವ ಲೆಕ್ಸೇಟೀವ್ ಪರಿಣಾಮಗಳಿಂದಾಗಿ ಕೆಲವು ಜನರು ಅಲರ್ಜಿ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತೆ. ಇದನ್ನು ಅತಿಯಾಗಿ ಸೇವಿಸಿದ್ರೆ, ದೇಹದಲ್ಲಿ ನಿರ್ಜಲೀಕರಣವೂ ಸಂಭವಿಸಬಹುದು.
ಇದು ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ.

ಗರ್ಭಿಣಿಯರು (pregnant) ಇದನ್ನು ಸೇವಿಸಬಾರದು, ಇಲ್ಲದಿದ್ದರೆ, ಸಂಕೋಚನಗಳು ಅಕಾಲಿಕವಾಗಿ ಪ್ರಾರಂಭವಾಗಬಹುದು. ಇದು ಮಗುವಿಗೆ ಜನ್ಮ ನೀಡುವಲ್ಲಿ ತೊಂದರೆಗಳನ್ನು ಸಹ ಉಂಟು ಮಾಡಬಹುದು. ಆದುದರಿಂದ ಗರ್ಭಿಣಿಯರು ಸಾಧ್ಯವಾದಷ್ಟು ಅಲೋವೆರಾವನ್ನು ಅವಾಯ್ಡ್ ಮಾಡೋದು ಉತ್ತಮ.

click me!