ಮಳೆಯಲಿ ಜೊತೆಯಲಿ, ಸ್ಕಿನ್, ಹೇರ್ ಕಡೆ ಇರಲಿ ಗಮನ

Published : Jun 22, 2022, 05:22 PM IST

ಕೂದಲು ಉದುರೋದು (Hair Fall) ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಬದಲಾಗುತ್ತಿರುವ ಹವಾಮಾನದಲ್ಲಿ, ಈ ಸಮಸ್ಯೆ ಹೆಚ್ಚಾಗುತ್ತೆ. ಇನ್ನು ಮಳೆಗಾಲದಲ್ಲಂತೂ ಹೇಳೋದೆ ಬೇಡ, ಕೂದಲು ವೇಗವಾಗಿ ಉದುರುತ್ತೆ. ಹೆಚ್ಚುತ್ತಿರುವ ಪೊಲ್ಲ್ಯೂಷನ್ ಮತ್ತು ಕೆಮಿಕಲ್ಸ್ ಹೇರ್ ಪ್ರಾಡಕ್ಟ್ಸ್ ಬಳಕೆಯು ಸಹ ಕೂದಲು ಉದುರುವಿಕೆಗೆ ಕಾರಣವಾಗುತ್ತೆ. 

PREV
18
ಮಳೆಯಲಿ ಜೊತೆಯಲಿ,  ಸ್ಕಿನ್, ಹೇರ್ ಕಡೆ  ಇರಲಿ ಗಮನ

ನಿಮ್ಮ ಕೂದಲು ಸಹ ಹೆಚ್ಚಾಗಿ ಉದುರುತ್ತಿದ್ದರೆ, ನೀವು ಟೆನ್ಷನ್ ಮಾಡಬೇಡಿ. ಸರಿಯಾದ ಆರೈಕೆಯಿಂದ ಇದನ್ನು ಕಡಿಮೆ ಮಾಡ್ಬಹುದು. ನೀವು ಕೂಡ ಕೂದಲು ಉದುರುವಿಕೆಯಿಂದ(Hair fall) ತೊಂದರೆಗೀಡಾಗಿದ್ರೆ, ನಿಮ್ಮ ಕೂದಲನ್ನು ಆರೋಗ್ಯಕರ ಮತ್ತು ಸ್ಟ್ರಾಂಗ್ ಆಗಿಸಲು ಕೆಲವು ಹೋಂ ರೆಮಿಡೀಸ್ ಇಲ್ಲಿದೆ ನೋಡಿ. ಇದು ನಿಮ್ಮ ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿವಾರಿಸುತ್ತೆ.

28

ಕೂದಲು ಉದುರುವಿಕೆಗೆ ಕಾರಣ
ಅಸಮತೋಲತ ಆಹಾರ ಸೇವನೆ ಮತ್ತು ಹದಗೆಡುತ್ತಿರುವ ಲೈಫ್ ಸ್ಟೈಲ್  
ಹೆಚ್ಚಿದ ಮಾನಸಿಕ ಒತ್ತಡ
ಹೆಚ್ಚುತ್ತಿರುವ ವಯಸ್ಸಿನಲ್ಲಿ ಹಾರ್ಮೋನ್ ಬದಲಾವಣೆ
ಮೆಡಿಸಿನಲ್ ಸೈಡ್ ಎಫೆಕ್ಟ್ಸ್ (Medicinal Side effects)

38

ಥೈರಾಯ್ಡ್ ಸಮಸ್ಯೆ (Thyroid)
ಜಿಂಕ್, ಪ್ರೋಟೀನ್ ಬಯೋಟಿನ್ ಕೊರತೆ
ಫಂಗಲ್ ಇನ್ಫೆಕ್ಷನ್ (Fungal Infection) ಅಥವಾ ಇನ್ನಾವುದೇ ಸೋಂಕು
ರೇಡಿಯೋ ಥೆರಪಿ ಅಥವಾ ಕೀಮೋಥೆರಪಿ
ಇವೆಲ್ಲವೂ ಕೂದಲು ಉದುರುವಿಕೆಗೆ ಕಾರಣವಾಗುತ್ತೆ.

48
ಕೂದಲು ಉದುರುವ ಸಮಸ್ಯೆ ತಡೆಗಟ್ಟಲು ಮನೆಮದ್ದುಗಳು

ಕೂದಲು ತೊಳೆಯುವ ಮೊದಲು ಚೆನ್ನಾಗಿ ಎಣ್ಣೆ ಹಚ್ಚಿ. ತೆಂಗಿನೆಣ್ಣೆ(Coconut oil), ಬಾದಾಮಿ ಎಣ್ಣೆ, ಹರಳೆಣ್ಣೆ ಅಥವಾ ನೆಲ್ಲಿಕಾಯಿ ಎಣ್ಣೆಯಿಂದ ಮಸಾಜ್ ಮಾಡಿ. ತಲೆಗೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಎಣ್ಣೆ ಹಚ್ಚಿ ಮಸಾಜ್ ಮಾಡಿದ್ರೆ ಕೂದಲು ಸ್ಟ್ರಾಂಗ್ ಆಗುತ್ತೆ.

58

ಕೂದಲನ್ನು ಆರೋಗ್ಯಕರವಾಗಿಡಲು ನೆಲ್ಲಿಕಾಯಿಯನ್ನು ಆಹಾರದಲ್ಲಿ ಸೇರಿಸಿ. ವಿಟಮಿನ್ ಸಿ(Vitamin C) ಸಮೃದ್ಧವಾಗಿರುವ ನೆಲ್ಲಿಕಾಯಿ ತಿನ್ನೋದರಿಂದ ಕೂದಲು ವೇಗವಾಗಿ ಬೆಳೆಯುತ್ತೆ ಮತ್ತು ಕೂದಲಿನ ಸಮಸ್ಯೆ ನಿವಾರಿಸುತ್ತೆ.ಕೂದಲು ಆರೋಗ್ಯವಾಗಿರಲು ಇದು ಸಹಕಾರಿ.

68

ಕೂದಲು ಉದುರಿ ಹೋಗುತ್ತಿರೋ ಸಮಸ್ಯೆ ಕಡಿಮೆ ಮಾಡಲು ಮೆಂತ್ಯ ಬಳಸಿ. ಮೆಂತ್ಯ ಎಣ್ಣೆ ಅಥವಾ ಮೆಂತ್ಯದಿಂದ ಮಾಡಿದ ಹೇರ್ ಪ್ಯಾಕ್ ಹಚ್ಚಿ. ಇದು ಕೂದಲಿನ ಮರು ಬೆಳವಣಿಗೆಗೆ ಕಾರಣವಾಗುತ್ತೆ. ಮೆಂತ್ಯ  ಪ್ರೋಟೀನ್ (Protein)ಮತ್ತು ನಿಕೋಟಿನಿಕ್ ಆಮ್ಲ ಹೊಂದಿದೆ, ಇದು ಕೂದಲಿಗೆ ಒಳ್ಳೆಯದು.

78

ಕೂದಲು ಉದುರುವಿಕೆ ಮತ್ತು ಬಿಳಿಯಾಗುವಿಕೆಯ ಸಮಸ್ಯೆಯಿಂದ ಪರಿಹಾರ ಪಡೆಯಲು ಈರುಳ್ಳಿ ರಸ (Onion juice) ಬಳಸಿ. ಈರುಳ್ಳಿ ರಸ ಹಚ್ಚೋದರಿಂದ ಕೂದಲು ಆರೋಗ್ಯಕರವಾಗಿರುತ್ತೆ. ಇದು ಕೂದಲು ಉದುರುವ ಸಮಸ್ಯೆ ಕಡಿಮೆ ಮಾಡುತ್ತೆ. 

88

ಕೂದಲು ನಿರ್ಜೀವ ಮತ್ತು ಒರಟಾಗಿದ್ದಾಗ ವೇಗವಾಗಿ ಉದುರುತ್ತೆ. ಅದಕ್ಕಾಗಿ ಅಲೋವೆರಾ ಜೆಲ್ (Aloevera gel)ಕೂದಲಿಗೆ ಹಚ್ಚಿ. ಇದು ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತೆ ಮತ್ತು ಕೂದಲು ಉದುರುವಿಕೆ ಕಡಿಮೆ ಮಾಡುತ್ತೆ. ಇದು ಕೂದಲಿನ ಪಿಎಚ್ ಮಟ್ಟವನ್ನು ಉತ್ತಮವಾಗಿರಿಸುತ್ತೆ.

Read more Photos on
click me!

Recommended Stories