ಡ್ರೈ ಸ್ಕಾಲ್ಪ್ ಸಮಸ್ಯೆ ಗುಣಪಡಿಸುವ ಮನೆಮದ್ದುಗಳು!!

Suvarna News   | Asianet News
Published : Mar 02, 2021, 04:35 PM IST

ಚಳಿಗಾಲ ಇನ್ನೇನು ಮುಗಿಯುವುದು, ಆದರೆ ಚರ್ಮ ಮತ್ತು ಕೂದಲ ಮತ್ತೊಂದು ಸಮಸ್ಯೆ ಇನ್ನೇನು ಆರಂಭವಾಗುತ್ತದೆ. ಚಳಿಗಾಲದಿಂದ ಬೇಸಿಗೆ ಕಾಲ ಆರಂಭವಾಗುವ ಈ ಬದಲಾವಣೆ ಒಣ ಚರ್ಮ ಹೊಂದಿರುವವರಿಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಚಳಿಗಾಲದಲ್ಲಿ ಹೆಚ್ಚಿನವರು ಎದುರಿಸಬೇಕಾದ ಸಮಸ್ಯೆಯೆಂದರೆ, ಒಣ ತಲೆ ಬುರುಡೆ ಸಮಸ್ಯೆ. ಆದರೆ ಈ ಸಮಸ್ಯೆಯನ್ನು ಕೆಲವು ಮನೆಮದ್ದುಗಳ ಮೂಲಕ ಪರಿಹರಿಸಬಹುದು. ಇಲ್ಲಿದೆ ಡ್ರೈ ಸ್ಕಾಲ್ಪ್ ಸಮಸ್ಯೆ ನಿವಾರಿಸುವ ಮನೆಮದ್ದುಗಳು... 

PREV
18
ಡ್ರೈ ಸ್ಕಾಲ್ಪ್ ಸಮಸ್ಯೆ ಗುಣಪಡಿಸುವ ಮನೆಮದ್ದುಗಳು!!

ಎಣ್ಣೆ
ಯಾವುದೇ ರೀತಿಯ ಎಣ್ಣೆಯು ಹೆಚ್ಚಾಗಿ ಒಣಗಿದ ನೆತ್ತಿ ಮೇಲೆ ಅದ್ಭುತವಾಗಿ ಕೆಲಸ ಮಾಡುತ್ತದೆ. ತೆಂಗಿನಕಾಯಿ, ಬಾದಾಮಿ, ಆಲಿವ್, ಜೊಜೊಬಾ, ಅರ್ಗನ್ ಇತ್ಯಾದಿ. ಮಾಡಲು ಸಾಕಷ್ಟು ಆಯ್ಕೆಗಳಿವೆ. ಅತ್ಯುತ್ತಮವಾದುದ್ದನ್ನು  ಆಯ್ಕೆ ಮಾಡಿಕೊಳ್ಳಬಹುದು. 

28

ಎಣ್ಣೆ ತಲೆಗೆ ಮಾಯಿಶ್ಚರೈಸ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ, ಆದರೆ ಇದರಲ್ಲಿರುವ ಪ್ರೋಟೀನ್ ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ.

38

ಅಲೋವೆರಾ
ಇದು ತಲೆಯ ಶುಷ್ಕತೆಯನ್ನು ನಿಭಾಯಿಸಲು ಸಹಾಯ ಮಾಡುವ ಒಂದು ಉತ್ತಮ ನೈಸರ್ಗಿಕ ಪದಾರ್ಥ. ಅಲೋವೆರಾ ಜೆಲ್‌ನಲ್ಲಿ ಉರಿ ಶಮನಕಾರಿ ಗುಣಗಳಿದ್ದು, ಇದು ಒಣ ನೆತ್ತಿ ಸಮಸ್ಯೆಗೆ ಅತ್ಯುತ್ತಮ ಪರಿಹಾರ.

48

ಚರ್ಮದ ಕಿರಿಕಿರಿ ಮತ್ತು ತುರಿಕೆ ತಲೆಹೊಟ್ಟು ಕೂಡ ಶುಷ್ಕತೆಯ ಪರಿಣಾಮವಾಗಿದೆ. ಈ ಸಮಸ್ಯೆಗಳನ್ನು ಎದುರಿಸಲು ಅಲೋವೆರಾ ಮ್ಯಾಜಿಕ್ ಆಗಿ ಕೆಲಸ ಮಾಡಬಹುದು.

58

ಒಣ ನೆತ್ತಿಯಿಂದ ತಲೆಹೊಟ್ಟು ಪ್ರಾರಂಭವಾಗುತ್ತದೆ. ತಲೆಯಲ್ಲಿ ಯಾವುದೇ ರೀತಿಯ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳಿಗೆ ಒಡ್ಡಿಕೊಳ್ಳದಂತೆ ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಇಂತಹ ಸಮಸ್ಯೆಗಳಿಂದ ಮುಕ್ತರಾಗುವುದು ಮತ್ತು  pH ಮಟ್ಟವನ್ನು ಸಮತೋಲನದಲ್ಲಿಡ ಬೇಕಾದರೆ ಆಪಲ್ ಸೈಡರ್ ವಿನೆಗರ್ ಅನ್ನು ಹಚ್ಚಿ. 

68

ವಿನೆಗರ್ ಉರಿಯೂತ ಶಮನಕಾರಿ ಉತ್ಪನ್ನವಾಗಿದೆ, ಇದು ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ. ನೆತ್ತಿಯನ್ನು ಎಕ್ಸ್ ಫೋಲಿಯೇಟ್ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ತುಂಬಾ ಆಮ್ಲೀಯವಾಗಿದೆ, ಆದ್ದರಿಂದ,  ಅದನ್ನು 1:4 ಅನುಪಾತದಲ್ಲಿ ದುರ್ಬಲಗೊಳಿಸಿ ನಂತರ ತಲೆಗೆ ಹಚ್ಚಬೇಕು. 

78

ಮೊಸರು ಎಲ್ಲಾ ಕಾಲದ ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್‌ಗಳಲ್ಲಿ ಒಂದು. ಇದರಲ್ಲಿ ಲ್ಯಾಕ್ಟಿಕ್ ಆಮ್ಲ ಸಮೃದ್ಧವಾಗಿದ್ದು, ಇದು ತಲೆ ಬುರುಡೆಯನ್ನು ಪೋಷಣೆ ಮಾಡಲು ಸಹಾಯ ಮಾಡುತ್ತದೆ. ಇದು ಸತುವನ್ನು ಸಹ ಹೊಂದಿದ್ದು, ಜೀವಕೋಶದ ಮರು ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತದೆ. 

88

ಯಾವ ಮನೆ ಮದ್ದನ್ನು ಬಳಸಲು ಆಯ್ಕೆ ಮಾಡಿಕೊಂಡರೂ, ಯಾವಾಗಲೂ ನೆತ್ತಿಗೆ ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡಿ. ಈ ಪದಾರ್ಥಗಳಿಂದ ಅಲರ್ಜಿಯಾಗುವ ಸಾಧ್ಯತೆಗಳಿರುತ್ತವೆ. ಮೊದಲು ಖಚಿತಪಡಿಸಿಕೊಳ್ಳುವುದು ಮುಖ್ಯ. 

click me!

Recommended Stories